Advertisement

“ಉಪವಾಸದ ಮೂಲಕ ಆತ್ಮಸಂಸ್ಕಾರ, ದೇಹದ ಪರಿಶೋಧನೆ’

10:52 PM Jun 14, 2019 | Team Udayavani |

ಕಾಪು: ಉಪವಾಸ ಆತ್ಮ ಸಂಸ್ಕಾರ ಮತ್ತು ದೇಹದ ಪರಿಶೋಧನೆಗಾಗಿ ನಡೆಸುವ ಚಟುವಟಿಕೆಯಾಗಿದೆ. ಈದ್‌ನ ಸಂಭ್ರಮದಲ್ಲಿ ನಡೆಸುವ ಉಪವಾಸವು ಕೇವಲ ಹೊಟ್ಟೆಗೆ ಮಾತ್ರ ಸೀಮಿತವಾಗಿ ರುವಂತದಲ್ಲ. ದೇಹದ ಪ್ರತಿಯೊಂದು ಅಂಗಾಂಗಳು ಮತ್ತು ಕ್ರಿಯಾ ಚಟುವಟಿಕೆಗಳಿಗೂ ಇದರ ಕರ್ಮಗಳು ಅನ್ವಯವಾಗುತ್ತವೆ ಎಂದು ಸದಾºವನಾ ಮಂಚ್‌ನ ರಾಜ್ಯ ಕಾರ್ಯದರ್ಶಿ ಜ| ಅಕ್ಬರ್‌ ಅಲಿ ಉಡುಪಿ ಹೇಳಿದರು.

Advertisement

ಜೂ. 13ರಂದು ಕಾಪು ಜಮೀಯ್ಯತ್ತುಲ್‌ ಫಲಾಹ್‌ ಸಂಸ್ಥೆಯ ವತಿಯಿಂದ ಪ್ರಸ್‌ ಕ್ಲಬ್‌ನ ಸದಸ್ಯರೊಂದಿಗೆ ಸಿಟಿ ಸೆಂಟರ್‌ನಲ್ಲಿ ಹಮ್ಮಿಕೊಳ್ಳಲಾದ ಈದ್‌ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಈದ್‌ ಸೌಹಾರ್ದ ಸಂದೇಶ ನೀಡುತ್ತಾ ಅವರು ಮಾತನಾಡಿದರು.

ಈದ್‌ ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಮೆರೆಯುವ ಹಬ್ಬವಾಗಿದೆ. ಸಮಾಜದ ಜನರೊಳಗೆ ಸದ್ಭಾವನೆಯ ಚಿಂತನೆಯನ್ನು ಮೂಡಿಸುವಲ್ಲಿ ಸೌಹಾರ್ದ ಕೂಟಗಳು ಸಹಕಾರಿಯಾಗುತ್ತವೆ. ಮನುಷ್ಯನ ಜೀವನ ಅತ್ಯಂತ ಶ್ರೇಷ್ಠವಾಗಿದ್ದು ಎಲ್ಲರನ್ನೂ, ಎಲ್ಲಾ ಧರ್ಮಗಳನ್ನೂ ಮತ್ತು ಎಲ್ಲವನ್ನೂ ಪ್ರೀತಿಸುವ ಗುಣಗಳಿಂದಲೇ ಮನುಷ್ಯ ಶ್ರೇಷ್ಠತೆಯೊಂದಿಗೆ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಮೋದ್‌ ಸುವರ್ಣ ಕಟಪಾಡಿ ಮಾತನಾಡಿ, ಸಮಾಜದ ಎಲ್ಲಾ ಆಯಾಮಗಳಲ್ಲೂ ಕೆಲಸ ಮಾಡುವ ಪತ್ರಕರ್ತರನ್ನು ಕಾಡುವ ಧರ್ಮಗಳ ಆಚರಣೆಯ ಕುರಿತಾದ ವ್ಯತ್ಯಾಸಗಳು ಮತ್ತು ಪದ್ಧತಿಗಳನ್ನು ತಿಳಿಸಿಕೊಡುವಲ್ಲಿ ಈ ಕಾರ್ಯಕ್ರಮ ಅತ್ಯಂ ತ ಸ್ವಾಗತಾರ್ಹವಾದುದ್ದಾಗಿದೆ ಎಂದರು.

ಜಮೀಯತ್ತುಲ್‌ ಫಲಾಹ್‌ನ ಅಧ್ಯಕ್ಷ ಶಬ್ಬೀರ್‌ ಅಹಮ್ಮದ್‌ ಖಾಝಿ, ಕಾಪು ಪ್ರಸ್‌ ಕ್ಲಬ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

Advertisement

ಜಮಾಅತೆ ಇಸ್ಲಾಮಿ ಹಿಂದ್‌ ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್‌ ಅಲಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಸಂಘಟಕರಾದ ಮುಹಮ್ಮದ್‌ ಇಕ್ಬಾಲ್‌ ಸಾಹೇಬ್‌ ವಂದಿಸಿದರು. ಎಸ್‌.ಐ.ಒ ಜಿಲ್ಲಾ ಕಾರ್ಯದರ್ಶಿ ಮುಹಮ್ಮದ್‌ ಶಾರೂಕ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next