ತಾಳಿಕೋಟೆ: ದುಶ್ಚಟಗಳಿಂದ ದೂರವಿದ್ದು ಆರೋಗ್ಯ ಕಾಪಾಡಿಕೊಂಡು ಹೋದರೆ ಬದುಕು ಸಾರ್ಥಕಗೊಳ್ಳಲಿದೆ ಎಂದು ಮಾಜಿ ಸಚಿವ ಸಿ.ಎಸ್. ನಾಡಗೌಡ ಹೇಳಿದರು. ರವಿವಾರ ತಾಳಿಕೋಟೆಯಲ್ಲಿ ಪ್ರಾರಂಭವಾದ ಸಂಜೀವನ್ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.
ತಜ್ಞ ವೈದ್ಯರಾದ ಸಂಜೀವನ್ ಆಸ್ಪತ್ರೆಯ ಡಾ| ಸುಭಾಷ್ ನಾಡಗೌಡ, ವಿಜಯಪುರದ ತಜ್ಞ ವೈದ್ಯರಾದ ಡಾ| ಆನಂದ ಚೌದ್ರಿ, ಡಾ| ಗುರುರಾಜ ಪಡಸಲಗಿ, ಡಾ| ಗಿರೀಶ ಕಲ್ಲೋಳ್ಳಿ, ಡಾ| ಸಂತೋಷ ಕೊಂಗಂಡಿ ಅವರ ಸೇವಾ ಕಾರ್ಯ ಶ್ಲಾಘನೀವಾಗಿದೆ ಎಂದರು. ಈಗಾಗಲೇ ಈ ವೈದ್ಯರು ಉಚಿತ ಸೇವೆಗೆ ಮುಂದಾಗಿರುವುದನ್ನು ಗಮನಿಸಿದ ನಾಡಗೌಡರು ಇಂತಹ ಕಾರ್ಯವನ್ನು ಮೇಲಿಂದ ಮೇಲೆ ಖಾಸಗಿ ವೈದ್ಯರೂ ಏರ್ಪಡಿಸಿದರೆ ಬಡ ಜನತೆಗೆ ಉಪಯೋಗವಾಗುತ್ತದೆ. ಸಂಜೀವನ್ ಆಸ್ಪತ್ರೆಯ ಡಾ| ಸುಭಾಷ್ ನಾಡಗೌಡ ಅವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಮಾಲರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ಕಾರ್ಯಕ್ಕೆ ಮುಂದಾಗಿ ಅವರಿಗೆ ಆರೋಗ್ಯ ಕಾರ್ಡ್ ವಿತರಿಸಿರುವ ಕಾರ್ಯ ಶ್ಲಾಘನೀಯ ಎಂದರು.
ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ವಿಠ್ಠಲಸಿಂಗ್ ಹಜೇರಿ ಅವರು ಉದ್ಘಾಟಿಸಿದರು. ಶಿಬಿರದಲ್ಲಿ ನರ ರೋಗ, ಕಿಡ್ನಿ ಸಮಸ್ಯೆ, ಎಲುಬು, ಕೀಲುಗಳ ತೊಂದರೆಗೊಳಪಟ್ಟವರನ್ನು ಪರಿಕ್ಷೀಸಲಾಯಿತ್ತಲ್ಲದೇ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಕುರಿತು ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ 770 ಜನರನ್ನು ಪರೀಕ್ಷಿಸಿ ಸುಮಾರು 1.50 ಲಕ್ಷ ರೂ. ಮೌಲ್ಯದ ಔಷಧೋಪಚಾರವನ್ನು ಉಚಿತವಾಗಿ ನೀಡಲಾಯಿತು. ತಾಳಿಕೋಟೆ ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ| ವಿ.ಎಸ್. ಕಾರ್ಚಿ, ಡಾ| ಎನ್.ಎಲ್. ಶೆಟ್ಟಿ, ಡಾ| ಆರ್. ಎಂ. ಕೋಳ್ಯಾಳ, ಡಾ| ಗುರು ಚಿತ್ತರಗಿ, ಡಾ| ಎ.ಎ.ನಾಲಬಂದ, ಡಾ| ಈರಗಂಟೆಪ್ಪ ತಳ್ಳೊಳ್ಳಿ, ತಾಳಿಕೋಟೆ ಸಮೂದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಕಾರಿಗಳಾದ ಡಾ| ಶ್ರೀಶೈಲ ಹುಕ್ಕೇರಿ, ಸಾಯಿ ಆಸ್ಪತ್ರೆಯ ಡಾ| ಗಂಗಾಂಬಿಕಾ ಪಾಟೀಲ, ಡಾ| ಮುತ್ತು ಅಲೇಗಾವಿ, ಡಾ| ಎನ್.ಎಂ. ಕೋಳ್ಯಾಳ, ಸಂಜೀವನ್
ಆಸ್ಪತ್ರೆ ಸಿಬ್ಬಂದಿಯವರಾದ ರಾಜಶೇಖರ ಪಾಟೀಲ, ಅಶೋಕ ಹಚಡದ, ವಿಶಾಲ ಬಿರಾದಾರ, ವೇಂಕಟೇಶ, ಲಾಳೇಸಾ, ಲಾಲು, ಅಲಿ, ಸಂಗಮೇಶ, ಮಹಾಂತೇಶ, ಭಾಗ್ಯಶ್ರೀ ಅಲ್ಲದೇ ಸಮಾಜ ಸೇವಕರಾದ ಚಿಂತಪಗೌಡ ಯಾಳಗಿ, ಬಾಬು ಹಜೇರಿ, ಸುರೇಶ ಹಜೇರಿ, ಬಸವರಾಜ ಪಂಜಗಲ್ಲ, ಬಿ.ಎಸ್. ಇಸಾಂಪುರ, ಚಂದ್ರು ಮಠಪತಿ, ಪತ್ರಕರ್ತ ಜಿ.ಟಿ. ಘೋರ್ಪಡೆ ಇದ್ದರು.