ಕಲಘಟಗಿ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಜಮೀನು ಕಳೆದುಕೊಂಡ ವಿವಿಧ ಗ್ರಾಮಗಳ ಹಾಗೂ ಗಳಗಿ ಹುಲಕೊಪ್ಪ ಗ್ರಾಮದ ಸಂತ್ರಸ್ತ ರೈತರು ಕೈಗೊಂಡ ಹೋರಾಟವನ್ನು ಶನಿವಾರಮುಂದುರಿಸಿದರು. ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮೊದಲೇ ಹೆದ್ದಾರಿ ತಡೆ ನಡೆಸುತ್ತೇವೆಂದು ಹೇಳಿಕೆ ನೀಡಿದಹಿನ್ನೆಲೆಯಲ್ಲಿ ತಹಶೀಲ್ದಾರ ಬಿ.ವಿ. ಲಕ್ಷೆಶ್ವರ ಮತ್ತು ಸಿಪಿಐ ಶ್ರೀನಿವಾಸ ಹಾಂಡ್ ಸ್ಥಳಕ್ಕೆ ಆಗಮಿಸಿ, ಹೋರಾಟಗಾರರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದು, ರೈಲ್ವೆ ಅಧಿಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಹವಾಲುಗಳಿಗೆ ಉತ್ತರಿಸುತ್ತಾರೆ ಎಂದು ತಿಳಿಸಿ ಹೆದ್ದಾರಿ ತಡೆ ಕೈ ಬಿಡುವಂತೆ ವಿನಂತಿಸಿದ್ದರು.
ಇದಕ್ಕೆ ಹೋರಾಟಗಾರರು ಸಕಾರಾತ್ಮಕ ವಾಗಿಯೇ ಪ್ರತಿಕ್ರಿಯಿಸಿದ್ದರು. ಆದರೆ ರೈಲ್ವೆ ಅಧಿಧಿಕಾರಿಗಳು ಸ್ಥಳಕ್ಕೆ ಬಾರದಿರುವುದಕ್ಕೆ ಕೆಲ ಹೋರಾಟಗಾರ ಒತ್ತಡಕ್ಕೆ ಮಣಿದು ತಹಶೀಲ್ದಾರ ಕಚೇರಿ ಎದುರು ಸಾಂಕೇತಿಕ ರಾಷ್ಟ್ರೀಯ ಹೆದ್ದಾರಿ ತಡೆಗೆಪ್ರತಿಭಟನಾಕಾರರು ಮುಂದಾದರು.
ಈ ವೇಳೆ ನೈಋತ್ಯ ರೈಲ್ವೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮುನಿರಾಜು ಆಗಮಿಸಿ, ಗಂಟೆಗೂ ಹೆಚ್ಚು ಕಾಲ ಚರ್ಚಿಸಿ ಬೇಡಿಕೆಗಳಈಡೇರಿಕೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಬುಧವಾರದ ವರೆಗೆ ತಮಗೆ ನ್ಯಾಯ ದೊರಕಿಸಿಕೊಡಲು ಗಡುವು ನೀಡುತ್ತೇವೆ.
ಅಲ್ಲಿಯವರೆಗೆ ಶಾಂತಿಯುತ ಧರಣಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟ ಸಮಿತಿ ಅಧ್ಯಕ್ಷೆ ಎಸ್.ಜೆ. ಕುಲಕರ್ಣಿ ತಿಳಿಸಿದರು. ರೈತರ ಉಪವಾಸ ಧರಣಿ ಸತ್ಯಾಗ್ರಹ 5ನೇ ದಿನಕ್ಕೆ ಕಾಲಿಟ್ಟಿದೆ.