Advertisement
ಫಾಸ್ಟ್ ಟ್ಯಾಗ್ ರೀಡಿಂಗ್‌ನಲ್ಲಿ ರವಿವಾರ ಸರ್ವರ್ ವೇಗವಿದ್ದುದರಿಂದ ವಾಹನ ಸವಾರರಿಗೆ ಕಾಯುವ ಪ್ರಮೇಯ ಬರಲಿಲ್ಲ.ಟೋಲ್ ಸೆನ್ಸಾರ್ ಮುಂದೆ ಬಂದು ನಿಂತ ಐದು ಸೆಕೆಂಡ್‌ಗಳಲ್ಲಿ ಗೇಟ್ ತೆರೆಯಲ್ಪಡುತ್ತಿತ್ತು.ಇನ್ನು ಕೆಲವು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿದ್ದರೂ ಆಕ್ಟಿವೇಟ್ ಮಾಡಿರಲಿಲ್ಲ. ಸ್ಟಿಕ್ಕರ್ ಮುಂಭಾಗ ಧೂಳು ನಿಂತಿದ್ದ ವಾಹನಗಳನ್ನು ಹ್ಯಾಂಡ್ ಸ್ಕ್ಯಾನರ್ ಬಳಕೆ ಮಾಡಿ ಕಳಿಸಿಕೊಡಲಾಯಿತು.ಕಂಪ್ಯೂಟರ್ ಕೈಕೊಟ್ಟಲ್ಲಿ 10ಕ್ಕೂ ಮಿಕ್ಕಿ ಸ್ಕ್ಯಾನರ್ ಗಳು ಟೋಲ್ ಸಿಬಂದಿಗಳಿಗೆ ಒದಗಿಸಲಾಗಿದೆ. ಫಾಸ್ಟ್ ಟ್ಯಾಗ್ ಲೇನ್‌ನಲ್ಲಿ ನಿಮಿಷಕ್ಕೆ ಸರಾಸರಿ ಆರರಿಂದ ಏಳು ವಾಹನ ಸಂಚರಿಸುತ್ತಿತ್ತು.
ರವಿವಾರದಿಂದ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಪೊಲೀಸ್ ಭದ್ರತೆ ನೀಡಲಾಗಿದೆ.ಒಂದು ತುಕಡಿ ಕೆಎಸ್‌ಆರ್‌ಪಿ , ಹೆ„ವೆ ಪೆಟ್ರೋಲಿಂಗ್ ವಾಹನಗಳು ಭದ್ರತೆ ಒದಗಿಸಿದ್ದವು. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಅ ಕಾರಿಗಳು ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಬೀಚ್ ರಸ್ತೆಯಲ್ಲಿ ವಾಹನಗಳ ಓಡಾಟ!
ಸ್ಥಳೀಯ ವಾಹನಗಳು ಸುರತ್ಕಲ್ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬಳಿಯ ಬೀಚ್ ರಸ್ತೆಯಾಗಿ ಸಾಗಿ ಮುಕ್ಕ ಹೆದ್ದಾರಿಯನ್ನು ಸೇರುತ್ತಿದ್ದವು. ಹೆಚ್ಚಿನ ವಾಹನಗಳು ಟೋಲ್ ನೀಡುವುದನ್ನು ತಪ್ಪಿಸಲು ಈ ಮಾರ್ಗವನ್ನು ಆಯ್ಕೆ ಮಾಡಿವೆ.