Advertisement

ಶಿಕ್ಷಕರಿಂದ ಆಮರಣಾಂತ ಉಪವಾಸ

12:28 PM Sep 12, 2018 | Team Udayavani |

ಬೆಂಗಳೂರು: ವೇತನ ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ 57 ದಿನಗಳಿಂದ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಶಿಕ್ಷಕರು ಆಮರಣಾಂತ ಉಪವಾಸ ಕೈಗೊಂಡಿದ್ದಾರೆ.

Advertisement

ಅನುದಾನಕ್ಕೆ ಒಳಪಡಿಸುವ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿದ್ದರೂ, ಆದೇಶ ಹೊರಬಿದ್ದಿಲ್ಲ. ಸರ್ಕಾರದಿಂದ ಲಿಖೀತ ಆದೇಶ ಬರುವವರೆಗೂ  ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಶಿಕ್ಷಕರು ಮಂಗಳವಾರದಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಶಿಕ್ಷಕರ 57ನೇ ದಿನದ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿರುವ ಮಹದಾಯಿ ಸೇನಾ ಸಮಿತಿ ಅಧ್ಯಕ್ಷ ವಿರೇಶ ಸೊಬರದಠ, ಕನ್ನಡ ಶಾಲೆ ಉಳಿಸಿ ಆಂದೋಲನದ ಅಧ್ಯಕ್ಷ ಅನಿಲ್‌ ಶೆಟ್ಟಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಮಂಗಳವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸರ್ಕಾರದಿಂದ ಲಿಖೀತ ಆದೇಶ ಬರುವ ವರೆಗೂ ಅಮರಣಾಂತ ಉಪವಾಸ ನಡೆಸಲಿದ್ದೇವೆ ಎಂದು ರಾಜ್ಯ ಅನುದಾನಕ್ಕೊಳಪಡಿಸುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಕ್ಕೂಟದ ಅಧ್ಯಕ್ಷ ವರದರಾಜ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next