Advertisement

ಶಿರೂರು ಟೋಲ್‌ಗೇಟ್‌ ಸ್ಥಳೀಯರಿಗೂ ಫಾಸ್ಟ್ಯಾಗ್‌ ಕಡ್ಡಾಯ

11:11 PM Feb 16, 2021 | Team Udayavani |

ಬೈಂದೂರು: ವಿವಿಧ ಟೋಲ್‌ಗಳಲ್ಲಿ ಸ್ಥಳೀಯರಿಗೆ ಉಚಿತ ಸಂಚಾರಕ್ಕೆ ಅನುಮತಿ ನೀಡಬೇಕೆನ್ನುವ ಬೇಡಿಕೆ ಇರುವಂತೆಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಫೆ. 15ರಿಂದ ಫಾಸ್ಟ್ಯಾಗ್‌ ಕಡ್ಡಾಯಗೊಳಿಸಿದ್ದು ಮಂಗಳವಾರ ಶಿರೂರು ಟೋಲ್‌ಗೇಟ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ನೀಡಿದ್ದಾರೆ.

Advertisement

ಈ ಕುರಿತು ಮಾತನಾಡಿದ ಟೋಲ್‌ ವ್ಯವಸ್ಥಾಪಕರು ಸರಕಾರದ ನಿಯಮದ ಪ್ರಕಾರ ಯಾವುದೇ ಸ್ಥಳೀಯ ವಾಹನಗಳಿಗೆ ಉಚಿತ ವ್ಯವಸ್ಥೆ ಇಲ್ಲ. ಮೊದಲ ದಿನವಾದುದರಿಂದ ಜನರಿಗೆ ಒಂದಿಷ್ಟು ಮಾಹಿತಿ ನೀಡಿ ಹಂತ ಹಂತವಾಗಿ ಫಾಸ್ಟ್ಯಾಗ್ ಕಡ್ಡಾಯಗೊಳಿಸಲಾಗುತ್ತದೆ.

ಸ್ಥಳೀಯ ವಾಹನಗಳಿಗೆ ರಿಯಾಯಿತಿ ದರದ ಪಾಸ್‌ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next