Advertisement

ಫಸಲ್‌ ಬಿಮಾ; 50 ಸಾವಿರ ನೋಂದಣಿ ಗುರಿ

03:10 PM Jul 22, 2022 | Team Udayavani |

ಆಳಂದ: ರಾಜ್ಯದಲ್ಲೇ ಮೊದಲ ಹಂತವಾಗಿ ಕಲಬುರಗಿ ವಿಭಾಗದ 10 ತಾಲೂಕಿನಲ್ಲಿ ಅಂಚೆ ಇಲಾಖೆ ಮೂಲಕ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ 50 ಸಾವಿರ ರೈತರ ನೋಂದ ಣಿಯ ಗುರಿ ಹೊಂದಲಾಗಿದೆ ಎಂದು ಭಾರತೀಯ ಅಂಚೆ ಇಲಾಖೆಯ ಬೆಂಗಳೂರಿನ ದಕ್ಷಿಣ ವಲಯ ರಾಜ್ಯ ನಿರ್ದೇಶಕಿ ಕೆ. ಆರೂರಾ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಅಂಚೆ ಇಲಾಖೆಯಿಂದ ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆಯಡಿ ತಾಲೂಕಿನ ರೈತರಿಂದ ಬೆಳೆ ವಿಮೆ ಉಚಿತ ನೋಂದಣಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಮೊದಲು ಬಾರಿಗೆ ಫಸಲು ಭೀಮಾ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಪ್ರತಿ ತಾಲೂಕಿಗೆ ಐದು ಸಾವಿರ ಗುರಿಯಂತೆ ಒಟ್ಟು 50ಸಾವಿರ ರೈತರ ನೋಂದಣಿ ಅಭಿಯಾನದ ಲಾಭವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಬೆಳೆ ವಿಮೆ ಖಾಸಗಿ ಕಂಪನಿಗಿಂತಲೂ ಪ್ರಧಾನ ಮಂತ್ರಿ ಫಸಲು ಭೀಮಾ ಸರ್ಕಾರದ ಬೆಳೆ ವಿಮೆ ಯೋಜನೆಯಾಗಿದ್ದು, ಗ್ರಾಮೀಣ ರೈತರಲ್ಲಿ ಈ ವಿಮೆ ಕೈಗೊಳ್ಳಲು ಪರಸ್ಪರ ಮಾಹಿತಿ ಹಂಚಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಆಳಂದ ತಾಲೂಕಿನಿಂದ ಮೊದಲ ದಿನದಲ್ಲೇ ಒಂದು ಸಾವಿರ ವಿಮೆ ಕೈಗೊಳ್ಳುವಂತೆ ಅರ್ಜಿ ಸಲ್ಲಿಕೆಯಾಗಿವೆ. ವಿಮೆ ಕೈಗೊಳ್ಳಲು ಜು.31 ಕೊನೆ ದಿನವಾಗಿದೆ. ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಇದೇ ವೇಳೆ ಬೆಳೆ ವಿಮೆ ನೋಂದಾಯಿತ ರೈತರಿಗೆ ವಿಮಾ ಕಂತು ಪಾವತಿ ರಸೀದಿ ನೀಡಲಾಯಿತು. ಸ್ಥಳೀಯ ಅಂಚೆ ಪೋಸ್ಟ್‌ ಮಾಸ್ಟರ್‌ ಗುರುರಾಜ ಕುಲಕರ್ಣಿ ಮಾತನಾಡಿ, ಇಲಾಖೆ ವಹಿಸಿದ್ದ ಗುರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಿಬ್ಬಂದಿ ಕಾರ್ಯಪ್ರವರ್ತರಾಗಬೇಕು ಎಂದು ಹೇಳಿದರು.

ಪಟ್ಟಣದಲ್ಲಿ ಅಂಚೆ ಕಚೇರಿ ಇಲ್ಲದೇ ಸಿಬ್ಬಂದಿಗೆ ಮತ್ತು ಗ್ರಾಹಕರಿಗೆ ತೊಂದರೆ ಎದುರಾಗಿದೆ. ಸ್ವಂತ ಕಟ್ಟಡ ನಿರ್ಮಾಣ ಕೈಗೊಳ್ಳಬೇಕು ಎಂದು ಮೇಲಧಿ ಕಾರಿಗಳಿಗೆ ಮನವಿ ಮಾಡಿದರು.

ಬೀದರ ಹಾಗೂ ಜಿಲ್ಲಾ ಅಂಚೆ ಅಧೀಕ್ಷಕ ಮಹ್ಮದ್‌ ಆಸೀಫ್‌ ಮಾತನಾಡಿ, ಜಿಲ್ಲೆಯ ಎಲ್ಲ ಅಂಚೆ ಕಚೇರಿಗಳಲ್ಲಿ ವಿಮಾ ನೋಂದಣಿ ನಡೆಯಲಿದೆ. ನಿಗದಿತ ಅವಧಿಯೊಳಗೆ ವಿಮೆ ಕೈಗೊಳ್ಳಬೇಕು ಎಂದು ರೈತರಿಗೆ ತಿಳಿಸಿದರು.

ತಾಲೂಕಿನಿಂದ ಬುಧವಾರದಿಂದ ಆರಂಭಗೊಂಡು ಶುಕ್ರವಾರದ ವರೆಗೆ ನೋಂದಣಿ ಅಭಿಯಾನ ನಡೆಸಿ ಉಚಿತವಾಗಿ ರೈತರ ಬೆಳೆವಿಮೆ ನೋಂದಣಿ ಬಳಕವೂ ಜು.31ರ ವರೆಗೆ ಅಂಚೆ ಕಚೇರಿಯಲ್ಲಿ ನೋಂದಣಿ ನಡೆಯಲಿದೆ ಎಂದರು.

ಸ್ಥಳೀಯ ಅಂಚಿ ಸಿಬ್ಬಂದಿ ಲಿಂಗರಾಜ ಬಿರಾದಾರ, ಗಂಜೆಂದ್ರ ಹೂಗಾರ, ರೇವಣಸಿದ್ಧ ಪೂಜಾರಿ, ಗುರುಬಾಯಿ ಸಂಗೋಳಗಿ, ಸಿದ್ಧಣ್ಣಾ ಪಾಟೀಲ, ಮಲ್ಲಿಕಾರ್ಜುನ ತಳವಾರ, ಸತೀಶ ಬಿರಾದಾರ, ಗೌರಿ ನಿಲೂರ, ಸುಶ್ಮಿತಾ ಹತ್ತಿ, ವಿಜಯಲಕ್ಷ್ಮೀ, ಸೌಮ್ಯಾ, ಸ್ನೇಹಾ, ಜಯಶ್ರೀ ಚಿಂಚನೂರ, ರೈತ ಪೀರಪ್ಪ ಜಮಾದಾರ, ಶರಣಬಸಪ್ಪ ನೆಲ್ಲೂರ ಹಾಗೂ ತಾಲೂಕಿನ ಎಲ್ಲ ಗ್ರಾಮದ ಅಂಚೆ ಪಾಲಕರು ಹಾಗೂ ಸುತ್ತಲಿನ ಗ್ರಾಮಗಳ ರೈತರು ಪಾಲ್ಗೊಂಡಿದ್ದರು. ಸಿಬ್ಬಂದಿ ಲಕ್ಷ್ಮೀಕಾಂತ ಕೊಡ್ಲಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next