ಚಿಕ್ಕಮಗಳೂರು : ತಂದೆ – ಮಗನ ಜಗಳದಲ್ಲಿ, ಮಗನ ಪ್ರಾಣವನ್ನು ಉಳಿಸಲು ಹೋಗಿ ತಾಯಿಯೇ ಸಾವಿಗೀಡಾದ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ಹಾಗಲಖಾನ್ ಎಸ್ಟೇಟ್ ನಲ್ಲಿ ನಡೆದಿದೆ.
ಮೈಮುನಾ (40) ಮೃತ ದುರ್ಧೈವಿ.
ಘಟನೆ ಹಿನ್ನೆಲೆ : ಯಾವತ್ತೂ ಪಬ್ಬಿ ಆಡುತ್ತಿದ್ದ ಮಗನ ಮೇಲೆ ತಂದೆ ಇಮ್ತಿಯಾಜ್ ರೇಗಿದ್ದಾನೆ. ಮಾತಿಗೆ ಮಾತು ಬೆಳದು ಮಗನ ಮೇಲೆ ಹಲ್ಲೆ ಮಾಡಲು ಮುಂದಾದ ಇಮ್ತಿಯಾಜ್ ಕುಡಿದ ಮತ್ತಿನಲ್ಲಿ ತೋಟದ ಕೋವಿ ಹಿಡಿದು ಸಾಯಿಸಿ ಬಿಡುತ್ತೇನೆ ಎಂದು ಮಗನಿಗೆ ಹೇಳಿ ಕೋವಿಯಿಂದ ಗುಂಡು ಹಾರಿಸಲು ಮುಂದಾಗುವ ವೇಳೆ ಮಗನ ಪ್ರಾಣ ರಕ್ಷಣೆಗೆ ತಾಯಿ ಅಡ್ಡ ಬಂದಿದ್ದಾಳೆ. ಈ ವೇಳೆ ಇಮ್ತಿಯಾಜ್, ಪತ್ನಿ ಎಂದು ನೋಡದೆ ಒಮ್ಮೆಲೇ ಗುಂಡು ಹಾರಿಸಿದ್ದಾನೆ. ಪರಿಣಾಮ ಮೈಮುನಾ ಗುಂಡು ಹೊಕ್ಕಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ.
ಹಿರಿಯ ಮಗ ಅಮ್ಮನನ್ನು ತಕ್ಷಣ ಆಸ್ಪತ್ರೆಗೆ ಕರೆತಂದರೂ ಆ ವೇಳಗಾಗಲೇ ಮೈಮುನಾ ಸಾವನ್ನಪ್ಪಿದ್ದರು. ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಇಮ್ತಿಯಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.