Advertisement
ಡಿಜಿಟಲ್ ಟೋಲ್ ಎನ್ನಲಾಗಿರುವ ಈ ಫಾಸ್ಟ್ಯಾಗ್ ಅನ್ನು ರಿಚಾರ್ಜ್ ಮಾಡಿಕೊಳ್ಳಬಹುದು ಅಥವಾ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ನಿಯಮದಿಂದ ಟೋಲ್ ಪ್ಲಾಜಾಗಳಲ್ಲಿ ಕ್ಯೂ ನಿಲ್ಲಬೇಕಾದ ತಲೆ ಬಿಸಿ ಇರುವುದಿಲ್ಲ. ಅಲ್ಲದೆ ಚಿಲ್ಲರೆ ಸಮಸ್ಯೆ ಹಾಗೂ ಇನ್ನಿತರ ತೊಂದರೆಗಳಿಂದ ಸಹ ಪಾರಾಗಬಹುದು. ಆ ಹಿನ್ನಲೆಯಲ್ಲಿ ಉದಯವಾಣಿ “ಡಿಸೆಂಬರ್ ನಿಂದ ದೇಶಾದ್ಯಂತ ಎಲ್ಲಾ ಟೋಲ್ ಗೇಟ್ ಗಳಲ್ಲಿ ಫಾಸ್ಟ್ಯಾಗ್ ಕಡ್ಡಾಯವಾಗುತ್ತಿರುವುದು ವಾಹನ ಸವಾರರಿಗೆ ಅನುಕೂಲವಾಗಬಹುದೇ?” ಎಂಬ ಪ್ರೆಶ್ನೆ ಕೇಳಿತ್ತು. ಅದಕ್ಕೆ ಬಂದ ಪ್ರತಿಕ್ರಿಯೆ ಇಂತಿವೆ.
Related Articles
Advertisement
ರೋಹಿಂದ್ರನಾಥ್ ಕೋಡಿಕಲ್ : ತಂತ್ರಜ್ಞಾನ ಹೆಚ್ಚೆಚ್ಚು ಅನುಕೂಲ ಆಗಲಿದೆ. ಅದಕ್ಕೆ ಹೊಂದಿಕೊಳ್ಳುವುದು ಕೂಡ ಅನಿವಾರ್ಯ. ಪಟ್ಟಣದ ಒಳಗೆ ಮಾತ್ರ ವಾಹನ ಚಾಲನೆ ಮಾಡು ವವರು ೆರಡು ಪಟ್ಟು ದಂಡ ತೆರಬೇಕಾಗಿ ಬರುವುದು ತುಂಬಾ ಅನ್ಯಾಯ. ತೆರಿಗೆ ತೆತ್ತೂ ಕೂಡ ರಸ್ತೆಯ ಮೇಲೆ ಸಂಚಾರ ಮಾಡಬೇಕಾದಲ್ಲಿ ಪ್ರಜೆಗಳು ಮತ್ತೆ ಹಣ ತೆರಬೇಕಾದದು ಯಾಕೋ ಸರಿಯಾದ ಕ್ರಮ ಅಲ್ಲ.
ಚಿದಂಬರ್: ಈ ತಿಂಗಳ ಕೊನೆಯೊಳಗೆ ಫಾಸ್ಟ್ಯಾಗ್ ಅಳವಡಿಸಿಕೊಳ್ಳದಿದ್ದರೆ ಡಿಸೆಂಬರ್ ಒಂದರಿಂದ ದುಪ್ಪಟ್ಟು ಶುಲ್ಕ ಪಾವತಿಸಬೇಕಾಗುತ್ತದೆ ಎಂಬುದು ತಪ್ಪು ಮಾಹಿತಿ. ವಾಸ್ತವವಾಗಿ ಎಲ್ಲ ಲೇನ್‌ಗಳು ಫಾಸ್ಟ್ಯಾಗ್ ಗುರುತಿಸುವ ಸ್ವಯಂಚಾಲಿತ ವ್ಯವಸ್ಥೆ ಹೊಂದಬೇಕು ಮತ್ತು ಒಂದು ಲೇನ್‌ನಲ್ಲಿ . ಫಾಸ್ಟ್ಯಾಗ್ ಉಳ್ಳ ಅಥವಾ ಸ್ಥಳದಲ್ಲೇ ಶುಲ್ಕ ಪಾವತಿ ಮಾಡಬಯಸುವ ವಾಹನಗಳೆರಡೂ ಸಾಗುವ ವ್ಯವಸ್ಥೆ ಇರಬೇಕು ಎಂದು ಕಡ್ಡಾಯ ಮಾಡಿರುವುದು ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಿಗೆ. ಟ್ಯಾಗ್ ಅಳವಡಿಸದೆ ಇರುವ ವಾಹನಗಳು ಅವುಗಳಿಗಾಗೇ ನಿಗದಿಯಾಗಿರುವ ಲೇನ್‌ನಲ್ಲಿ ಸಾಗಿದರೆ ಮಾಮೂಲು ಟೋಲ್ ಪಾವತಿಸಿದರೆ ಸಾಕು. ಆದರೆ . ಫಾಸ್ಟ್ಯಾಗ್ ಅಳವಡಿಸಿದ ವಾಹನಗಳಿಗೆ ಮೀಸಲಾದ ಲೇನ್‌ಗಳಲ್ಲಿ ಸಾಗಿದರೆ ಮಾತ್ರ ದಂಡ ರೂಪವಾಗಿ ದುಪ್ಪಟ್ಟು ಶುಲ್ಕ ತೆರಬೇಕಾಗುತ್ತದೆ.
ಸ್ವಾದ್ ಖಾನ್ : ಟೋಲ್ ಎಂಬುವುದು ಒಂದು ಹಗಲು ದರೋಡೆ. ಫಾಸ್ಟ್ಯಾಗ್ ಬಂದ ನಂತರ ಜನರ ಜೇಬಿಗೆ ಕತ್ತರಿ ಬೀಳಲಿದೆ. ಸ್ಥಳಿಯರಿಗೆ ಇದರಿಂದ ತುಂಬಾ ಸಮಸ್ಯೆಯಾಗುತ್ತದೆ. ಆದರೇ ರಾಜಕಾರಣಿಗೆಳಿಗೆ ಟೋಲ್ ಗಳಲ್ಲಿ ಯಾವುದೇ ಹಣ ಪಾವತಿ ಮಾಡಬೇಕಿರುವುದಿಲ್ಲ. ಇದು ದೇಶದ ದುರಂತ.
ಶಾಂತಕುಮಾರ್ : ವಾಹನ ನೋಂದಣಿ ಪೂರ್ವದಲ್ಲಿ ರೋಡ್ ಟ್ಯಾಕ್ಸ್ ಎಂದು ಸಾವಿರಾರು ರೂಪಾಯಿಗಳನ್ನ ಕೊಟ್ಟಿರುತ್ತೇವೆ. ಅದರೂ ಟೋಲ್ ಗಳಲ್ಲಿ ಹಣ ಕಟ್ಟಬೇಕು . ಇದೊಂದು ಹಗಲು ದರೋಡೆ.
ತೀರ್ಥಪ್ಪ ಅಬಲೂರು: ಇದು ನಾಗರಿಕರಿಗೆ ಉಪಯೋಗವಿಲ್ಲ. ಏಕೆಂದರೆ ಈ ಮೊದಲು 2 ನಿಮಿಷ ಕಾಯುತ್ತಿದ್ದೇವೆ. ಫಾಸ್ಟ್ ಟ್ಯಾಗ್ ಬಂದ ನಂತರ 1 ನಿಮಿಷ ಕ್ಕೆ ಇಳಿಯಬಹುದು. ಅದು ಕೂಡ ಯಾವುದೇ ವಾಹನಗಳಿರದಿದ್ದರೆ ಮಾತ್ರ. ಿದರಿಂದ ಸರ್ಕಾರಕ್ಕೆ ಮಾತ್ರ ಲಾಭವಾಗುತ್ತದೆ.
ರಮೇಶ್ ಭಂಡಾರ್ಕರ್: ಇಲ್ಲಿ ಇಲೆಕ್ಟ್ರಾನಿಕ್ ವಿಧಾನದಿಂದ ಸಂಗ್ರಹವಾಗುವ ಟೋಲ್ ನ ಮೊತ್ತವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗಮನಿಸಬಹುದಾದ್ದರಿಂದ , ಈ ಮೊತ್ತವು ಟೋಲ್ ಸಂಗ್ರಾಹಕ ಸಂಸ್ಥೆಗಳಿಗೆ ಭಾರೀ ಲಾಭದಾಯಕವಾಗುತ್ತಿದ್ದರೆ ಮುಂದಿನ ದಿನಗಳಲ್ಲಿ ಟೋಲ್ ಶುಲ್ಕವನ್ನು ಕಡಿಮೆ ಮಾಡಬಹುದು.
ಗಾಯತ್ರಿ ರಮೇಶ್: ಹೊಸ ತಂತ್ರಜ್ಞಾನ ಅನುಕೂಲವೇ. ಏಕೆಂದರೇ ಇದರಿಂದ ಸಮಯ ಉಳಿಯುತ್ತದೆ. ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಮತ್ತು ಟೋಲ್ ಸಂಗ್ರಹದ ಪಕ್ಕಾ ಲೆಕ್ಕ ಸಿಗುತ್ತದೆ.
ಹಬೀಬ್ ಉಡುಪಿ: ತಂತ್ರಜ್ಞಾನ ಉತ್ತಮವಾಗಿರಬೇಕು. ಹೀಗಿರುವ ಕೆಲವೊಂದು ಫಾಸ್ಟ್ಯಾಗ್ ಲೇನ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಮೊದಲು ರಸ್ತೆಯನ್ನು ಸುಸಜ್ಜಿತವಾಗಿ ಮಾಡಿ ಸಂಚಾರ ಮುಕ್ತಕ್ಕೆ ಅವಕಾಶ ನೀಡಲಿ.
ಅಬ್ದುಲ್ ಅಜೀಜ್: ವಾಹನದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಫಾಸ್ಟ್ಯಾಗ್ ಕಡ್ಡಾಯ ಸ್ವಾಗತಾರ್ಹ. ಆದರೆ ಇದು ಜನರನ್ನು ಹಗಲು ದರೋಡೆ ಮಾಡುವ ತಂತ್ರಜ್ಞಾನವಾಗಿ ಬದಲಾಗದಿರಲಿ.