Advertisement
ಡಿ. 1ರಿಂದ ಫಾಸ್ಟಾಗ್ ಕಡ್ಡಾಯವಾಗಬೇಕಿತ್ತು. ಆದರೆ ಸಾಕಷ್ಟು ಸ್ಟಿಕ್ಕರ್ ಲಭ್ಯವಿಲ್ಲದ ಕಾರಣ ಜ. 15ರ ವರೆಗೆ ಗಡುವು ವಿಸ್ತರಿಸಲಾಗಿತ್ತು. ಈಗ ಉಭಯ ಜಿಲ್ಲೆಗಳ ಟೋಲ್‌ಗಳಲ್ಲಿ ಟ್ಯಾಗ್ ಅಳವಡಿಕೆ ಕ್ಷಿಪ್ರ ಗತಿಯಲ್ಲಿ ಸಾಗುತ್ತಿದ್ದು, ಡಿ. 1ರಂದು ಶೇ. 10ರಷ್ಟು ಇದ್ದ ಫಾಸ್ಟಾಗ್ ಸಂಚಾರ ಈಗ ಶೇ. 45-50 ತಲುಪಿದೆ.
ಸ್ಥಳೀಯ ವಾಹನಗಳೇ ಫಾಸ್ಟಾಗ್ ಅಳವಡಿಕೆಯಲ್ಲಿ ಹಿಂದುಳಿದಿವೆ. ನಿತ್ಯ ಪ್ರಯಾಣಿಸುವ ಸ್ಥಳೀಯ ಶೇ. 60-65ರಷ್ಟು ವಾಹನಗಳು ಇನ್ನೂ ಫಾಸ್ಟಾ ಗ್ ಅಳವಡಿಸಿಕೊಂಡಿಲ್ಲ. ಅಲ್ಲದೆ ಪ್ರತ್ಯೇಕ ಗೇಟ್‌ಗಳಲ್ಲಿ ಸಂಚಾರ ನಡೆಸಿ ಪ್ರತಿದಿನ ಟೋಲ್ ಸಿಬಂದಿ ಜತೆ ವಾಗ್ವಾದದ ಘಟನೆಗಳು ನಡೆಯುತ್ತಿವೆ. ಹೊರ ಜಿಲ್ಲೆ, ರಾಜ್ಯಗಳ ವಾಹನಗಳು ಅಧಿಕ ಸಂಖ್ಯೆಯಲ್ಲಿ ಫಾಸ್ಟಾಗ್‌ನಲ್ಲಿ ಸಂಚರಿಸುತ್ತಿವೆ.
Related Articles
ಫಾಸ್ಟಾಗ್ ವ್ಯವಸ್ಥೆ ಆರಂಭಗೊಂಡಾಗ ಎಲ್ಲ ಟೋಲ್‌ಗಳಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ತಲೆದೋರಿತ್ತು. ಆದರೆ ಈಗ ಹಲವು ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡದ್ದರಿಂದ ವಾಹನ ದಟ್ಟಣೆ ಸಾಕಷ್ಟು ಕಡಿಮೆಯಾಗಿದೆ.
ಜ.15ರಿಂದ ಕಡ್ಡಾಯಗೊಳ್ಳಲಿದ್ದು, ಅಷ್ಟರಲ್ಲಿ ಸ್ಥಳೀಯ ವಾಹನಗಳು ಟ್ಯಾಗ್ ಅಳವಡಿಸಿಕೊಂಡರೆ ಉತ್ತಮ ಎನ್ನುವುದು ಟೋಲ್ ಮುಖ್ಯಸ್ಥರ ಅಭಿಪ್ರಾಯ.
Advertisement
ಫಾಸ್ಟಾಗ್ ಅಳವಡಿಕೆ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಉಭಯ ಜಿಲ್ಲೆಯ ಎಲ್ಲ ಟೋಲ್‌ಗಳಲ್ಲಿ ಶೇ. 45-50 ವಾಹನಗಳು ಫಾಸ್ಟಾಗ್ ಲೇನ್‌ಗಳಲ್ಲಿ ಸಂಚರಿಸುತ್ತಿವೆ. ಚಾಲಕರು-ಮಾಲಕರು ಈ ವ್ಯವಸ್ಥೆಗೆ ಹೊಂದಿಕೊಳ್ಳುತ್ತಿದ್ದಾರೆ.– ಶಿಶುಪಾಲನ್ ಪ್ರಾಜೆಕ್ಟ್ ಡೈರೆಕ್ಟರ್, ರಾ.ಹೆ. ಪ್ರಾಧಿಕಾರ