Advertisement

ಫಾತಿಮಾ ಬೇಕರಿ: ಎಲ್ರಿಗೂ ಇಷ್ಟಾರೀ!

02:51 PM Sep 02, 2017 | |

ಆಗ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇದ್ದದ್ದು ಕೋಶಿಸ್‌ ಬೇಕರಿಯೊಂದೇ. ಅಲ್ಲಿ ತಿನಿಸುಗಳ ಬೆಲೆ ಎಲ್ಲರ ಕೈಗೆಟಕುವಂತಿರಲಿಲ್ಲ. ಆಂಗ್ಲೋ ಇಂಡಿಯನ್‌ ಕುಟುಂಬಗಳೂ ಹೆಚ್ಚಾಗಿದ್ದುದರಿಂದ ಬೇಕರಿ ಐಟಂಗಳಿಗೆ ಬೇಡಿಕೆಯೂ ಹೆಚ್ಚಿತ್ತು. ಈ ಸತ್ಯವನ್ನು ಮನಗಂಡು ಪ್ರಾರಂಭವಾದ “ಫಾತಿಮಾ ಬೇಕರಿ’ಗೆ ಈ ಆಗಸ್ಟ್‌ 15ಕ್ಕೆ 60 ವರ್ಷ. ಆದರೀಗ ಮೆಟ್ರೋ ಮಾರ್ಗ ಈ ಬೇಕರಿಯ ಜಾಗವನ್ನು ನುಂಗಿ ಹಾಕಲಿರುವುದು ಬೇಸರದ ಸಂಗತಿ.   

Advertisement

6 ದಶಕ, 3 ತಲೆಮಾರು
ಕೇರಳ ಮೂಲದ ವಿಪಿ ಫ್ರಾನ್ಸಿಸ್‌ ಎಂಬುವರು 1957ರಲ್ಲಿ ಈ ಫಾತಿಮಾ ಬೇಕರಿಯನ್ನು ಲೆನಾರ್ಡ್‌ ರೋಡ್‌ ಜಾನ್ಸನ್‌ ಮಾರ್ಕೆಟ್‌ನಲ್ಲಿ ಪ್ರಾರಂಭಿಸಿದರು. ಆ ವರ್ಷ ಲೇಡಿ ಫಾತಿಮಾ ಸ್ಟಾಚೂ (ಪೋರ್ಚುಗಲ್‌ನಲ್ಲಿರುವ ಮದರ್‌ ಮೇರಿ) ವಿಶ್ವ ಪರ್ಯಟನೆಯಲ್ಲಿದ್ದಾಗ ಬೆಂಗಳೂರಿಗೆ ಬಂದಿತ್ತು. ಫ್ರಾನ್ಸಿಸ್‌ ಅವರು ಅದನ್ನು ನೋಡಲು ಹೋಗಿದ್ದರು. ವಿಗ್ರಹ ನೋಡಿ ಮಾರು ಹೋದ ಅವರು ತಮ್ಮ ಬೇಕರಿಗೆ “ಫಾತಿಮಾ’ ಎಂಬ ಹೆಸರಿಟ್ಟರು. 

ಹೀಗೆ ಆರಂಭವಾದ ಫಾತಿಮಾ ಬೇಕರಿ ಕೆಲವೇ ವರ್ಷಗಳಲ್ಲಿ ಬಹಳಷ್ಟು ಪಾಪ್ಯುಲರ್‌ ಆಯಿತು. ನಂತರ ರಿಚ¾ಂಡ್‌ ಟೌನ್‌ನ ಜಾನ್ಸನ್‌ ಮಾರ್ಕೆಟ್‌ನಲ್ಲಿ ಬೇಕರಿಯ ಜೊತೆಗೆ ಸೂಪರ್‌ ಮಾರ್ಕೆಟ್‌ ಕೂಡ ಆರಂಭಿಸಿದರು. ಈಗ ಅವರ ಮಗ ವಿಎಫ್ ಡೇವಿಡ್‌ ಹಾಗೂ ಮೊಮ್ಮಗ ಬೇಕರಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

 ಈಗ ಬೇಕರಿ ಇರುವ ಜಾಗ ಹಿಂದೆ ಸಿಎಸ್‌ಐ ಎಂಬ ಎನ್‌.ಜಿ.ಓ.ದ್ದಾಗಿತ್ತು. ಸರ್ಕಾರ ಆ ಖಾಲಿ ಜಾಗವನ್ನು ಆಕ್ರಮಿಸುವ ಭಯ ಕಾಡಿದಾಗ, ಆಡಳಿತದವರು ಫ್ರಾನ್ಸಿಸ್‌ಗೆ ಜಾಗದ ಖಾತೆ ವರ್ಗಾವಣೆ ಮಾಡಿದ್ದರು. ಮಾಲೀಕತ್ವವನ್ನು ಮುಂದೆ ವರ್ಗಾಯಿಸುವ ಒಪ್ಪಂದವಾಗಿತ್ತು. ಐದು ದಶಕಗಳಿಂದ ಜಾಗಕ್ಕೆ ಸಂಬಂಧಪಟ್ಟ ತೆರಿಗೆ ಹಾಗೂ ಎನ್‌ಜಿಓಗೆ ಬಾಡಿಗೆಯನ್ನು ಫ್ರಾನ್ಸಿಸ್‌ ಅವರೇ ಪಾವತಿಸುತ್ತಿದ್ದರು. ವರ್ಷದ ಹಿಂದೆ ಖಾತೆಯನ್ನು ಹಿಂದೆ ಪಡೆದ ಎನ್‌ಜಿಓ ಆ ಜಾಗವನ್ನು ಬಿ.ಎಂ.ಆರ್‌.ಸಿ.ಎಲ್‌.ಗೆ ನೀಡಿತ್ತು. ಈಗ ವೆಲ್ಲಾರ ರೋಡ್‌ ಮೆಟ್ರೋ ಸ್ಟೇಶನ್‌ಗಾಗಿ ಫಾತಿಮಾ ಬೇಕರಿ ತೆರವುಗೊಳಿಸಬೇಕಾದೀತು ಎಂಬುದು ಡೇವಿಡ್‌ರ ಪಾಲಿಗೆ ಅತ್ಯಂತ ನೋವಿನ ವಿಷಯ. 

“ಮೆಟ್ರೋ ನಿರ್ಮಾಣದಿಂದ ಫಾತಿಮಾ ಬೇಕರಿ ಮುಚ್ಚಲಿದೆ ಎಂಬ ಸುದ್ದಿ ಹಬ್ಬಿದಾಗ ಅಮೆರಿಕಾ, ಇಂಗ್ಲೆಂಡಿನಿಂದ ಬಹಳಷ್ಟು ಜನ ಕಾಲ್‌ ಮಾಡಿ ವಿಚಾರಿಸಿಕೊಂಡರು. ತಾವು ಬೆಂಗಳೂರಿನಲ್ಲಿದ್ದಾಗ ಫಾತಿಮಾ ಬೇಕರಿಯಲ್ಲಿ ಸವಿದ ಕೇಕುಗಳನ್ನು ನೆನಪಿಸಿಕೊಂಡರು. ನಮ್ಮ ತಂದೆಯವರು ಗ್ರಾಹಕರೊಂದಿಗೆ ಒಳ್ಳೆಯ ಸಂಬಂಧವಿರಿಸಿಕೊಂಡಿದ್ದರು. ಒಳ್ಳೆಯ ಗುಡ್‌ವಿಲ್‌ ಇರುವ ಬೇಕರಿಯನ್ನು ಸ್ಥಳಾಂತರಿಸಿದರೆ ಮತ್ತೆ ವ್ಯಾಪಾರ ಚಿಗರಲು ಬಹಳ ವರ್ಷಗಳೇ ಬೇಕಾಗುತ್ತದೆ’.
-ವಿಎಫ್ ಡೇವಿಡ್‌, ಬೇಕರಿ ಮಾಲೀಕರು

Advertisement

ಪ್ಲಮ್‌ ಕೇಕ್‌ ಭಾರೀ ಫೇಮಸ್‌
ಫಾತಿಮಾ ಬೇಕರಿಯ ಪ್ಲಮ್‌ ಕೇಕ್‌ ಬಹಳ ಪ್ರಸಿದ್ಧಿ ಪಡೆದಿದೆ. ಕ್ರಿಸ್‌ಮಸ್‌ ಸಮಯದಲ್ಲಿ ಬೆಂಗಳೂರಿನ ಬೇರೆ ಬೇರೆ ಭಾಗಗಳಿಂದ ಜನ ಪ್ಲಮ್‌ ಕೇಕ್‌ಗೊàಸ್ಕರ ಈ ಬೇಕರಿಗೆ ಬರುತ್ತಾರೆ. ಬೀದಿಗೊಂದು ಬೇಕರಿ ತಲೆ ಎತ್ತಿದರೂ ಜನ ಫಾತಿಮಾ ಬೇಕರಿಯನ್ನು ಹುಡುಕಿಕೊಂಡು ಬರುವುದು ವಿಶೇಷ.  

“ಸ್ವೀಟ್‌’ ಮೆಮೊರಿ
ಆಗ ಮಿಲಿಟರಿ ಸ್ಕೂಲ್‌ನಲ್ಲಿ ಓದುತ್ತಿದ್ದವರು ಬೇಕರಿಗೆ ಬಂದು ಆ್ಯಪಲ್‌ ಕೇಕ್‌ ತಿನ್ನುತ್ತಿದ್ದರು. ಈಗಲೂ ಕೂಡ ಅವರು ತಮ್ಮ ಮಕ್ಕಳಿಗೆ ಇಲ್ಲಿಂದ ಆ್ಯಪಲ್‌ ಕೇಕ್‌ ಪಾರ್ಸೆಲ್‌ ತೆಗೆದುಕೊಂಡು ಹೋಗುತ್ತಾರೆ. ಸೇಂಟ್‌ ಜಾನ್ಸ್‌ ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿಗಳಿಗೂ ಇದೇ ಫೇವರಿಟ್‌ ಬೇಕರಿಯಾಗಿತ್ತಂತೆ. ಈಗ ವಿದೇಶಗಳಲ್ಲಿ ಸೆಟ್ಲ ಆಗಿರುವ ವೈದ್ಯರು ಬೆಂಗಳೂರಿಗೆ ಬಂದಾಗ ಬೇಕರಿಗೆ ಬರುವುದನ್ನು ಮರೆಯುವುದಿಲ್ಲ. 

ಗಣ್ಯರಿಗೂ ಫೇವರಿಟ್‌
ತಂದೆಯವರ ಕಾಲದಲ್ಲಿ ಬಹಳಷ್ಟು ಪೊಲೀಸ್‌ ಮತ್ತು ಮಿಲಿಟರಿ ಅಧಿಕಾರಿಗಳು ಬೇಕರಿಗೆ ಬರುತ್ತಿದ್ದರು. ಅವರಲ್ಲಿ ಫೀಲ್ಡ್‌ ಮಾರ್ಷಲ್‌ ಮಾಣಿಕ್‌ ಶಾ, ಫೀಲ್ಡ್‌ ಮಾರ್ಷಲ್‌ ಕಾರಿಯಪ್ಪ ತಂದೆಗೆ ಬೇಕರಿ ಬಗ್ಗೆ ಸಲಹೆಗಳನ್ನೂ ಕೊಡುತ್ತಿದ್ದರು. ಶಂಕರ್‌ನಾಗ್‌ ಅವರು ವಾರಕ್ಕೊಮ್ಮೆಯಾದರೂ ಬರುತ್ತಿದ್ದರು. ಉಳಿದಂತೆ ಟೈಗರ್‌ ಪ್ರಭಾಕರ್‌, ಜನರಲ್‌ ಕುಮಾರ ಮಂಗಳಂ, ರಾಹುಲ್‌ ದ್ರಾವಿಡ್‌, ಅರುಂಧತಿ ನಾಗ್‌, ಸುಂದರ್‌ ರಾಜ್‌, ಕಮಿಷನರ್‌ ಸಲೀಂ, ಮನಿಷಾ ಕೊಯಿರಾಲ, ಪುನೀತ್‌ ರಾಜಕುಮಾರ್‌, ಯೂತ್‌ ಕಾಂಗ್ರೆಸ್‌ನಲ್ಲಿದ್ದಾಗ ಕೆ.ಜೆ. ಜಾರ್ಜ್‌ ಕೂಡ ಬರುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಡೇವಿಡ್‌.  

ಏನೇನು ಸ್ಪೆಷಲ್‌ 
ಪ್ಲಮ್‌ ಕೇಕ್‌, ಚಿಕನ್‌ ಪಫ್, ಚಿಕನ್‌ ಸಮೋಸ, ಮಟನ್‌ ಸಮೋಸ, ಸ್ಪಂಜ್‌ ಕೇಕ್‌, ಜ್ಯಾಮ್‌ ರೋಲ್‌, ಆ್ಯಪಲ್‌ ಕೇಕ್‌, ಬ್ರೌನೀಸ್‌, ಬ್ಲೂಬೆರ್ರಿ ಚೀಸ್‌ ಕೇಕ್‌, ಚೋಕೊ ಡೋನಟ್ಸ್‌,

Advertisement

Udayavani is now on Telegram. Click here to join our channel and stay updated with the latest news.

Next