Advertisement

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ನಿರಶನ

08:39 AM Jun 11, 2019 | Team Udayavani |

ಹೊಸಪೇಟೆ: ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಹಾಗೂ ಜಿಂದಾಲ್ ಕಂಪನಿಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡಲು ಮುಂದಾಗಿರುವ ಸರ್ಕಾರದ ಕ್ರಮ ವಿರೋಧಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು, ಸೋಮವಾರ ಟಿ.ಬಿ.ಡ್ಯಾಂ (ಗಣೇಶ್‌ ದೇವಸ್ಥಾನ) ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Advertisement

ಟಿ.ಬಿ. ಡ್ಯಾಂನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಧರಣಿ ಕುಳಿತ ರೈತರು, ರೈತರ ಒಪ್ಪಿಗೆಯಿಲ್ಲದೆ ಯಾವುದೇ ಕಾರಣಕ್ಕೂ ಭೂಸ್ವಾಧೀನ ಪಡಿಸಿಕೊಳ್ಳಬಾರದು. ಜಿಂದಲ್ ಕಂಪನಿಗೆ ಒಂದು ಎಕರೆಗೆ 1.22 ಲಕ್ಷ ರೂ.ಗಳಂತೆ 3,666 ಎಕರೆ ಭೂಮಿಯನ್ನು ಮಾರಾಟ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರು ಕಳೆದ ನಾಲ್ಕೈದು ವರ್ಷದಿಂದ ಭೂಮಿಗಳಿಗೆ ಸಮರ್ಪಕ ನೀರು ಸಿಗದೇ ಪರದಾಡುತ್ತಿದ್ದು, ತುಂಗಭದ್ರ ಬಲದಂಡೆ ಕೆಳಮಟ್ಟದ ಕಾಲುವೆಯನ್ನು ಲೈನಿಂಗ್‌ ಹೆಸರಲ್ಲಿ ನವೀಕರಣಗೊಳಿಸುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಉಪವಿಭಾಗಾಧಿಕಾರಿ ಪಿ.ಎನ್‌. ಲೋಕೇಶ್‌ ಭೇಟಿ ನೀಡಿ, ರೈತರ ಕೆಲ ಸಮಸ್ಯೆಗಳ ಈಡೇರಿಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು. ಡಿವೈಎಸ್‌ಪಿ ಎಲ್.ನಾಗೇಶ್‌, ಪಿಐಗಳಾದ ಅಯ್ಯನಗೌಡ ಪಾಟೀಲ್, ಸಿದ್ದೇಶ್ವರ್‌, ಪರಸಪ್ಪ ಭಜಂತ್ರಿ, ಮಂಜುನಾಥ, ಎಸ್‌.ಕೆ.ಪವಾರ್‌, ಸೇರಿದಂತೆ ಇತರೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದರು.

ವಾಹನ ಸಂಚಾರದಲ್ಲಿ ವ್ಯತ್ಯಯ: ಹೆದ್ದಾರಿ ಬಂದ್‌ನಿಂದಾಗಿ ಸುಮಾರು ನಾಲ್ಕಾರು ತಾಸುಗಳು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು ಪರದಾಡಿದರು. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸಾವರರಿಗೆ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಟ್ರಾಫಿಕ್‌ ಸಮಸ್ಯೆ ಉಂಟಾಗದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಾಹನಗಳಿಗೆ ಪರ್ಯಾಯ ಮಾರ್ಗಗಳ ವ್ಯವಸ್ಥೆ ಕಲ್ಪಿಸಿದ್ದರು.

Advertisement

ಜಿಲ್ಲಾ ಕಾರ್ಯಧ್ಯಕ್ಷ ಪಿ.ನಾರಾಯಣ ರೆಡ್ಡಿ, ತಾಲೂಕು ಅಧ್ಯಕ್ಷ ಸಣ್ಣಕ್ಕಿ ರುದ್ರಪ್ಪ, ಮುಖಂಡರಾದ ಚಿನ್ನದೊರೆ, ಎಲ್.ಎಸ್‌.ರುದ್ರಪ್ಪ, ರೇವಣಸಿದ್ದಪ್ಪ, ಜಾಕೀರ್‌, ಸುರೇಶ್‌, ಮಲ್ಲಿಕಾರ್ಜುನ, ಶ್ರೀನಿವಾಸ್‌, ಬಿ.ವಿ. ಗೌಡ, ಚೆಲ್ಲವೆಂಕಟ ನಾಯ್ಡು, ವಿ.ಟಿ. ನಾಗರಾಜ, ಮಧುಸೂದನ್‌, ಜೀರ ಸಂಘಪ್ಪ, ಸುದರ್ಶನ್‌, ಖಾಸಿಂ ಸಾಬ್‌, ರಂಗಪ್ಪ, ರಮೇಶ್‌, ಜಡಿಯಪ್ಪ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next