Advertisement

ಫಾಸ್ಟ್‌ ಚಾರ್ಜಿಂಗ್‌ ಟ್ರೆಂಡ್‌!

05:19 PM Feb 02, 2020 | Sriram |

ಅತ್ಯಂತ ವೇಗಗತಿಯಲ್ಲಿ ಅಭಿವೃದ್ದಿ ಹೊಂದುತ್ತಿರುವ ತಂತ್ರಜ್ಞಾನಗಳಲ್ಲಿ ಸ್ಮಾರ್ಟ್‌ಫೋನ್‌ ತಂತ್ರಜ್ಞಾನ ಮುಂಚೂಣಿಯಲ್ಲಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ ತಯಾರಕ ಸಂಸ್ಥೆಗಳು ಈವರೆಗೆ ಕ್ಯಾಮೆರಾಗಳ ಮೇಲೆ ಹೆಚ್ಚು ಫೋಕಸ್‌ ನೀಡಿದ್ದರು. ಅದರ ಪರಿಣಾಮವಾಗಿ ನಲವತ್ತು, ಅವರತ್ತು ಪಿಕ್ಸೆಲ್‌ಗ‌ಳ ಸಾಮರ್ಥ್ಯವಿರುವ ಫೋನ್‌ಗಳು, ಪಾಪ್‌ ಅಪ್‌ ಕ್ಯಾಮೆರಾ, ಮೂರು ನಾಲ್ಕು ಲೆನ್ಸ್‌ಗಳುಳ್ಳ ಕ್ಯಾಮೆರಾ, ಕಡಿಮೆ ಬೆಳಕಿನಲ್ಲೂ (ಲೋ ಲೈಟ್‌) ಕಾರ್ಯಾಚರಿಸುವ ಸಾಮರ್ಥ್ಯ… ಹೀಗೆ ನಾನಾ ರೀತಿಯ ಫೋನ್‌ಗಳನ್ನು ಅವು ಮಾರುಕಟ್ಟೆಗೆ ಬಿಡುಗಡೆಗೊಳಿಸಿದವು. 2020ರಲ್ಲಿ ಸ್ಮಾರ್ಟ್‌ಫೋನ್‌ ತಯಾರಕರ ನಡುವೆ ಕ್ಯಾಮೆರಾ ವಿಷಯವಾಗಿ ಪೈಪೋಟಿ ಆಗುವುದಿಲ್ಲ ಎನ್ನುವ ಭವಿಷ್ಯವಾಣಿಯನ್ನು ಪರಿಣತರು ನುಡಿದಿದ್ದಾರೆ. ತಯಾರಕರ ಗಮನ ಫೋನಿನ ಬ್ಯಾಟರಿ ಮೇಲೆ ಹರಿಯುತ್ತಿರುವುದು ಅದಕ್ಕೆ ಸಾಕ್ಷಿ.

Advertisement

ಕಂಪನಿಗಳು ಕ್ಷಿಪ್ರ ಗತಿಯಲ್ಲಿ ಫ‌ುಲ್‌ ಚಾರ್ಜ್‌ ಆಗುವ ಬ್ಯಾಟರಿಯನ್ನು ಅಭವೃದ್ಧಿಪಡಿಸುವ ಸಂಶೋಧನೆಯಲ್ಲಿ ನಿರತವಾಗಿವೆ. ಮಾರುಕಟ್ಟೆಯಲ್ಲಿ “ಫಾಸ್ಟ್‌ ಚಾರ್ಜಿಂಗ್‌’ ಎಂಬ ಹಣೆಪಟ್ಟಿ ಹೊತ್ತ ಅದೆಷ್ಟೋ ಫೋನುಗಳು ಇವೆಯಾದರೂ ಅವು ಯಾವುವೂ ನಿಜಕ್ಕೂ ವೇಗವಾಗಿ ಕಾರ್ಯಾಚರಿಸುವುದಿಲ್ಲ. ಐಫೋನು ಫ‌ುಲ್‌ ಚಾರ್ಜ್‌ ಆಗಲು ಒಂದು ಗಂಟೆ ತೆಗೆದುಕೊಳ್ಳುತ್ತದೆ. ರಿಯಲ್‌ ಮಿ ಸಂಸ್ಥೆ ಸಂಶೋಧಿಸಿರುವ “ಸೂಪರ್‌ ಫಾಸ್ಟ್‌VOOC  ತಂತ್ರಜ್ಞಾನ ಪೋನನ್ನು ಮೂವತ್ತೇ ನಿಮಿಷಗಳಲ್ಲಿ ಫ‌ುಲ್‌ ಚಾರ್ಜ್‌ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇತರೆ ಸಂಸ್ಥೆಯವರು ಇನ್ನಷ್ಟು ಕಡಿಮೆ ಸಮಯದಲ್ಲಿ ಫ‌ುಲ್‌ ಚಾರ್ಜ್‌ ಮಾಡುವ ತಂತ್ರಜ್ಞಾನವನ್ನು ಆವಿಷ್ಕರಿಸಿದರೆ ಅಚ್ಚರಿಯೇನಿಲ್ಲ. ಸ್ಮಾರ್ಟ್‌ಫೋನ್‌ ಸಂಸ್ಥೆಗಳು ಕಡಿಮೆ ಸಾಮರ್ಥ್ಯದ ಚಾರ್ಜರ್‌ನಿಂದ 18, 40 ವ್ಯಾಟ್‌ನ ಜಾರ್ಜರ್‌ಅನ್ನು ನೀಡಲು ಶುರುಮಾಡಿರುವುದೇ ಫಾಸ್ಟ್‌ ಚಾರ್ಜಿಂಗ್‌ ಕಾರಣಗಳಿಗಾಗಿ. ಹೆಚ್ಚು ವ್ಯಾಟ್‌ನ ಚಾರ್ಜರ್‌ನಿಂದ ಫೋನು ಬಹಳ ಬೇಗ ಚಾರ್ಜ್‌ ಆಗುತ್ತದೆ.

ಶಿಯೋಮಿ ಇದೇ ವರ್ಷ 20 ನಿಮಿಷಗಳಲ್ಲಿ ಫ‌ುಲ್‌ ಚಾರ್ಜ್‌ ಮಾಡುವ 65 ವ್ಯಾಟ್‌ನ ಚಾರ್ಜರ್‌ಅನ್ನು ಹೊರ ತರುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ಅದು, 17 ನಿಮಿಷಗಳಲ್ಲಿ ಪೂರ್ತಿ ಬ್ಯಾಟರಿ ಚಾರ್ಜ್‌ ಮಾಡುವ 100 ವ್ಯಾಟ್‌ನ ಚಾರ್ಜರ್‌ ಸಂಶೋಧನೆಯಲ್ಲಿ ನಿರತವಾಗಿರುವುದು ರಹಸ್ಯವೇನಲ್ಲ. ಸ್ಯಾಮ್‌ಸಂಗ್‌, ಒಪ್ಪೋ ಮುಂತಾದ ಸಂಸ್ಥೆಗಳು ಕೂಡಾ ತಮ್ಮದೇ ಫಾಸ್ಟ್‌ ಚಾರ್ಜಿಂಗ್‌ ತಂತ್ರಜ್ಞಾನಗಳನ್ನು ಹೊಂದಿದ್ದು, ಪ್ರೀಮಿಯಂ(ದುಬಾರಿ) ಫೋನುಗಳಲ್ಲಿ ಓದಗಿಸುತ್ತಿವೆ.

ಅಲ್ಲದೆ ಮುಂದಿನ ದಿನಗಳಲ್ಲಿ ವಯರ್‌ಲೆಸ್‌ ಚಾರ್ಜಿಂಗ್‌ ಕ್ಷೇತ್ರದಲ್ಲಿಯೂ ಕ್ಷಿಪ್ರ ತಂತ್ರಜ್ಞಾನದ ಅಳವಡಿಕೆಯಾಗಿ ಹೊಸ ಟ್ರೆಂಡ್‌ ಸೃಷ್ಟಿಯಾಗುವ ಲಕ್ಷಣಗಳೂ ಇದೆ!

Advertisement

Udayavani is now on Telegram. Click here to join our channel and stay updated with the latest news.

Next