Advertisement
ಹಾಸನ ತಾಲೂಕಿನ ಶಾಂತಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 75ರ ಕೃಷಿ ಕಾಲೇಜ್ ಬಳಿ ಶನಿವಾರ ನಸುಕಿನ ಜಾವ ಕೆಎಸ್‌ಆರ್‌ಟಿಸಿ ಐರಾವತ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ 8ಜನ ಸಾವನ್ನಪ್ಪಿ 10ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. Related Articles
ಮುಳಬಾಗಿಲಿನ ಗಾಜಲಬಾವಿ ಗ್ರಾಮದ ಬಳಿ ಶನಿವಾರ ನಸುಕಿನ 2 ಗಂಟೆಯ ವೇಳೆ ಅಪೆ ಆಟೋ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದು ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Advertisement
ಭಾಸ್ಕರ್(35), ಪಾರ್ವತಮ್ಮ(38), ಗೌರಮ್ಮ ಮೃತಪಟ್ಟ ದುರ್ದೈವಿಗಳು ಎಂದು ತಿಳಿದು ಬಂದಿದೆ.
ಮೃತಪಟ್ಟವರೆಲ್ಲ ಬಂಗಾರ ಪೇಟೆ ತಾಲೂಕು ಸಣ್ಣಕುಪ್ಪ ಗ್ರಾಮದವರೆಂದು ತಿಳಿದು ಬಂದಿದ್ದು, ಖಾದ್ರಿಪುರ ಶನಿಮಹಾತ್ಮ ದೇವಾಲಯಕ್ಕೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಕೋಲಾರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಮುಳಬಾಗಿಲು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರದಲ್ಲಿ ಕ್ರೂಸರ್ ಮರಕ್ಕೆ ಢಿಕ್ಕಿ; 2ಬಲಿ ಕಾರವಾರದ ಚಂಡ್ಯಾ ಗ್ರಾಮದ ಬಳಿ ಕುಷ್ಠಗಿಯಿಂದ ಗೋವಾಕ್ಕೆ ತೆರಳುತ್ತಿದ್ದ ಕ್ರೂಸರ್‌ವೊಂದು ಮರಕ್ಕೆ ಢಿಕ್ಕಿಯಾಗಿ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದು, 10 ಕ್ಕೂಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮೃತರಿಬ್ಬರು ಪುರುಷರಾಗಿದ್ದು, ಒಬ್ಬರ ಹೆಸರು ಹನುಮಂತಪ್ಪ ಎಂದು ತಿಳಿದು ಬಂದಿದೆ. ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.