Advertisement
ಮಲಯಾಳ ಪ್ರಶ್ನೆ ಪತ್ರಿಕೆಯನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಆದ ಎಡವಟ್ಟು ಇಂತಹ ಪ್ರಮಾದಕ್ಕೆ ಕಾರಣ. ಈ ಪ್ರಶ್ನೆ ಪತ್ರಿಕೆಯನ್ನು ಕನ್ನಡಿಗರೇ ಭಾಷಾಂತರಿಸಿದರೇ ಅಥವಾ ಅರ್ಧಂಬರ್ಧ ಕನ್ನಡ ಅರಿತ ಮಲಯಾಳಿಗಳಿಂದಾಗಿ ಹೀಗಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಪ್ರಮಾದ ಉದ್ದೇಶಪೂರ್ವಕವೇ ಎಂಬ ಅನುಮಾನವೂ ಉಂಟಾಗಿದೆ. ಕನ್ನಡಿಗರಿಗೆ ಉದ್ಯೋಗ ಲಭಿಸಬಾರದು ಎಂಬ ಕಾರಣಕ್ಕೆ ಹೀಗೆ ಮಾಡಿರಬಹುದು ಎಂಬ ಸಂದೇಹವನ್ನು ಅನೇಕ ಕನ್ನಡಿಗರು ವ್ಯಕ್ತಪಡಿಸಿದ್ದಾರೆ.
ಕಳೆದ ಸಾಲಿನಲ್ಲೂ ಇದೇ ರೀತಿ ಪ್ರಮಾದವೊಂದನ್ನು ಪಿ.ಎಸ್.ಸಿ. ಎಸಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕನ್ನಡದ ಖ್ಯಾತ ಸಾಹಿತಿ ಡಾ| ಎಸ್.ಎಲ್. ಭೈರಪ್ಪ ಅವರನ್ನು ‘ದಿವಂಗತರ’ ಸಾಲಿಗೆ ಸೇರಿಸಿದೆ. ‘ದಾಟು’ ಕಾದಂಬರಿಯ ಲೇಖಕ ಯಾರು ಎಂಬ ಪ್ರಶ್ನೆಯೊಂದಿದ್ದು, ಉತ್ತರವಾಗಿ 4 ಆಯ್ಕೆಗಳನ್ನು ನೀಡಲಾಗಿದೆ. ಈ ಪೈಕಿ ಮೂವರು ಸಾಹಿತಿಗಳು ದಿವಂಗತರು. ಸರಿಯಾದ ಆಯ್ಕೆಯಾದ ಎಸ್.ಎಲ್. ಭೈರಪ್ಪ ಹೆಸರಿನ ಹಿಂದೆ ‘ದಿವಂಗತ’ ಎಂದು ಉಲ್ಲೇಖೀಸಿತ್ತು.