Advertisement

ಕುಷ್ಟಗಿ: ಕಲ್ಲಂಗಡಿ ಬೆಳೆದ ಪ್ರದೇಶಕ್ಕೆ ದಾಳಿಯಿಟ್ಟ ಕರಡಿಗಳ ಹಿಂಡು: ಆತಂಕದಲ್ಲಿ ರೈತರು

12:42 PM Dec 29, 2021 | Team Udayavani |

ಕುಷ್ಟಗಿ: ಕುಷ್ಟಗಿ ತಾಲೂಕಿನ ಗಡಿ ಗ್ರಾಮ ಹೊನಗಡ್ಡಿ ಸೀಮಾದಲ್ಲಿ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದು ಉತ್ತಮ ಆದಾಯದ ನಿರೀಕ್ಷೆಯಲ್ಲಿದ್ದವರಿಗೆ ಬುಧವಾರ ರೈತರಿಗೆ ಬೆಳ್ಳಂ ಬೆಳಗ್ಗೆ ಕರಡಿಗಳ ಹಿಂಡು ಶಾಕ್ ನೀಡಿವೆ.

Advertisement

ಗ್ರಾಮದ ಹೊರವಲಯದಲ್ಲಿ‌ರೈತ ಶರಣಪ್ಪ ಮ್ಯಾದನೇರಿ ಎರಡು ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆದಿದ್ದರು. ಈ ಬೆಳೆಗ್ಗೆ ಬೀಜ, ಗೊಬ್ಬರ, ಪ್ಲಾಸ್ಟಿಕ್ ಮಲ್ಚಿಂಗ್ ಸೇರಿದಂತೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂ ಸಾವಿರಾರು ರೂ. ಖರ್ಚು ಮಾಡಿಕೊಂಡಿದ್ದರು.ಕಲ್ಲಂಗಡಿ ಹಣ್ಣಾಗುವ ಹಂತದಲ್ಲಿ ಕರಡಿಗಳ ಹಿಂಡು ದಾಳಿ ಇಟ್ಟಿದ್ದು, ಕರಡಿ ತಿಂದಿರುವುದಕ್ಕಿಂತ ಹಣ್ಣು, ಬಳ್ಳಿ ಕೆಡಿಸಿದ್ದೇ ಜಾಸ್ತಿಯಾಗಿದೆ. ಪ್ರತಿ ವರ್ಷ ಈ ಸೀಜನ್ ನಲ್ಲಿ ಕರಡಿ ದಾಳಿ ನಡೆಸುತ್ತಿರುವುದು ರೈತರನ್ನು ಕಂಗಾಲಾಗಿಸಿದೆ.

ಕರಡಿ ಬರದಂತೆ ಎಷ್ಟೇ ಮುನ್ನೆಚ್ಚರಿಕೆವಹಿಸಿದರೂ ಸಹ, ಈ ಪ್ರದೇಶದಲ್ಲಿ ಕರಡಿ ದಾಳಿ ನಿಂತಿಲ್ಲ. ಅರಣ್ಯ ಇಲಾಖೆ ಕರಡಿ ದಾಳಿ ಸಂಧರ್ಭದಲ್ಲಿ ಭೇಟಿ ನೀಡಿ, ಕರಡಿ ಭೋನು ಅಳವಡಿಸುವುದು ಹೊರತು ಪಡಿಸಿದರೆ ವನ್ಯಜೀವಿ ಕರಡಿಗಳ ನಿಯಂತ್ರಣ ಸಾದ್ಯವಾಗಿಲ್ಲ. ಕುಷ್ಟಗಿ,ಯಲಬುರ್ಗಾ, ಗಂಗಾವತಿ ತಾಲೂಕಿನ ಗಡಿಗೆ ಹೊಂದಿಕೊಂಡಿರುವ ಹೊನಗಡ್ಡಿ, ಗಾಣದಾಳ, ಗೌರಿಪುರ ಪ್ರದೇಶದಲ್ಲಿ ಗುಡ್ಡಗಾಡು ಪ್ರದೇಶವಿದೆ.

ಇಲ್ಲಿ ಕರಡಿಗಳ ಚಲನವಲನವಿದ್ದು ಇಲ್ಲಿ ಕರಡಿಗಳ ಬೋನು ಅಳವಡಿಸಿ ಕರಡಿಗಳ ಹಾವಳಿ ನಿಯಂತ್ರಿಸಬೇಕೆನ್ನುವುದು ರೈತರ ಆಗ್ರಹವಾಗಿದೆ. ಕಳೆದ ವರ್ಷವೂ ಕರಡಿಗಳು  ಕಲ್ಲಂಗಡಿ ಫಸಲು ಹಾಳು ಮಾಡಿದ್ದವು ಪದೇ ಪದೇ ಇವುಗಳ ಹಾವಳಿಗೆ ರೈತಾಪಿ ವರ್ಗ ದಿಕ್ಕುತೋಚಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next