ಪುದುಚೇರಿ :ಸ್ಕೂಟರ್‌ನಲ್ಲಿ ತುಂಬಿದ್ದ ಪಟಾಕಿ ಸ್ಫೋಟಗೊಂಡು ತಂದೆ, ಮಗ ಛಿದ್ರ ಗೊಂಡಿರುವ ಭೀಕರ ಅವಘಡ ಗುರುವಾರ ನಡೆದಿದೆ.
ಪುದುಚೇರಿಯ ಅರಿಯಂಕುಪ್ಪಂ ಪಟ್ಟಣದ ನಿವಾಸಿ ವಿ ಕಲೈನೇಸನ್ (37) ಅವರು ತಮ್ಮ7 ವರ್ಷದ ಮಗನೊಂದಿಗೆ ಕೂನಿಮೇಡು ಗ್ರಾಮದಿಂದ ಯಮಹಾ ಸ್ಕೂಟರ್‌ನಲ್ಲಿ ಪುದುಚೇರಿ ಕಡೆಗೆ ಹೋಗುತ್ತಿದ್ದಾಗ ಪಟಾಕಿ ಸಿಡಿದು ದುರಂತ ಸಂಭವಿಸಿದೆ.
ದೀಪಾವಳಿಯಂದು ಚಿನ್ನ ಕೊಟ್ಟಕುಪ್ಪಂ ಬಳಿ ಮಧ್ಯಾಹ್ನ 1.35 ಕ್ಕೆ ಭೀಕರ ಸ್ಫೋಟ ಸಂಭವಿಸಿದೆ.
ಸಮೀಪದಲ್ಲಿದ್ದ ಇತರ ಮೂವರು ಗಾಯಗೊಂಡಿದ್ದಾರೆ, ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವಿಲ್ಲುಪುರಂನ ಪೊಲೀಸ್ ವರಿಷ್ಠಾಧಿಕಾರಿ ಎನ್ ಶ್ರೀನಾಥ್ ತಿಳಿಸಿದ್ದಾರೆ.
ಕಲೈನೇಸನ್ ಅವರು ಬುಧವಾರ ಪುದುಚೇರಿಯಿಂದ ಎರಡು ಚೀಲಗಳಲ್ಲಿ ಪಟಾಕಿಗಳನ್ನು ತೆಗೆದುಕೊಂಡು ಕೂನಿಮೇಡುವಿನ ತನ್ನ ಅತ್ತೆಯ ಮನೆಯಲ್ಲಿ ಇರಿಸಿದ್ದರು. ಗುರುವಾರ, ತಂದೆ-ಮಗ ಇಬ್ಬರೂ ತಮ್ಮ ಸ್ಕೂಟರ್ ನಲ್ಲಿ ಬ್ಯಾಗ್‌ಗಳಲ್ಲಿ ಒಂದನ್ನು ತುಂಬಿಕೊಂಡು ಪುದುಚೇರಿ ಕಡೆಗೆ ಹಿಂತಿರುಗಿ ಹೋಗುತ್ತಿದ್ದಾಗ ದಾರಿಯಲ್ಲಿ ಪಟಾಕಿಗಳು ಸ್ಫೋಟಗೊಂಡಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸ್ಪೋಟದ ದ್ರಶ್ಯಾವಳಿಗಳು ಸಿಸಿಟಿವಿ ಯಲ್ಲಿ ದಾಖಾಲಾಗಿದ್ದು ವ್ಯಾಪಕವಾಗಿ ಹರಿದಾಡುತ್ತಿವೆ.