Advertisement

ರಿಕ್ಷಾ ಚಾಲಕಿ ಜಾಸ್ಮಿನ್‌ಗೆ ತಂದೆಯೇ ಗುರು

11:18 PM Sep 04, 2019 | mahesh |
ಇಂದು ಶಿಕ್ಷಕರ ದಿನಾಚರಣೆ. ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಬಗ್ಗೆ ಆಯ್ದ ಕೆಲವರು ನೆನಪಿಸಿಕೊಂಡದ್ದು ಹೀಗೆ…

ಬದುಕಿನ ದಾರಿ ತೋರಿಸ ಬೇಕಾದ ತಂದೆಯೇ ಗುರುವಾಗಿ ಜೀವನದ ದಿಕ್ಕನ್ನು ಬದಲಾಯಿಸಿ ದ್ದಾರೆ. ಅವರು ಕಲಿಸಿದ ವಿದ್ಯೆ ಯಿಂದ ಇಂದು ಜೀವನ ಸಾಗಿಸಲು ಸಾಧ್ಯವಾಯಿತು ಎನ್ನುತ್ತಾರೆ ಜಿಲ್ಲೆಯ ಕೈಸ್ತ ಸಮುದಾಯದ ಮೊದಲ ಮಹಿಳಾ ರಿಕ್ಷಾ ಚಾಲಕಿ ಪೆರಂಪಳ್ಳಿಯ 25 ವರ್ಷದ ಜಾಸ್ಮಿನ್‌ ಡಿ’ಕೋಸ್ತಾ.

Advertisement

ಛಲ, ಪರಿಶ್ರಮ, ಪ್ರಾಮಾಣಿಕತೆ ಇದ್ದಾಗ ಏನು ಬೇಕಾದರೂ ಸಾಧಿಸ ಬಹುದು. ಈ ಪ್ರಪಂಚದಲ್ಲಿ ‘ಆಗದು’ಎಂದು ಯಾವುದೂ ಇಲ್ಲ ಎಂಬುದಕ್ಕೆ ಉದಾಹರಣೆ ಜಾಸ್ಮಿನ್‌ ಡಿ’ಕೋಸ್ತಾ. ತಂದೆ ಲೆಸ್ಲಿ ಡಿ’ಕೊಸ್ತಾ ಅವರೇ ನನ್ನ ಗುರು. ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವಾಗ ನನಗೆ ರಿಕ್ಷಾ ಕಲಿ ಯುವಂತೆ ಪ್ರೋತ್ಸಾಹಿಸಿದರು. ಅವರೇ ಲೈಸೆನ್ಸ್‌ ಮಾಡಿಸಿಕೊಟ್ಟರು. ಅವರ ನಿಧನದ ಬಳಿಕ ರಿಕ್ಷಾ ಚಾಲಕಿ ಯಾಗಿದ್ದೇನೆ ಎನ್ನುತ್ತಾರೆ ಜಾಸ್ಮಿನ್‌.

ಹೆಮ್ಮಕ್ಕಳು ಗಂಡು ಮಕ್ಕಳಿಗೆ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ನನ್ನ ತಂದೆ ನನ್ನನ್ನು ಬೆಳೆಸಿದ್ದಾರೆ. ಬದುಕನ್ನು ಹೇಗೆ ರೂಪಿಸಿಕೊಳ್ಳ ಬೇಕು ಎಂಬುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ರಿಕ್ಷಾ ಚಾಲಕರಿಗೆ ಬೇಕಾದ ಜ್ಞಾನ, ತಾಳ್ಮೆ, ನಿರ್ಧಾರ, ಧೈರ್ಯವನ್ನು ಧಾರೆ ಎರೆದಿದ್ದಾರೆ. ಅಂದು ಅವರು ಒತ್ತಾಯಪೂರ್ವಕವಾಗಿ ಹೇಳಿಕೊಟ್ಟ ಈ ವಿದ್ಯೆ ಇಂದು ನನ್ನ ಬದುಕಿಗೆ ದಾರಿದೀಪವಾಗಿದೆ – ಜಾಸ್ಮಿನ್‌ ವಿವರಿಸುತ್ತಾರೆ.

ಜಾಸ್ಮಿನ್‌ ಒಂದೂವರೆ ವರ್ಷ ದಿಂದ ರಿಕ್ಷಾ ಚಾಲಕಿಯಾಗಿದ್ದಾರೆ. ಪರಿಸರದಲ್ಲಿ ರಾತ್ರಿಯೂ ನಿರ್ಭಯ ವಾಗಿ ಬಾಡಿಗೆಗೆ ತೆರಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next