Advertisement

ಫ್ಯಾಶ‌ನ್‌ ತ್ಯಾಜ್ಯದ ಇಳಿಕೆ ಸಾಧ್ಯವೇ?

03:19 PM May 13, 2020 | sudhir |

ಕೋವಿಡ್ ಬಂದ ಅನಂತರ ಫ್ಯಾಶನ್‌ ಲೋಕದ ಆರ್ಭಟವೂ ಕ್ಷೀಣವಾಗಿದೆ. ಮುಖಕ್ಕೆ ಮಾಸ್ಕ್ ಹಾಕಿ ಫ್ಯಾಶನನ್ನಾದರೂ ಹೇಗೆ ಮಾಡಬಹುದು. ಯುವ ಫ್ಯಾಶನ್‌ ಪ್ರೇಮಿಗಳಂತೂ ವೈರಸ್‌ ಆರ್ಭಟಕ್ಕೆ ತಮಗ್ಯಾವ ಫ್ಯಾಶನ್ನೂ ಬೇಡವೆಂದು ಮನೆಯೊಳಗೆ ಇದ್ದು ಸುರಕ್ಷೆಯಾಗಿದ್ದರೆ ಸಾಕೆಂಬ ಅಭಿಪ್ರಾಯದಲ್ಲಿದ್ದಾರೆ. ಹಾಗಂತ ಹೇಳಿ ಹೊಸ ವಿನ್ಯಾಸಗಳ ಉಡುಪುಗಳ ತಯಾರಿಕೆಯಂತೂ ನಿಂತಿಲ್ಲ. ವಿನ್ಯಾಸಗಳು ಕೂಡಾ ದಿನೇದಿನೇ ಅಪ್‌ಡೇಟ್‌ ಆಗುತ್ತಿರುತ್ತವೆ. ಹಾಗಾಗಿ ಇಲ್ಲಿ ತ್ಯಾಜ್ಯಗಳಿಗೇನೂ ಕಮ್ಮಿ ಇಲ್ಲ. ಹಾಗಾಗಿ ಫ್ಯಾಶನ್‌ ಲೋಕವೂ ಕೋವಿಡ್ ನೊಂದಿಗಿನ ಹೋರಾಟದೊಂದಿಗೆ ಫ್ಯಾಶನ್‌ ತ್ಯಾಜ್ಯಗಳ ವಿರುದ್ಧ ಹೋರಾಡೋಕೂ ಅಣಿಯಾಗಬೇಕಿದೆ.

Advertisement

ಏನಿದು ಫ್ಯಾಶನ್‌ ತ್ಯಾಜ್ಯ
ವಾರ್ಷಿಕವಾಗಿ ಸುಮಾರು ನೂರಾರು ಬಿಲಿಯನ್‌ ಉಡುಪುಗಳು ತಯಾರಿಸಲ್ಪಡುತ್ತವೆ. 2 ಮೀಟರ್‌ ಬಟ್ಟೆಯಲ್ಲಿ ಕನಿಷ್ಠ 0.5 ಉಳಿದು ಕಸವಾಗಿ ಪರಿವರ್ತನೆಗೊಂಡರೂ ಬೃಹತ್‌ ರೂಪವನ್ನು ತಾಳಿದಾಗ ಒಟ್ಟು ತ್ಯಾಜ್ಯರೂಪವೇ ಪೆಡಂಭೂತವಾಗಿ ಕಾಡಬಹುದು. ಫ್ಯಾಶನ್‌ ಉದ್ಯಮದಿಂದಾಗಿ ಜಾಗತಿಕವಾಗಿ ವರ್ಷಕ್ಕೆ 92 ದಶಲಕ್ಷ ಟನ್‌ಗೂ ಅಧಿಕ ಜವಳಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಮತ್ತೂಂದು ಅಂಕಿ ಅಂಶ ಪ್ರಕಾರ 2015ರಿಂದ 2030ರ ನಡುವೆ ಈ ತ್ಯಾಜ್ಯದ ಪ್ರಮಾಣವು ಶೇ. 60ರಷ್ಟು ಹೆಚ್ಚಾಗುವ ಸಂಭವವಿದೆ ಎಂದು ಒಂದು ಅಧ್ಯಯನ ಸರ್ವೆಯಲ್ಲಿ ಪತ್ತೆಯಾಗಿದೆ.ನಿಮ್ಮೂರಲ್ಲಿರುವ ಸಾಮಾನ್ಯ ಟೈಲರ್‌ನ ಅಂಗಡಿಗೆ ಹೋಗಿ ನೋಡಿ. ಒಂದು ಅಂಗಿ ಹೊಲಿದುಕೊಡಿ ಎಂದು 2 ಮೀ. ಬಟ್ಟೆ ಕೊಟ್ಟಿರುತ್ತಾರೆ. ಅದರಲ್ಲಿ ಬೇಕಾದಷ್ಟು ಕತ್ತರಿಸಿ ಉಳಿದಿದ್ದು ತ್ಯಾಜ್ಯವಾಗುತ್ತದೆ. ಚಿಕ್ಕ ಊರ ಟೈಲರ್‌ ಬಳಿಯೇ ಇಷ್ಟು ಕಸ ಉತ್ಪತ್ತಿಯಾಗುತ್ತೆಂದರೆ ಬೃಹತ್‌ ಆಗಿ ಫ್ಯಾಶನ್‌ ವಸ್ತುಗಳ ತಯಾರಿಕಾ ಘಟಕಗಳ ತ್ಯಾಜ್ಯಗಳೆಷ್ಟಾದೀತು?.

ಕಸದ ಗುಂಪಿಗೆ ಸೇರಿಸದ್ದು ಯಾಕೆ?
ಫ್ಯಾಶನ್‌ ತ್ಯಾಜ್ಯವನ್ನು ಸಾಮಾನ್ಯವಾಗಿ ಎಲ್ಲ ಕಸದಂತೆ ವಿಭಾಗಗೊಳಿಸಿಲ್ಲ. ಅದು ಉತ್ಪಾದನಾ ಹಂತದಲ್ಲಿನ ಯೋಜನೆಗಳ ವೈಫ‌ಲ್ಯಗಳಿಂದ ಉಂಟಾಗುವಂತಹದ್ದು. ಒಬ್ಬನಿಗೆ ವರ್ಷಕ್ಕೆ ಸಾಮಾನ್ಯವಾಗಿ 4 ಜತೆ ಬಟ್ಟೆ ಬೇಕೆಂದರೆ ಆತ ಅದಕ್ಕೂ ಮುನ್ನ ಸಾವಿರಾರು ವಿನ್ಯಾಸಗಳನ್ನು ನೋಡಿರುತ್ತಾನೆ. ಹೀಗಾಗಿ ಅಗತ್ಯವೋ ಅನಗತ್ಯವೋ ಅಷ್ಟು ಬಗೆಯ ದಾಸ್ತಾನುಗಳನ್ನು ತಂದಿಟ್ಟುಕೊಳ್ಳಲೇ ಬೇಕಾದ ಅನಿವಾರ್ಯತೆ ಜವಳಿ ಮಳಿಗೆಯವನದ್ದು. ಇಲ್ಲಿ ಮಾರಾಟವಾಗದೆ ಉಳಿದದ್ದನ್ನು ಕಸವೆಂದು ಹೇಗೆ ತಾನೇ ಪರಿಗಣಿಸಲು ಸಾಧ್ಯ. ಇದನ್ನು ಫ್ಯಾಶನ್‌ ತ್ಯಾಜ್ಯವೆಂದೇ ಕರೆಯಬೇಕು.

ಫ್ಯಾಶನ್‌ ತ್ಯಾಜ್ಯವನ್ನು ಹೇಗೆ ಎದುರಿಸುತ್ತೇವೆ?
ಹೊಸ’ ಬಟ್ಟೆಗಳನ್ನು ತಯಾರಿಸಲು ಮತ್ತು ಮಾರಾಟ ಮಾಡುವುದು ಉದ್ಯಮಕ್ಕೆ ಸ್ಪಷ್ಟವಾಗಿ ಒಂದು ದೊಡ್ಡ ಸವಾಲು. ನಮಗೆ ತಿಳಿದಿರುವಂತೆ, ವೃತ್ತಾಕಾರದಲ್ಲಿ ಆರ್ಥಿಕತೆಯನ್ನು ಸಶಕ್ತಗೊಳಿಸುವುದು ಆರಂಭಿಕ ಹಂತದ ಟಾಸ್ಕ್ ಮತ್ತು ಅದನ್ನು ಕಾರ್ಯಗತಗೊಳಿಸುವುದು ಅತ್ಯಗತ್ಯವಾಗಿರುತ್ತದೆ. ವೃತ್ತಾಕಾರದ ಆರ್ಥಿಕತೆ ಎಂದರೆ ತಯಾರಿಕೆ-ಮಾರಾಟ-ಪುನರ್ಬಳಕೆಗಳೇ ಆಗಿವೆ.

ತಯಾರಿಸಿದ್ದೆಲ್ಲವೂ ಮಾರಾಟವಾಗಲ್ಲ ಗುರು
ನಮ್ಮೂರ ಟೈಲರ್‌ಗೆ ಅಳತೆ ಕೊಟ್ಟು ಬಟ್ಟೆ ಹೊಲಿಸುತ್ತೇವೆ. ಅದಕ್ಕೆ ಆತನಿಗೆ ಮುಂಗಡ ಚೂರು ಮೊತ್ತವನ್ನೂ ನೀಡಿರುತ್ತೇವೆ. ಆದರೆ ಫ್ಯಾಶನ್‌ ಲೋಕದಲ್ಲಿ ಹಾಗಿಲ್ಲ. ಇಷ್ಟವಾದ್ರೆ ತಗೋ… ಇಲ್ಲಂದ್ರೆ ಸಾವಿರ ಆಯ್ಕೆ ಇವೆ. ನಿಮಗೆ ಇಷ್ಟವಾಗಿದ್ದು ಇನ್ನೊಬ್ಬರಿಗೆ ಇಷ್ಟವಾಗಬೆಂಕೆಂದೇನಿಲ್ಲ, ಇನ್ನೊಬ್ಬನ ಇಷ್ಟವೂ ನಿಮ್ಮದಾಗಬೇಕಿಲ್ಲ. ಕೇವಲ ಅದು ಪ್ರಭಾವ ಬೀರಬಹುದಷ್ಟೇ. ಪ್ರತಿ ವರ್ಷವೂ ದೊಡ್ಡ ದೊಡ್ಡ ಬಟ್ಟೆ ಶೋರೊಂಗಳು ಒಂದು ಕೊಂಡರೆ ಒಂದು ಉಚಿತ, ಇಷ್ಟು ಹಣದ್ದು ಕೊಂಡರೆ ಸೂಟ್‌ಕೇಸ್‌ ಉಚಿತ ಎಂದು ವಾರ್ಷಿಕ ಕೂಟ ನಡೆಸಿ 40-50ಶೇ. ಹಳೆೆಯ ದಾಸ್ತಾನನ್ನು ಖಾಲಿ ಮಾಡಬಹುದು. ಉಳಿದದ್ದನ್ನು ಏನು ಮಾಡೋಣ?

Advertisement

ಭಾರತೀಯ ಮಾರುಕಟ್ಟೆಯಲ್ಲಂತೂ ವಸ್ತುಗಳ ಮಾರುಕಟ್ಟೆ ಆಧಾರಿತ ಮೌಲ್ಯಮಾಪನ ತೀರಾ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ. ಮಾರುಕಟ್ಟೆ ಬೆಳವಣಿಗೆಯೂ ಇದನ್ನು ಆಧರಿಸಿರುವುದರಿಂದ ಆರಂಭಿಕ ಹಂತದಲ್ಲೇ ಕಡಿವಾಣದ ಅಗತ್ಯವಿದೆ. ಮಾರುಕಟ್ಟೆ ಹರಿವು ಹೇಗಿದೆ ಎಂಬುದು ಸಾಮಾನ್ಯವಾಗಿ ಗ್ರಹಿಸುವುದು ಅಗತ್ಯ. ಒಂದು ಜವಳಿ ಅಂಗಡಿಯಲ್ಲಿ ಸುಮಾರು 1,000 ಸ್ಲಿಮ್‌ ಫಿಟ್‌ ಜೀನ್ಸ್‌ ಪ್ಯಾಂಟ್‌ಗಳು, 200 ರೆಗ್ಯುಲರ್‌ ಫಿಟ್ಟಿಂಗ್‌ ಇರೋ ಪ್ಯಾಂಟ್‌ಗಳನ್ನು ಈ ಬಾರಿ ಮಾರಾಟಕ್ಕೆ ಇಟ್ಟಿದ್ದಾರೆ ಅಂದುಕೊಳ್ಳಿ. 500 ಜನರಿಗಷ್ಟೇ ಸ್ಲಿಮ್‌ ಫಿಟ್‌ ಪ್ಯಾಂಟ್‌ ಬೇಕಿವೆ. 200 ರೆಗ್ಯುಲರ್‌ ಪ್ಯಾಂಟ್‌ಗಳೂ ಸೇಲಾಗಿದ್ದು, ಇನ್ನೂ 300 ಪ್ಯಾಂಟಿಗೆ ಬೇಡಿಕೆ ಇದೆ. ರೆಗ್ಯುಲರ್‌ ಫಿಟ್ಟಿಂಗ್‌ನ ಪಾಂಟ್‌ಗಳನ್ನು ತರಿಸಬಹುದು. ಅದು ಪ್ರಶ್ನೆ ಅಲ್ಲ. ಉಳಿದ 500 ಸ್ಲಿಮ್‌ ಫಿಟ್‌ ಪ್ಯಾಂಟ್‌ಗಳನ್ನು ಏನು ಮಾಡೋದು.

ಇಲ್ಲೀಗ ಸಮಸ್ಯೆ ಉದ್ಭವವಾಗುತ್ತೆ. ಏನೇನೋ ಆಫ‌ರ್‌ ಕೊಟ್ಟು 200 ಸ್ಲಿಮ್‌ ಫಿಟ್‌ ಪ್ಯಾಂಟ್‌ಗಳನ್ನು ಹೇಗೋ ಮಾರಾಟ ಮಾಡಬಹುದು. ಆದರೂ 300 ಉಳಿದದ್ದು ನಷ್ಟವೇ ಆಗಿ ಬಿಡುತ್ತೆ.

ನಿಜವಾಗಿ ಅಂಗಡಿಯವ 600 ಸ್ಲಿಮ್‌ ಫಿಟ್‌ 600 ರೆಗ್ಯುಲರ್‌ ಪ್ಯಾಂಟ್‌ಗಳನ್ನು ತರಿಸಿದ್ದರೆ ಇಷ್ಟೊಂದು ಸಮಸ್ಯೆಯೇ ಆಗುತ್ತಿರಲಿಲ್ಲ. ಯಾಕೆ ಗೊತ್ತ ರೆಗ್ಯುಲರ್‌ ಪ್ಯಾಂಟ್‌ಗಳನ್ನು ಸ್ವಲ್ಪ ಆಲ್ಟ್ರೇಶನ್ ಮಾಡಿ ಸ್ಲಿಮ್‌ ಫಿಟ್‌ ಮಾಡಿಕೊಡೋ ಟೈಲರ್‌ಗಲಿದ್ದಾರೆ. ಆದರೆ ಸ್ಲಿಮ್‌ ಫಿಟ್‌ ಪ್ಯಾಂಟ್‌ ಏನು ಮಾಡೋಕು ಆಗಲ್ಲ ಅಲ್ವ.

ಮುಕ್ತಿ ಹೇಗೆ?
ಹಳೆಯ ದಿರಿಸಿಗೆ ಹೊಸ ವಿನ್ಯಾಸ ನೀಡಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ನೈಪುಣ್ಯ ಫ್ಯಾಶನ್‌ ಉದ್ಯಮಕ್ಕೆ ಅತ್ಯಗತ್ಯ. ಅದಕ್ಕೇ ಹೊಸದಾಗಿ ಆಸ್ಟ್ರೇಶನ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. ಪುನರ್‌ಬಳಕೆಯಾಗುವ ತ್ಯಾಜ್ಯಗಳನ್ನು ಶೀಘ್ರವೇ ವಿಲೇವಾರಿ ಮಾಡಬೇಕು. ಈಗಿನ ಟ್ರೆಂಡಿಗನುಸಾರವಾಗಿ ವಸ್ತುಗಳ ತಯಾರಿಕೆಗೆ ಗಮನ ನೀಡುವ ಕಾರ್ಯವಾದಾಗ ಫ್ಯಾಶನ್‌ ತ್ಯಾಜ್ಯಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ. “ಕಂಪೆನಿಗಳಿಂದ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯವಿಲ್ಲ. ಶಾಪಿಂಗ್‌ ಖರೀದಿ ಮಾಡುವಾಗ ಪ್ರತಿಯೊಬ್ಬರೂ ಹೆಚ್ಚು ಪರಿಸರ ಪ್ರಜ್ಞೆ ಹೊಂದಬಹುದು. ನೀವು ಒಂದಕ್ಕಿಂತ ಹೆಚ್ಚು ಬಾರಿ ಧರಿಸುವ ಬಟ್ಟೆಗಳಲ್ಲಿ ಜಾಸ್ತಿ ಹೂಡಿಕೆ ಮಾಡಿ. ಒಂದು ಬಾರಿ ಎಸೆಯುವ ಬದಲು ಯಾರಿಗಾದರೂ ದಾನ ಮಾಡಿ’ ಎಂದು ಜವಳಿ ಮಾರುಕಟ್ಟೆ ವಿಭಾಗದ ಕೃಷ್ಣನ್‌ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next