Advertisement

Fastrack Watch ರಿಫ್ಲೆಕ್ಸ್‌ ಪ್ಲೇ; ಗೇಮ್‌ ಇರುವ ಸ್ಮಾರ್ಟ್‌ವಾಚ್‌

07:57 PM Jul 23, 2022 | Team Udayavani |

Fastrack ಸಂಸ್ಥೆಯು ರಿಫ್ಲೆಕ್ಸ್‌ ಪ್ಲೇ ಸ್ಮಾರ್ಟ್‌ವಾಚ್‌ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಜು.23-24ರಂದು ಅಮೆಜಾನ್‌ ಪ್ರೈಂ ಡೇ ಸೇಲ್‌ ನಡೆಯುತ್ತಿದ್ದು, ಅದರಲ್ಲಿ ಈ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಲಾಗಿದೆ.

Advertisement

ಸ್ಮಾರ್ಟ್‌ವಾಚ್‌ನ ಬೆಲೆ 7995 ರೂ. ಇದ್ದು, ಆರಂಭಿಕ ಆಫ‌ರ್‌ ಆಗಿ 5,995 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಈ ಸ್ಮಾರ್ಟ್‌ವಾಚ್‌ನಲ್ಲಿ 1.3 ಇಂಚಿನ ಡಿಸ್ಪೆ ಇದೆ. ಬಿಲ್ಟ್ ಇನ್‌ ಗೇಮ್‌ಗಳೂ ಇವೆ. ಇ-ಮೇಲ್‌, ಮೆಸೇಜ್‌ನಂತಹ ಎಲ್ಲ ನೋಟಿಫಿಕೇಶನ್‌ಗಳನ್ನು ನೀವು ಸ್ಮಾರ್ಟ್‌ವಾಚ್‌ನಲ್ಲೇ ನೋಡಬಹುದು. ಕ್ಯಾಮರಾ ಮತ್ತು ಮ್ಯೂಸಿಕ್‌ ನಿಯಂತ್ರಿಸಲೂ ಇದರಲ್ಲಿ ಅವಕಾಶವಿದೆ.

ವಿವಿಧ ಸ್ಪೋರ್ಟ್ ಮೋಡ್‌ಗಳಿರುವ ಈ ಸ್ಮಾರ್ಟ್‌ವಾಚ್‌ನಲ್ಲಿ 7 ದಿನಗಳ ಬ್ಯಾಟರಿ ಸಾಮರ್ಥ್ಯವಿದೆ ಎಂದು ಸಂಸ್ಥೆ ತಿಳಿಸಿದೆ. ಇದು ನಾಲ್ಕು ಬಣ್ಣಗಳಲ್ಲಿ ಲಭ್ಯ.

Advertisement

Udayavani is now on Telegram. Click here to join our channel and stay updated with the latest news.

Next