Advertisement

ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹ ಕೈ ಬಿಡಲ್ಲ: ಹೊರಟ್ಟಿ

05:29 PM Dec 07, 2020 | Adarsha |

ಧಾರವಾಡ: ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವ ಮಾತಿಲ್ಲ ಎಂದು ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

Advertisement

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಡಿಕೆ ಈಡೇರಿಕೆ ಕುರಿತು ಚರ್ಚಿಸಲು ಸಭೆ ನಿಗದಿ ಮಾಡಲಾಗುವುದಲ್ಲದೆ, ಸದನದಲ್ಲಿ ಸಹ ಚರ್ಚೆ ನಡೆಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೆ ಕೇವಲ ಸಭೆ ಕರೆದರೆ ಸಾಲದು, ನಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಕೇವಲ ಭರವಸೆ ನೀಡಿದರೆ, ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮರಳಿ ಗೂಡಿಗೆ: ಕಾಂಗ್ರೆಸ್ ತೊರೆದ ನಟಿ ವಿಜಯಶಾಂತಿ ಬಿಜೆಪಿ ಸೇರ್ಪಡೆ

ಈಗಾಗಲೇ ಸದನ ಪ್ರಾರಂಭವಾಗಿದ್ದು, ಮೊದಲ ದಿನವೇ ಈ ಕುರಿತು ಚರ್ಚೆ ನಡೆಸಲು ಶೂನ್ಯ ಸಮಯದಲ್ಲಿ ಪ್ರಶ್ನೆ ಎತ್ತುವಂತೆ ಎಸ್.ವಿ. ಸಂಕನೂರ ಅವರಿಗೆ ಹೇಳಲಾಗಿದೆ. ನಾನೂ ಕೂಡಾ ನಾಳೆಯಿಂದ ಸದನಕ್ಕೆ ಹಾಜರಾಗಿ ಚರ್ಚೆ ನಡೆಸುತ್ತೇನೆ. ಅಗತ್ಯ ಬಿದ್ದರೆ ಸದನದಲ್ಲಿ ಸಹ ಹೋರಾಟ ನಡೆಸಲಾಗುವುದು ಎಂದರು.

ಸರ್ಕಾರದ ನಿರ್ಲಕ್ಷದಿಂದ ಉತ್ತರ ಕರ್ನಾಟಕ ಭಾಗದಲ್ಲಿನ ಖಾಸಗಿ ಶಾಲೆಗಳು ಸಮಸ್ಯೆಗೆ ಸಿಲುಕಿವೆ. ಅವರ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ಈ ಶಾಲೆಗಳು ಬಂದ್ ಆಗುವುದರಲ್ಲಿ ಸಂಶಯವೇ ಇಲ್ಲ. ಹೀಗಾಗಿ ಸರ್ಕಾರ ನಿರ್ಲಕ್ಷ ವಹಿಸದೆ ಶೀಘ್ರದಲ್ಲೇ ಸಮಸ್ಯೆ ಪರಿಹರಿಸಿ ಶಿಕ್ಷಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next