Advertisement
ಉಡುವ ರೀತಿ, ಸೀರೆಯ ಮಾದರಿ, ಬ್ಲೌಸ್‌ನ ಡಿಸೈನ್‌ಗಳ ಆಧಾರದಲ್ಲಿ ಸೀರೆಯನ್ನು ಸಾಂಪ್ರದಾಯಿಕ ಮತ್ತು ಮಾಡರ್ನ್ ಆಗಿ ಬಳಸಬಹುದು. ಹಬ್ಬ, ಉತ್ಸವಗಳಿಗೆ ಸಾಂಪ್ರದಾಯಿಕ ಸೀರೆಯನ್ನು ಬಳಸಿದರೆ, ಪಾರ್ಟಿ, ಫ್ಯಾಷನ್ ಕಾರ್ಯಕ್ರಮಗಳಿಗೆ ಪಾರ್ಟಿವೇರ್ ಸೀರೆಗಳೇ ಇವೆ. ಹೊಸ ಹೊಸ ಡಿಸೈನ್‌ಗಳ ಸೀರೆ ಇತ್ತೀಚೆಗೆ ಬರುತ್ತಿದ್ದು, ಟ್ರೆಂಡಿಂಗ್‌ನಲ್ಲಿದೆ. ರೇಷ್ಮೆ ಸೀರೆಗಳು, ಕಾಂಚೀವರಂ ಸೀರೆಗಳೊಂದಿಗೆ ಈಗ ಹೊಸ ಮಾದರಿಯ ಸೀರೆಗಳು ಮಾರುಕಟ್ಟೆಗೆ ಬರುತ್ತಿವೆ. ಫ್ಲೋರಲ್ ಎಂಬ್ರಾಯ್ಡರಿ ಸೀರೆ, ಟಿಶ್ಯೂ ಸೀರೆ, ಪೇಸ್ಟಲ್ ಶಿಮ್ಮರ್ ಸೀರೆ ಮೊದಲಾದವುಗಳು ಫ್ಯಾಷನ್ ಲೋಕದಲ್ಲಿ ಮಿಂಚುತ್ತಿವೆ. ಸಿನೆಮಾ ನಟಿಯರು, ಮಾಡಲ್‌ಗಳು, ಸೆಲೆಬ್ರೆಟಿಗಳು ಈಗ ಹೊಸ ಮಾದರಿಯ ಸೀರೆಗಳತ್ತ ಆಕರ್ಷಿತರಾಗಿದ್ದಾರೆ.
Related Articles
Advertisement
ಸೀರೆಯು ಸಾಂಪ್ರದಾಯಿಕವಾಗಿದ್ದರೆ ಅದೇ ಮಾದರಿಯಲ್ಲಿ ಅದರ ಬ್ಲೌಸ್ ಹೊಲಿಸಿದರೆ ಸುಂದರವಾಗಿ ಕಾಣಿಸುತ್ತದೆ. ನೆಟ್ಟೆಡ್ ಸೀರೆಗಳು, ಫ್ಯಾನ್ಸಿ ಸೀರೆಗಳು, ಸ್ಟೋನ್ ಸೀರೆಗಳಿಗೆ ಮಾಡರ್ನ್ ಮಾದರಿಯ ಬ್ಲೌಸ್‌ಗಳು ಹೆಚ್ಚು ಹೊಂದುತ್ತವೆ. ಆದ್ದರಿಂದ ಸೀರೆಯ ಮಾದರಿಗೆ ಅನುಗುಣವಾಗಿ ಬ್ಲೌಸ್ ಹೊಲಿಸಿದರೆ ಸೀರೆಯ ಅಂದ ಮತ್ತು ಅದನ್ನು ಉಟ್ಟವರ ಅಂದ ಹೆಚ್ಚುತ್ತದೆ.
ಸೀರೆ ಉಡುವುದೇ ಒಂದು ಕಲೆ
ಸೀರೆ ಎಷ್ಟೇ ಅಂದವಾಗಿದ್ದರೂ, ಬೆಲೆಯದ್ದಾಗಿದ್ದರೂ ಅದು ಸುಂದರವಾಗಿ ಕಾಣಿಸುವುದು ಅದನ್ನು ಉಡುವ ರೀತಿಯಿಂದ. ಸೀರೆಯನ್ನು ಉಡುವುದೇ ಒಂದು ಕಲೆ. ಸೀರೆಯನ್ನು ಉಡುವ ರೀತಿಯಿಂದ ಅದರ ಸೌಂದರ್ಯದಲ್ಲಿ ವ್ಯತ್ಯಾಸವುಂಟಾಗಬಹುದು.
ಸೀರೆಗೆ ಹೊಂದುವ ಆಭರಣವಿರಲಿ
ಸೀರೆಯ ಮಾದರಿಗೆ ಅನುಗುಣವಾಗಿ ಆಭರಣಗಳನ್ನು ಧರಿಸಿಕೊಳ್ಳುವುದು ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಬಹುದು. ಗೋಲ್ಡನ್ ಬಾರ್ಡರ್ ಸೀರೆಯಾಗಿದ್ದರೆ ಬಂಗಾರದ ಆಭರಣಗಳನ್ನು, ಸಿಲ್ವರ್ ಬಾರ್ಡರ್ ಆಗಿದ್ದರೆ ಸಿಲ್ವರ್ ಆಭರಣಗಳನ್ನು ಮತ್ತು ಕಾಪರ್, ಆ್ಯಂಟಿಕ್ ಆಭರಣಗಳನ್ನು ಆಯಾ ಸೀರೆಗೆ ಅನುಗುಣವಾಗಿ ಬಳಸಿಕೊಳ್ಳಬಹುದು. ಇದರಿಂದ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಳ್ಳಲು ಸಾಧ್ಯ.
ಹೇರ್‌ಸ್ಟೈಲ್‌ಗೂ ಇರಲಿ ಆದ್ಯತೆ
ಕೂದಲನ್ನು ಹೇಗೆ ಕಟ್ಟುತ್ತಾರೆ ಎನ್ನುವುದೂ ಕೂಡ ಮಹತ್ವವಾದದ್ದು. ಮಾಡರ್ನ್ ಮಾದರಿಯಲ್ಲಿ ಸೀರೆಯುಟ್ಟು ಜಡೆ ಹಾಕಿದರೆ ಅದು ಫ್ಯಾಷನ್‌ಗೆ ತದ್ವಿರುದ್ಧದಂತಿರುತ್ತದೆ. ಆದ್ದರಿಂದ ಯಾವ ಮಾದರಿಯ ಸೀರೆ ಉಟ್ಟುಕೊಳ್ಳುತ್ತೇವೋ ಅದಕ್ಕೆ ಪೂರಕವಾದ ರೀತಿಯಲ್ಲಿ ಕೂದಲನ್ನು ಕಟ್ಟಿಕೊಳ್ಳುವುದು ಅಗತ್ಯ. ಸಾಂಪ್ರದಾಯಿಕವಾಗಿ ಸೀರೆ ಉಟ್ಟಿದ್ದರೆ ಜಡೆ ಹಾಕಿಕೊಳ್ಳಬಹುದು. ಅದೇ ರೀತಿ ಮಾಡರ್ನ್ ಮಾದರಿಯಲ್ಲಿ ಸೀರೆಯುಟ್ಟಿದ್ದರೆ ಫ್ರೀಹೇರ್ ಅಥವಾ ಬೇರೆ ಮಾದರಿಯಲ್ಲಿ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ನಾವು ಯಾವ ಮಾದರಿಯ ಸೀರೆ ಹಾಕಿಕೊಂಡಿದ್ದೇವೆ ಅದಕ್ಕೆ ಹೊಂದಿಕೊಂಡಿದ್ದರೆ ಪರಿಪೂರ್ಣವಾಗಿ ಕಾಣಿಸಿಕೊಳ್ಳಬಹುದು.
ಸೀರೆ ಉಟ್ಟರೆ ಹೆಚ್ಚಾಗಿ ಹೈಹೀಲ್ಡ್ ಚಪ್ಪಲಿಯು ಹೆಚ್ಚು ಹೊಂದಿಕೊಳ್ಳುತ್ತದೆ. ಆದರೆ ಹೆಚ್ಚು ಉದ್ದ ಇರುವವರು ಫ್ಲ್ಯಾಟ್ ಚಪ್ಪಲಿಯನ್ನೂ ಬಳಸಬಹುದು. ಶೂ, ಕಾಲನ್ನು ಪೂರ್ತಿಯಾಗಿ ಮುಚ್ಚುವ ಮಾದರಿಯ ಚಪ್ಪಲಿಯನ್ನು ಬಳಸದಿರುವುದು ಉತ್ತಮ. ಇದರೊಂದಿಗೆ ಮೇಕಪ್, ಸ್ಟಿಕ್ಕರ್‌ಗಳನ್ನು ಆಯ್ಕೆ ಮಾಡಿ ಬಳಸಿದರೆ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳಬಹುದು.
–ರಂಜಿನಿ ಎಂ.