Advertisement

ಕಡ್ಡಾಯಗೊಳ್ಳದ ಫಾಸ್ಟಾಗ್‌; ವಾಹನ ಸಂಚಾರ ಎಂದಿನಂತೆ

10:01 AM Jan 17, 2020 | Team Udayavani |

ಕೋಟ: ಕೇಂದ್ರ ಸರಕಾರದ ಆದೇಶ ದಂತೆ ಜ. 15ರಿಂದ ದೇಶದ ಎಲ್ಲ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟಾಗ್‌ ಕಡ್ಡಾಯಗೊಂಡು ಎರಡು ಗೇಟ್‌ಗಳನ್ನು ಹೊರತುಪಡಿಸಿ ಮಿಕ್ಕೆಲ್ಲವು ನಗದು ರಹಿತವಾಗಿ ಕಾರ್ಯನಿರ್ವಹಿಸಬೇಕಿತ್ತು. ಆದರೆ ಬುಧವಾರ ಈ ಆದೇಶ ಕಡ್ಡಾಯವಾಗಿ ಜಾರಿಗೊಂಡಿಲ್ಲ ಹಾಗೂ ಕರಾವಳಿಯ ಎಲ್ಲ ಟೋಲ್‌ ಗೇಟ್‌ಗಳಲ್ಲಿ ಸಂಚಾರ ಹಿಂದಿನಂತೆ ಮುಂದುವರಿದಿದೆ.

Advertisement

ಉಡುಪಿ, ದ.ಕ. ಟೋಲ್‌ಗ‌ಳಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಎರಡು ಟೋಲ್‌ಪ್ಲಾಜಾಗಳಲ್ಲಿ 2 ಗೇಟುಗಳು ಸ್ಥಳೀಯರಿಗೆ, 2 ತುರ್ತು ಪ್ರವೇಶಕ್ಕೆ ಹಾಗೂ 2ರಲ್ಲಿ ನಗದು ವ್ಯವಹಾರ ನಡೆಯುತ್ತಿತ್ತು. ಆದೇಶದ ಪ್ರಕಾರ ಜ. 15ಕ್ಕೆ ಈ ವ್ಯವಸ್ಥೆ ರದ್ದುಗೊಂಡು 2 ಗೇಟ್‌ ಹೊರತುಪಡಿಸಿ ಮಿಕ್ಕೆಲ್ಲ ಫಾಸ್ಟಾ Âಗ್‌ ಆಗಬೇಕಿತ್ತು. ಆದರೆ ಈ ರೀತಿ ಮಾಡಿಲ್ಲ. ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಎನ್‌.ಎಚ್‌ಎಐಯಿಂದ ಯಾವುದೇ ಸೂಚನೆ ಹೊರಬಿದ್ದಿಲ್ಲ ಎನ್ನಲಾಗಿದೆ.

ಜ. 16ರಿಂದ ದುಪ್ಪಟ್ಟು ಶುಲ್ಕ ಸಾಧ್ಯತೆ
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್‌ ಫ್ಲಾಜಾ ದಲ್ಲಿ ಫಾಸ್ಟಾ Âಗ್‌ ಅಳವಡಿಸದ ವಾಹನದವರಿಗೆ ಜ. 16ರ ಬಳಿಕ ದುಪ್ಪಟ್ಟು ಶುಲ್ಕ ವಿಧಿಸುವ ಸಾಧ್ಯತೆ ಇದೆ. ಬುಧವಾರದವರೆಗೆ ಹಣ ಪಾವತಿ ಸುವ ವಾಹನಗಳು ಹಿಂದಿನ ಮೊತ್ತದಲ್ಲೇ ಶುಲ್ಕ ವಿಧಿಸಿ ಸಾಗಿವೆ. ಫಾಸ್ಟಾ Âಗ್‌ನ ಅಳವಡಿಕೆ ಕಾರ್ಯ ನಿರಂತರವಾಗಿ ನಡೆಯುತ್ತಿದೆ.

ಹೆಜಮಾಡಿ: ನಗದು ಪಾವತಿಗೆ ಒಂದೇ ದ್ವಾರ
ಪಡುಬಿದ್ರಿ: ಹೆಜಮಾಡಿ ಟೋಲ್‌ ಗೇಟ್‌ನಲ್ಲಿ ಬುಧವಾರ ಮಂಗಳೂರಿಗೆ ತೆರಳುವ ವಹನಗಳ ದಟ್ಟಣೆ ಇದ್ದುದರಿಂದ ಎರಡು ನಗದು ಪಾವತಿ ದ್ವಾರಗಳು ಕಾರ್ಯವೆಸಗಿವೆ. ಗುರುವಾರದಿಂದ ಒಂದೇ ನಗದು ಪಾವತಿ (7ನೇ ದ್ವಾರ) ದ್ವಾರವು ಕಾರ್ಯವೆಸಗಲಿದೆ. ನಾಳೆಯಿಂದ ಫಾಸ್ಟಾ Âಗ್‌ ದ್ವಾರದಲ್ಲಿ ಇದನ್ನು ಹೊಂದದ ವಾಹನಗಳು ಬಂದಲ್ಲಿ ದುಪ್ಪಟ್ಟು ಪಾವತಿಸಿ ತೆರಳಬೇಕಾಗುತ್ತದೆ ಎಂದು ಹೆಜಮಾಡಿ ಟೋಲ್‌ ಗೇಟ್‌ ಮೂಲಗಳು ತಿಳಿಸಿವೆ.

ಬಗೆಹರಿಯದ ಬಸ್‌ ಸಮಸ್ಯೆ
ಉಳ್ಳಾಲ: ಕಡ್ಡಾಯ ಟೋಲ್‌ ಆರಂಭವಾದರೆ ಮಂಗಳೂರು-ತಲಪಾಡಿ ನಡುವೆ ಸಂಚರಿಸುವ ಎಲ್ಲ ಬಸ್‌ಗಳು ಕಡ್ಡಾಯ ಟೋಲ್‌ನಡಿ ಬರುವುದರಿಂದ ಎಷ್ಟು ಟೋಲ್‌ ಕಟ್ಟಬೇಕು ಎಂಬ ವಿಚಾರದಲ್ಲಿ ಯಾವುದೇ ಒಪ್ಪಂದ ನಡೆದಿಲ್ಲ. ಟೋಲ್‌ ಕಡ್ಡಾಯ ಆದರೆ ಗೇಟ್‌ ಬಳಿಯೇ ಬಸ್‌ ಸಂಚಾರ ಮೊಟಕುಗೊಳಿಸುವ ಸಾಧ್ಯತೆಯಿದ್ದು ಮೇಲಿನ ತಲಪಾಡಿ ಮತ್ತು
ಕೇರಳದ ಗಡಿ ಪ್ರದೇಶಕ್ಕೆ ತೆರಳುವ ಪ್ರಯಾಣಿಕ ರಿಗೆ ತೊಂದರೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next