Advertisement
ನಿಮ್ಮ ಮುದ್ದಿನ ಮಗಳು ನಿಧಿ.
Related Articles
Advertisement
ವಿಷಯ :ಅಪ್ಪ ನಿಮಗೊಂದು ನನ್ನ ಮೊದಲ ಪತ್ರ .
ಅಪ್ಪ, ನಿಮ್ಮಲ್ಲಿ ನಾನು ಬೇಡುವ ಆಶೀರ್ವಾದಗಳು. ನಿಮ್ಮೊಂದಿಗೆ ಕಳೆಯುವ ಪ್ರತಿಕ್ಷಣವೂ ನನಗೆ ಮಧುರ. ನಿತ್ಯವೂ ನಿಮ್ಮೊಂದಿಗೆ ಬೈಕಿನಲ್ಲಿ ಊರು ಸುತ್ತುತ್ತಾ ಇಡೀ ದಿನದಲ್ಲಿ ಆದ ಘಟನೆಗಳನ್ನು ಹೇಳುವುದು ನನಗೆ ನಿಮ್ಮೊಂದಿಗೆ ಕಳೆಯುವ ಮಧುರ ಕ್ಷಣಗಳು. ನೀವು ಕೊಟ್ಟ ಮೊದಲ ಉಡುಗೊರೆ ನನಗೆ ನೆನಪಿಲ್ಲ ಕಾರಣ ನಾನು ಆಗ ತುಂಬಾ ಚಿಕ್ಕವಳು. ಆದರೆ ಒಂದು ಹೇಳಬಲ್ಲೆ ನೀವೇ ನನಗೆ ಬಹು ದೊಡ್ಡ ಉಡುಗೊರೆ. ನೀವು ನನಗೆ ಹೊಡೆಯುವವರೇ ಅಲ್ಲ ಆದರೆ ಅಪರೂಪಕ್ಕೆ ಹೊಡೆದರೆ ಸಾಕು ನಾನು ಬಿಕ್ಕಿ-ಬಿಕ್ಕಿ ಅಳುತ್ತೇನೆ. ನೀವು ನನಗೆ ಮೊದಲ ಬಾರಿ ಹೊಡೆದದ್ದು, ನಾನು ಅತ್ತಿದ್ದು, ನೀವು ಆಮೇಲೆ ಸಮಾಧಾನ ಮಾಡಿದ್ದು, ಎಲ್ಲವೂ ಈಗ ಜ್ಞಾಪಿಸಿಕೊಂಡರೆ ನನಗೆ ನಗು ಬರುತ್ತದೆ.
ನೀವು ಯಾವತ್ತೂ ಅಷ್ಟೇ ನಾನು ಜೀವನದಲ್ಲಿ ಮುಂದೆ ಬರಬೇಕು ಎಂದು ಪ್ರೋತ್ಸಾಹಿಸಿದ್ದೀರಿ. ಪ್ರತಿಬಾರಿ ಬೆನ್ನುತಟ್ಟಿದ್ದೀರಿ. ನನಗೆ ನನ್ನಲ್ಲಿರುವ ಶಕ್ತಿಯನ್ನು ಪರಿಚಯಿಸಿ ಆತ್ಮಸ್ಥೈರ್ಯವನ್ನು ತುಂಬಿದ್ದೀರಿ .ಕೆಲವೊಮ್ಮೆ ನೀವು ನಿಮ್ಮ ಪ್ರೋತ್ಸಾಹದ ಮಾತುಗಳನ್ನಾಡಿದ್ದರು ನಿಮ್ಮ ಕಣ್ಣುಗಳಲ್ಲಿ ನೀವು ಹೇಳುವುದನ್ನು ಹೇಳುತ್ತೀರಿ. ನಿಮಗೆ ನನ್ನ ವಿದ್ಯಾಭ್ಯಾಸದ ಮೇಲೆ ಬಹಳಷ್ಟು ಕಾಳಜಿ ಇದೆ. ದಿನವೂ ನನಗೆ ಪ್ರೋತ್ಸಾಹಿಸಿ ಕೆಲಸಕ್ಕೆ ಹೊರಡುತ್ತೀರಿ. ನೀವು ನನಗೆ ದೊಡ್ಡ ಸ್ಪೂರ್ತಿ ,ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ .
ಧನ್ಯವಾದಗಳೊಂದಿಗೆ
ಇಂತಿ ನಿಮ್ಮ ಮಗಳು ನಿಧಿ ಎನ್. ಪೈ. ಬನ್ನಂಜೆ