Advertisement

ಹೆಗಡೆ-ಅರಸು ಸೇವಾ ಕಾರ್ಯ ಅನುಕರಣೀಯ

06:59 PM Sep 02, 2020 | Suhan S |

ಭದ್ರಾವತಿ: ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡಬೇಕೆಂಬ ಮನೋಭಾವದೊಂದಿಗೆ ರಾಜ್ಯ ರಾಜಕಾರಣಿದಲ್ಲಿ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿಗಳಾದ ರಾಮಕೃಷ್ಣ ಹೆಗ್ಡೆ ಮತ್ತು ದೇವರಾಜ ಅರಸು ಅವರ ಆದರ್ಶ ಗುಣಗಳು ಎಲ್ಲಾ ಜನಪ್ರತಿನಿಧಿಗಳಿಗೂ ಅನುಕರಣೀಯವಾಗಿದೆ ಎಂದು ನಗರಸಭೆ ಅಧ್ಯಕ್ಷ ಮನೋಹರ್‌ ಹೇಳಿದರು.

Advertisement

ನಗರದ ಭಾರತರತ್ನ ಸರ್‌.ಎಂ ವಿಶ್ವೇಶ್ವರಯ್ಯ ಚಾರಿಟೆಬಲ್‌ ಟ್ರಸ್ಟ್‌, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆಯವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಇಬ್ಬರ ಜನ್ಮದಿನಾಚರಣೆಯನ್ನಾಚರಿಸುತ್ತಿರುವ ಭಾರತರತ್ನ ಸರ್‌.ಎಂ ವಿಶ್ವೇಶ್ವರಯ್ಯ ಚಾರಿಟೆಬಲ್‌ ಟ್ರಸ್ಟ್‌, ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಮತ್ತು ಸುವರ್ಣ ಮಹಿಳಾ ವೇದಿಕೆ ನಗರಸಭೆ ವ್ಯಾಪ್ತಿಯಲ್ಲಿರುವ ಸುಮಾರು 70 ಕೆರೆಗಳ ಅಭಿವೃದ್ಧಿಗಾಗಿ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದ್ದು, ಇದಕ್ಕೆ ನಗರಸಭೆ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ. 70 ಕೆರೆಗಳ ಪೈಕಿ ಕನಿಷ್ಠ 30 ಕೆರೆಗಳನ್ನಾದರೂ ಅಭಿವೃದ್ಧಿಪಡಿಸಿದಲ್ಲಿ ಸಂಘಟನೆ ಹೆಸರು ಶಾಶ್ವತವಾಗಿ ಉಳಿಯುವಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ ಅಧ್ಯಕ್ಷ, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಆರ್‌. ವೇಣುಗೋಪಾಲ್‌ ಮಾತನಾಡಿ, ಕಳೆದ ಸುಮಾರು 4 ದಶಕಗಳಿಂದ ಸಂಘಟನೆ ವತಿಯಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿನಿ ಪಿ. ಸ್ಪರ್ಷ, ಜನ್ನಾಪುರ ನಗರ ಆರೋಗ್ಯ ಕೇಂದ್ರದ ಲಾಬ್‌ ಟೆಕ್ನಿಶಿಯನ್‌ ಸಚಿನ್‌, ನಿವೃತ್ತ ಗುತ್ತಿಗೆ ಪೌರ ಕಾರ್ಮಿಕ ಕೃಷ್ಣಪ್ಪ ಹಾಗೂ ನಗರಸಭೆ ಪೌರಾಯುಕ್ತ ಮನೋಹರ್‌ ಅವರನ್ನು ಸನ್ಮಾನಿಸಲಾಯಿತು.  ಟ್ರಸ್ಟ್‌ ಪ್ರಮುಖರಾದ ಅಂತೋಣಿ ಗ್ಸೇವಿಯರ್‌, ಭವಾನಿ ಶಂಕರ್‌, ರೈತ ಮುಖಂಡ ನೀಲಕಂಠಪ್ಪ ಇನ್ನಿತರರು ಇದ್ದರು. ಶೈಲಜಾ ರಾಮಕೃಷ್ಣ ಸ್ವಾಗತಿಸಿದರು. ರಮಾ ವೆಂಕಟೇಶ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next