Advertisement
ಏನಿದು ಫಾಸ್ಟ್‌ಟ್ಯಾಗ್?ಫಾಸ್ಟ್‌ಟ್ಯಾಗ್ ಎನ್ನುವುದು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್ಐಡಿ) ತಂತ್ರಜ್ಞಾನ ಹೊಂದಿರುವ ಸ್ಟಿಕ್ಕರ್. ಈ ಸ್ಟಿಕ್ಕರ್ ಅನ್ನು ಕಾರು ಹಾಗೂ ಇತರ ನಾಲ್ಕು ಚಕ್ರವಾಹನಗಳ ಮುಂದಿನ ಗಾಜಿನ ಮೇಲೆ ಅಂಟಿಸಬೇಕು. ಟೋಲ್ ಪ್ಲಾಜಾವನ್ನು ಹಾದುಹೋಗುವಾಗ ನಿರ್ದಿಷ್ಟ ಶುಲ್ಕವು ಸ್ವಯಂ ಚಾಲಿತವಾಗಿ ಕಡಿತವಾಗುತ್ತದೆ. ಪರಿಣಾಮವಾಗಿ, ಹಣ ಪಾವತಿ ಮಾಡುವುದಕ್ಕಾಗಿ ಪಾಳಿಯ ಮೇಲೆ ಕಾಯುತ್ತಾ ನಿಲ್ಲುವ ಅಗತ್ಯವಿರುವುದಿಲ್ಲ. ಅಲ್ಲದೇ ಜೇಂಜ್ ಹೊಂದಿಸಬೇಕಾದ ಪ್ರಮೇಯವೂ ತಪ್ಪುತ್ತದೆ.
ಫಾಸ್ಟ್‌ಟ್ಯಾಗ್‌ಗೆ ಒಂದು ಬಾರಿಗೆ 200 ರೂಪಾಯಿ ನೋಂದಣಿ ಶುಲ್ಕ ಪಾವತಿಸಬೇಕು, ಒಮ್ಮೆ ನೋಂದಣಿಯಾದಅನಂತರ, ಅಗತ್ಯಕ್ಕೆ ತಕ್ಕಂತೆ ನೀವು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಗೂಗಲ್ ಪೇ, ಪೇಟಿಎಂ, ಫೋನ್ ಪೇನಿಂದ ರೀಚಾರ್ಜ್ ಮಾಡಿಸುತ್ತಾ ಇರಬಹುದು. ಫಾಸ್ಟ್‌ಟ್ಯಾಗ್‌ಗೆ ಎಕ್ಸ್‌ಪೈರಿ ದಿನಾಂಕ ಇರುವುದಿಲ್ಲ, ಅದರ ಮೇಲಿನ ವಿವರ ಅಳಿಸುವವರೆಗೂ ಬಳಸಬಹುದು. ಎಲ್ಲಿ ಸಿಗುತ್ತದೆ?
ಎಸ್‌ಬಿಐ, ಆ್ಯಕ್ಸಿಸ್ ಬ್ಯಾಂಕ್, ಐಸಿಐಸಿಐ, ಐಡಿಎಫ್ಸಿ, ಎಚ್‌ಡಿಎಫ್ಸಿ, ಕರೂರ್ ವೈಶ್ಯಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಫೆಡರಲ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಸಾರಸ್ವತ ಬ್ಯಾಂಕ್, ಯಸ್ ಬ್ಯಾಂಕ್ ಸೇರಿದಂತೆ ದೇಶದ 22 ಬ್ಯಾಂಕ್‌ಗಳಿಗೆ ಫಾಸ್ಟ್‌ಟ್ಯಾಗ್ ವಿತರಿಸಲು ಕೇಂದ್ರ ಅನುಮತಿ ನೀಡಿದೆ. ಇದಷ್ಟೇ ಅಲ್ಲದೇ, ಫಾಸ್ಟ್‌ಟ್ಯಾಗ್ ಅನ್ನು ಪೇಟಿಎಂ, ಫೋನ್‌ಪೇ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕವೂ ನಿಮ್ಮ ಮನೆಗೇ ಆರ್ಡರ್ ಮಾಡಬಹುದು.
Related Articles
ನೀವು ನೇರವಾಗಿಯೇ ಬ್ಯಾಂಕ್‌ನಿಂದ ಖರೀದಿಸಿದರೆ, ಸೂಕ್ತ ದಾಖಲೆಗಳನ್ನು ಅಲ್ಲಿಯೇ ಸಲ್ಲಿಸಿ ಆ್ಯಕ್ಟಿವೇಟ್ ಮಾಡ
ಬಹುದು. ನಿಮ್ಮ ಮನೆಗೆ ಆರ್ಡರ್ ಮಾಡಿ ತರಿಸಿಕೊಂಡಿದ್ದರೆ, ಬ್ಯಾಂಕ್ ಶಾಖೆಗೆ ಹೋಗಿ ಸಕ್ರಿಯಗೊಳಿಸಬಹುದು. ಇಲ್ಲವೇ,
My FASTag ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ಬ್ಯಾಂಕ್ ಖಾತೆ ಸೇರಿದಂತೆ, ವಿವರಗಳನ್ನು ನಮೂದಿಸಿ ಸಕ್ರಿಯಗೊಳಿಸಬಹುದು.
Advertisement
ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ?ಆಗ ಶುಲ್ಕದ ಎರಡು ಪಟ್ಟು ಮೊತ್ತ ಪಾವತಿಸಿ, ಜತೆಗೆ ಟೋಲ್‌ನಲ್ಲೇ ಫಾಸ್‌ಟ್ಯಾಗ್ ಹಾಕಿಸಬೇಕಾಗುತ್ತದೆ.