Advertisement

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

08:18 AM Dec 04, 2020 | keerthan |

ಹೊಸದಿಲ್ಲಿ: ಚೀನ ಮೂಲದ ಪಬ್ಜಿ ಆ್ಯಪ್‌ ಅನ್ನು ಕೇಂದ್ರ ಸರಕಾರ ನಿಷೇಧ ಮಾಡಿದ್ದೇ ಮಾಡಿದ್ದು, ಭಾರತೀಯ ಮೂಲದ ಆ್ಯಪ್‌ ಗಳಿಗೆ ಬೇಡಿಕೆ ಜೋರಾಗಿದೆ. ಆ್ಯಪ್‌ ಮೂಲಕ ಯುದ್ಧದ ಆಟವನ್ನು ಆಡಬಹುದಾದ ಪಬ್ಜಿ ನಿಷೇಧವಾದ ಬೆನ್ನಲ್ಲೇ, ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಫೌಜಿ ಎಂಬ ಭಾರತೀಯ ಆ್ಯಪನ್ನು ಬಿಡುಗಡೆಗೊಳಿಸಿದ್ದರು. ಇದೀಗ ಈ ಆ್ಯಪ್ ಗೆ ಬೇಡಿಕೆ ಹೆಚ್ಚಾಗಿದೆ.

Advertisement

ಸದ್ಯ ಅದಿನ್ನೂ ಕಾರ್ಯಾಚರಣೆ ಶುರು ಮಾಡಿಲ್ಲ. ಆದರೆ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಬರೀ ನೋಂದಣಿಗಾಗಿ ನ.30ರಂದು ಬಿಡುಗಡೆ ಮಾಡಲಾಗಿದೆ. ಅಷ್ಟರಲ್ಲೇ ಅದಕ್ಕೆ 10 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿ ದ್ದಾರೆ. ಹೀಗೆಂದು ಈ ಆ್ಯಪನ್ನು ಸಿದ್ಧಪಡಿಸಿರುವ ಗೋಖ್ಯೂ || ಸಿಇಒ ವಿಶಾಲ್‌ ಗೊಂಡಲ್‌ ತಿಳಿಸಿದ್ದಾರೆ.

ಫೌಜಿ ಗೇಮ್ ಬಗ್ಗೆ ಸಪ್ಟೆಂಬರ್ ನಲ್ಲಿ ಘೋಷಣೆ ಮಾಡಲಾಗಿತ್ತು. ಈ ವೇಳೆ ಅಕ್ಟೋಬರ್ ನಲ್ಲಿ ಗೇಮ್ ಬಿಡುಗಡೆ ಮಾಡಲಾಗುವುದು ಎನ್ನಲಾಗಿತ್ತು. ಆದರೆ ನವೆಂಬರ್ ನಲ್ಲಿ ಗೇಮ್ ನ ಮೊದಲ ಟೀಸರ್ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ ಫೌಜಿ ಗೇಮ್ ನ ಮೊದಲ ಎಪಿಸೋಡ್ ಗಾಲ್ವಾನ್ ಕಣಿವೆಯ ಕುರಿತು ಇರಲಿದೆ. ನೇರವಾಗಿ ಗಾಲ್ವಾನ್ ಬಗ್ಗೆ ಹೇಳಿರದೇ ಇದ್ದರೂ, ಅದರ ವಿವರಣೆ ಗಮನಿಸದರೆ ಭಾರತ- ಚೀನಾ ಗಡಿಯ ಗಾಲ್ವಾನ್ ಹೋಲುವಂತಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next