Advertisement

ಮುದ್ದೇಬಿಹಾಳ: ಮಗಳ ಜನ್ಮದಿನ ಸ್ಮರಣೆಗೆ ಬೀದಿ ದೀಪ ಅಳವಡಿಸಿದ ತಂದೆ

01:34 PM Oct 23, 2021 | Team Udayavani |

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಹೊಸ ಬಡಾವಣೆಯಾಗಿರುವ ಸ್ವಾಮಿ ವಿವೇಕಾನಂದ ನಗರವು ಪುರಸಭೆಯ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಹಲವು ಬಾರಿ ಮನವಿ ಸಲ್ಲಿಸಿದರೂ, ಪುರಸಭೆಗೆ ಅಭಿವೃದ್ದಿ ಶುಲ್ಕ, ತೆರಿಗೆ ತುಂಬಿದರೂ ಪುರಸಭೆಯವರು ಈ ಬಡಾವಣೆಗೆ ರಸ್ತೆ, ಚರಂಡಿ, ವಿದ್ಯುತ್ ಸೌಕರ್ಯ ಕೊಡಲು ಮುಂದಾಗಿಲ್ಲ.

Advertisement

ಇದರಿಂದ ಬೇಸತ್ತ ನಿವಾಸಿಗಳು ತಾವೇ ತಮ್ಮಲ್ಲಿಯೇ ಚಂದಾ ಹಣ ಸಂಗ್ರಹಿಸಿ ತಾತ್ಕಾಲಿಕ ರಸ್ತೆ ಮಾಡಿಕೊಂಡಿದ್ದಾರೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಡಾವಣೆಯ ನಿವಾಸಿಗಳಲ್ಲಿ ಒಬ್ಬರಾಗಿರುವ ಬಸವ ಫ್ಲೆಕ್ಸ್ ಪ್ರಿಂಟರ್ಸ್ ಮಾಲಿಕ ಬಸವರಾಜ ಬಿರಾದಾರ ಅವರು ತಮ್ಮ ಮಗಳು ಸನ್ನಿಧಿಯ ಜನ್ಮದಿನದ ಸವಿ ನೆನಪಿಗಾಗಿ ಬಡಾವಣೆಯ ಎಲ್ಲ ವಿದ್ಯುತ್‌ ಕಂಬಗಳಿಗೆ ಪ್ರಖರ ಬೆಳಕು ನೀಡುವ ಬಲ್ಬ್ ಅಳವಡಿಸಿ ರಾತ್ರಿ ಬೆಳಕು ನೀಡಿದ್ದಾರೆ.

ಈ ಮಾದರಿ ಕಾರ್ಯವೂ ಅನೇಕರಿಗೆ ಪ್ರೇರಣೆ ನೀಡುವಂತಿದೆ. ಸ್ಥಳೀಯ ಆಡಳಿತ ಏನೂ ಮಾಡುತ್ತಿಲ್ಲ ಎಂದು ಬೇಸರಿಸಿಕೊಳ್ಳುವ ಬದಲು ಬಡಾವಣೆಯವರೆಲ್ಲರೂ ಸೇರಿ ಕೈಲಾದಷ್ಟು ಹಣ ಸಂಗ್ರಹಿಸಿ ತಾವೇ ಮೂಲ ಸೌಕರ್ಯ ಒದಗಿಸಿಕೊಳ್ಳಲು ಮುಂದಾದರೆ ಸ್ಥಳಿಯಾಡಳಿತಗಳು ನಾಚಿಕೆ ಪಡುವಂತಾಗುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಬರುವ ಸ್ಥಳೀಯಾಡಳಿತದ ಚುನಾವಣೆಗಳಲ್ಲಿ ಓಟು ಬೇಡಲು ಬರುವವರಿಗೂ ಪಾಠ ಕಲಿಸಲು ಅನುಕೂಲ ಆಗಬಹುದು ಎನ್ನುವ ಮಾತು ಇಲ್ಲಿ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next