Advertisement

ಮಾರಣಾಂತಿಕ ಹಲ್ಲೆ: ಆರೋಪಿ ಬಂಧನಕ್ಕೆ ಆಗ್ರಹ

06:44 AM Jun 26, 2020 | Lakshmi GovindaRaj |

ತುರುವೇಕೆರೆ: ತಾಲೂಕಿನ ಮುನಿಯೂರು ಗ್ರಾಮದಲ್ಲಿ ನಿವೇಶನ ವಿವಾದದ ಹಿನ್ನೆಲೆಯಲ್ಲಿ ಜೆಡಿಎಸ್‌ ಕಾರ್ಯಕರ್ತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ  ನೇತೃತ್ವದಲ್ಲಿ ಜೆಡಿಎಸ್‌ ಕಾರ್ಯಕರ್ತರು ಪಟ್ಟಣದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದರು.

Advertisement

ಮುನಿಯೂರು ಗ್ರಾಮದ ನಿವೇಶನ ವಿಚಾರವಾಗಿ ಬಿಜೆಪಿ ಕಾರ್ಯಕರ್ತ ಪುನೀತ್‌ ಜೆಡಿಎಸ್‌ ಕಾರ್ಯಕರ್ತ  ವಸಂತ್‌ ಅವರ ಮೇಲೆ ಮಚ್ಚಿನಿಂದ ಹಲ್ಲೆ ನೆಡೆಸಿದ್ದು, ಈ ಸಂಬಂಧ ತುರುವೇಕೆರೆ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿತ್ತಾದರೂ, ಶಾಸಕ ಮಸಾಲ ಜಯರಾಮ್‌ ಅವರ ಒತ್ತಡದಿಂದ ಆರೋಪಿಯನ್ನು ಬಂಧಿಸುವಲ್ಲಿ  ಪೊಲೀಸರು ವಿಳಂಬ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಶಾಸಕ ಮಸಾಲ ಜಯರಾಮ್‌ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ  ಕುಸಿ ದಿದೆ. ತಾಲೂಕಿನ ಅಧಿಕಾರಿಗಳನ್ನು ತಮ್ಮ ಹಿಂಬಾಲಕರ ಕೆಲಸ ಕಾರ್ಯಗಳಿಗಾಗಿ ಶಾಸಕರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುನಿಯೂರು ಗ್ರಾಮದ ವಸಂತ್‌ ಮೇಲೆ ಬಿಜೆಪಿ ಕಾರ್ಯಕರ್ತ ಪುನೀತ್‌ ಮಚ್ಚಿನಿಂದ ಹಲ್ಲೆ  ನಡೆಸಿದ್ದಾನೆ. ಆದರೂ ಪುನೀತ್‌ನನ್ನು ಬಂಧಿಸದಂತೆ ಪೊಲೀಸರಿಗೆ ಶಾಸಕ ಮಸಾಲ ಜಯ ರಾಮ್‌ ಒತ್ತಡ ಹಾಕಿದ್ದಾರೆ. ಜೆಡಿಎಸ್‌ ಕಾರ್ಯ ಕರ್ತರಿಗೆ ಶಾಸಕ ಮಸಾಲಜಯರಾಮ್‌ ವಿನಾಕಾರಣ ಕಿರುಕುಳ ನೀಡಿದರೆ ಸಹಿಸಲಾಗದು.

ಹಲ್ಲೆ ನಡೆಸಿರುವ ಪುನೀತ್‌ ನನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರು, ಸಾರ್ವಜನಿಕರು, ಪ್ರತಿಭಟನಾ ಮೆರವಣಿಗೆ ನಡೆಸಿ, ಪೊಲೀಸ್‌ ಕಾರ್ಯವೈಖರಿ, ಶಾಸಕ ಮಸಾಲ ಜಯರಾಂ ವಿರುದಟಛಿ ಘೋಷಣೆ ಕೂಗಿದರು. ಅಂತಿಮ ವಾಗಿ ಸಿಪಿಐ ಲೋಕೇಶ್‌ ಹಾಗೂ ಪ್ರೀತಮ್‌ ಆರೋಪಿ ಯನ್ನು ಶೀಘ್ರ ಬಂಧಿಸುವ ಭರವಸೆ ನೀಡಿದರು. ನಂತರ ಪ್ರತಿಭಟನಾ ಕಾರರು ಪ್ರತಿಭಟನೆ ಹಿಂತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next