Advertisement

“ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ’

10:34 PM Aug 19, 2019 | Sriram |

ಕಾರ್ಕಳ: ನಿರ್ಲಕ್ಷ್ಯ, ವೇಗದ ಚಾಲನೆಯೇ ಅಪಘಾತಕ್ಕೆ ಪ್ರಮುಖ ಕಾರಣ. ವಾಹನ ಚಾಲಕರು, ದ್ವಿಚಕ್ರ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದರೊಂದಿಗೆ ಅಮಾಯಕರ ಜೀವ ಉಳಿಸಬೇಕೆಂದು ಕಾರ್ಕಳ ನಗರ ಠಾಣಾ ಎಸ್‌ಐ ನಂಜಾನಾಯ್ಕ ಹೇಳಿದರು.

Advertisement

ಆ. 18ರಂದು ನೀತಿ ಮತ್ತು ಶಾಂತಿ ಆಯೋಗ ಹಾಗೂ ಲಯನ್ಸ್‌ ಕ್ಲಬ್‌ ಕಾರ್ಕಳ ಇವುಗಳ ಜಂಟಿ ಸಹಯೋಗದಲ್ಲಿ ಕಾರ್ಕಳ ಸಂತ ಲಾರೆನ್ಸ್‌ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಹನ ಸಂಚಾರಿ ನಿಯಮಗಳ ಕುರಿತು ಅವರು ಮಾತನಾಡಿದರು.

ಕೆಲ ದ್ವಿಚಕ್ರ ಸವಾರರು ಹೆಲ್ಮೆಟ್‌ ಧರಿಸದೇ ಬೈಕ್‌ ಸವಾರಿ ಮಾಡುವುದು, ಮೊಬೈಲ್‌ ಸಂಭಾಷಣೆ ಮಾಡುತ್ತ ಸವಾರಿ ಮಾಡುತ್ತಿರುವುದು ಕಂಡುಬರುತ್ತಿದೆ. ತಮ್ಮ ಜೀವದ ರಕ್ಷಣೆಗಾಗಿ ಪ್ರತಿಯೋರ್ವರು ಸವಾರಿ ವೇಳೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ತಿಳಿಸಿದರು. ಕಾರ್ಕಳ ಸಂತ ಲಾರೆನ್ಸ್‌ ಚರ್ಚಿನ ಧರ್ಮಗುರು ಜಾರ್ಜ್‌ ಡಿ’ಸೋಜಾ, ಕಾರ್ಕಳ ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ಜಯರಾಮ್‌ ಕೆ. ಚರ್ಚ್‌ ಪಾಲನ ಮಂಡಳಿಯ ಉಪಾಧ್ಯಕ್ಷ ಜಾನ್‌ ಡಿ’ಸಿಲ್ವಾ ಉಪಸ್ಥಿತರಿದ್ದರು. ನೀತಿ ಹಾಗೂ ಶಾಂತಿ ಆಯೋಗ ಸಂಚಾಲಕ ಪ್ರಕಾಶ್‌ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.

          
Advertisement

Udayavani is now on Telegram. Click here to join our channel and stay updated with the latest news.

Next