ಕಾಸರಗೋಡು: ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದ ಚಾರ್ಜ್‌ಶೀಟ್(ದೋಷಾರೋಪ ಪಟ್ಟಿ)ನ್ನು ಈ ಪ್ರಕರಣ ತನಿಖೆ ನಡೆಸುತ್ತಿರುವ ಕ್ರೈಂ ಬ್ರಾಂಚ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿ 263 ದೂರುಗಳು ಲಭಿಸಿದ್ದು, ಈ ಪೈಕಿ ದಾಖಲಿಸಿರುವ 15 ಪ್ರಕರಣಗಳ ಚಾರ್ಜ್‌ಶೀಟನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಮುಸ್ಲಿಂ ಲೀಗ್ ನೇತಾರ ಹಾಗು ಮಂಜೇಶ್ವರದ ಮಾಜಿ ಶಾಸಕ ಹಾಗು ಫ್ಯಾಶನ್ ಗೋಲ್ಡ್‌ನ ಚೆಯರ್‌ವೆುàನ್ ಆಗಿದ್ದ ಎಂ.ಸಿ.ಖಮರುದ್ದೀನ್ ಈ ಪ್ರಕರಣದ ಪ್ರಥಮ ಆರೋಪಿಯಾಗಿ ದಾಖಲಿಸಲಾಗಿದೆ. ಮೆನೇಜಿಂಗ್ ಡೈರೆಕ್ಟರ್ ಪೂಕೋಯ ತಂಙಳ್ ಎರಡನೇ ಆರೋಪಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಒಟ್ಟು 29 ಮಂದಿಯನ್ನು ಆರೋಪಿಗಳಾಗಿ ಸೇರ್ಪಡೆಗೊಳಿಸಲಾಗಿದೆ. ಆರೋಪಿಗಳ ವಿರುದ್ಧ ಕಾಸರಗೋಡು, ಚೆರ್ವತ್ತೂರು, ಕಣ್ಣೂರು ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಾಗಿ ಒಟ್ಟು 168 ಪ್ರಕರಣಗಳು ದಾಖಲಾಗಿವೆ.
ಬಿಟ್ ಕಾಯಿನ್ ವಂಚನೆ
ಕಾಸರಗೋಡು: ಬಿಟ್ ಕಾಯಿನ್ ವಂಚನೆಗೆ ಒಳಗಾದ ಯುವಕನಿಗೆ ಒಂದೂವರೆ ಕೋಟಿ ರೂ. ನಷ್ಟಗೊಂಡಿದೆ. ಕಾಂಞಂಗಾಡ್ ಕುಶಾಲ್‌ನಗರ ಜಬಿನ ಮಂಜಿಲ್‌ನ ಖಾಲಿದ್(45) ಅವರು ವಂಚಿತರಾಗಿದ್ದಾರೆ. ಘಟನೆಗೆ ಸಂಬಂಧಿಸಿ ಖಾಲಿದ್ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.