Advertisement

Mangaluru: ರೋಗಿಗಳಲ್ಲಿ ಭರವಸೆ ತುಂಬುವ ಕೆಲಸವಾಗಲಿ: ರೈ| ರೆ| ಡಾ| ಸಲ್ಡಾನ್ಹಾ

11:25 AM Mar 19, 2024 | Team Udayavani |

ಮಂಗಳೂರು: ರೋಗಿಗಳ ಹೃದಯದಲ್ಲಿ ಭರವಸೆ ತುಂಬಬೇಕು. ವೈದ್ಯ ಸೇವೆಯಲ್ಲಿರುವ ಪ್ರತಿಯೊಬ್ಬ ರಿಂದಲೂ ಧೈರ್ಯತುಂಬುವ ಕೆಲಸ ಮಾಡಬೇಕು. ಗುಣಮುಖರಾಗುವ ಆತ್ಮಸ್ಥೈರ್ಯ ತುಂಬಿದಾಗ ವೈದ್ಯ ಸೇವೆಗೆ ನಿಜಾರ್ಥ ಬರುತ್ತದೆ ಎಂದು ಮಂಗಳೂರು ಬಿಷಪ್‌ ಹಾಗೂ ಫಾದರ್‌ ಮುಲ್ಲರ್‌ ಸಂಸ್ಥೆಗಳ ಅಧ್ಯಕ್ಷ ರೈ| ರೆ| ಡಾ| ಪೀಟರ್‌ ಪಾವ್ಲ್ ಸಲ್ಡಾನ್ಹಾ ಹೇಳಿದರು.

Advertisement

ಕಂಕನಾಡಿಯ ಫಾದರ್‌ ಮುಲ್ಲರ್‌ ಕನ್ವೆನ್ಶನ್‌ ಸೆಂಟರ್‌ನಲ್ಲಿ ಸೋಮವಾರ ನಡೆದ ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು, ಅಲೈಡ್‌ ಹೆಲ್ತ್‌ ಸೈನ್ಸ್‌ ಹಾಗೂ ಕಾಲೇಜು ಆಫ್‌ ಫಿಸಿಯೋಥೆರಫಿ ವಿಭಾಗ ಗಳ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಫಾದರ್‌ ಮುಲ್ಲರ್‌ ಸಂಸ್ಥೆ ಬಡವರ ಕಣ್ಣೀರು ಒರೆಸುವ ಕೆಲಸ ನಿರಂತರವಾಗಿ ನಡೆಸುತ್ತಿದೆ. ಕಂಕನಾಡಿ ಎಂದರೆ ಆರೋಗ್ಯ, ಗುಣಮುಖ, ಮರು ಜೀವನ ಎಂಬುವುದರ ಸೂಚ್ಯವಾಗಿದೆ. ಫಾದರ್‌ ಮುಲ್ಲರ್‌ ಸಂಸ್ಥೆ ಮೂಲಕ ಸಮಾಜಕ್ಕೆ ಉತ್ತಮ ದರ್ಜೆಯ ಸೇವೆ ನೀಡಲಾಗುತ್ತಿದೆ. ಮೆಡಿಕಲ್‌ ಕಾಲೇಜಿನ ಮೇಲೆ ನಂಬಿಕೆ ಇಟ್ಟು ಪೋಷಕರು ತಮ್ಮ ಮಕ್ಕಳನ್ನು ಈ ಸಂಸ್ಥೆಗೆ ಸೇರಿಸುತ್ತಿದ್ದು, ವಿದ್ಯಾರ್ಥಿ ಗಳಿಗೆ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆ ನೀಡುವ ಮೂಲಕ ಭರವಸೆ ಉಳಿಸಿಕೊಂಡಿದೆ ಎಂದು ಹೇಳಿದರು.

ಕೇಂದ್ರ ಸರಕಾರದ ವಿದೇಶಾಂಗ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಡಾ| ಎ.ವಿ.ಎಸ್‌. ರಮೇಶ್‌ಚಂದ್ರ ಮಾತನಾಡಿ, ಪ್ರತೀ ಸಂಸ್ಥೆ ಬೆಳವಣಿಗೆಯತ್ತ ಕಣ್ಣಿಟ್ಟಿರುತ್ತದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತದೆ. ಮೌಲ್ಯಯುತವಾದ ಬೆಳವ ಣಿಗೆ ಅಗತ್ಯ. ಮೌಲ್ಯಗಳನ್ನು ಕೆಲಸದ ಸಮಯದಲ್ಲಿ ಹಾಗೂ ಸಮಾಜಕ್ಕೆ ನೀಡಿ ದ್ದಲ್ಲಿ ಪಡೆದ ಶಿಕ್ಷಣ ಫಲಪ್ರದವಾಗುತ್ತದೆ. ವೈದ್ಯರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಆಡಳಿತಾ ಕಾರಿ ವಂ| ಅಜಿತ್‌ ಮಿನೇಜಸ್‌ ವಾರ್ಷಿಕ ವರದಿ ಮಂಡಿಸಿದರು.

ಸಮ್ಮಾನ: ಚಿನ್ನದ ಪದಕ ಗೆದ್ದ ಆ್ಯರಲ್‌ ಅಲಿಶಾ ಮೊಂತೇರೊ ಅವರನ್ನು ಸಮ್ಮಾನಿ ಸಲಾಯಿತು. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

Advertisement

ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಆಡಳಿತಾಧಿಕಾರಿ ಫಾ| ಜಾರ್ಜ್‌ ಜೀವನ್‌ ಸಿಕ್ವೇರಾ, ಸಹಾಯಕ ಆಡಳಿತಾಧಿಕಾರಿ ವಂ| ನೆಲ್ಸನ್‌ ಧೀರಜ್‌ ಪಾಯಿಸ್‌, ತುಂಬೆ ಫಾದರ್‌ ಮುಲ್ಲರ್‌ ಆಸ್ಪತ್ರೆ ಆಡಳಿತಾಧಿಕಾರಿ ಫಾ| ಸಿಲ್ವೆಸ್ಟರ್‌, ಡೀನ್‌ ಆ್ಯಂಟನಿ ಸಿಲ್ವನ್‌ ಡಿ’ ಸೋಜಾ, ವೈಸ್‌ ಡೀನ್‌ ವೆಂಕಟೇಶ್‌ ಬಿ.ಎನ್‌., ವೈದ್ಯಕೀಯ ಅಧೀಕ್ಷಕ ಡಾ| ಉದಯ್‌ ಕುಮಾರ್‌ ಕೆ., ಫಿಜಿಯೋಥೆರಪಿ ಕಾಲೇಜು ಪ್ರಾಂಶುಪಾಲೆ ಪ್ರೊ| ಚರಿಷ್ಮಾ ಉಪಸ್ಥಿತರಿದ್ದರು.

ಫಾ| ಮುಲ್ಲರ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ನಿರ್ದೇಶಕ ವಂ| ರಿಚರ್ಡ್‌ ಅಲೋಶಿಯಸ್‌ ಕುವೆಲ್ಲೊ ಸ್ವಾಗತಿಸಿ, ಕಾಲೇಜ್‌ ಆಫ್‌ ಅಲೈಡ್‌ ಸೈನ್ಸ್‌ ಪ್ರಾಂಶು ಪಾಲೆ ಡಾ| ಹೀಲ್ಡಾ ಡಿ’ಸೋಜಾ ವಂದಿಸಿ ದರು. ಡಾ| ಶ್ರೇಯಸ್‌ ಹಾಗೂ ಡಾ| ಸವಿತಾ ಲಸ್ರಾದೊ ನಿರೂಪಿಸಿದರು.

ನಿಸ್ವಾರ್ಥ ಸೇವೆ ಅಗತ್ಯ ದಿಲ್ಲಿಯ ಲೇಡಿ ಹಾರ್ಡಿಂಜ್‌ ಮೆಡಿಕಲ್‌ ಕಾಲೇಜು ಸಮೂಹ ಆಸ್ಪತ್ರೆಯ ನಿರ್ದೇಶಕ ಡಾ| ಸುಭಾಶ್‌ ಗಿರಿ ಮಾತನಾಡಿ, ಹಣದ ಹಿಂದೆ ತೆರಳದೆ ಸೇವೆಯನ್ನು ಶ್ರೇಷ್ಠವಾಗಿಸಬೇಕು. ಬಡ ಜನರಿಗೆ ಹಣಕಾಸಿನ ಅಡೆತಡೆಗಳು ಎದುರಾಗುತ್ತವೆ. ಈ ವೇಳೆ ತಮ್ಮ ಸೇವೆಯನ್ನು ನಿಸ್ವಾರ್ಥವಾಗಿ ನೀಡಬೇಕು. ಸಾಮಾಜಿಕ ಬದ್ಧತೆಯೊಂದಿಗೆ ನಡೆದಾಗ ಮಾತ್ರವೇ ಗಳಿಸಿದ ಶಿಕ್ಷಣಕ್ಕೆ ಅರ್ಥ ಹಾಗೂ ಸಾರ್ಥಕ್ಯ ಸಿಗಲು ಸಾಧ್ಯ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next