ಲಕ್ಷ್ಮೇಶ್ವರ: ಸೊಗಸಾಗಿ ಬೆಳೆದು ನಿಂತು ಫಲ ಕೊಡುವ ಹಂತದಲ್ಲಿರುವ ಬೆಳೆಗಳನ್ನು ತಿಂದು ಹಾಳು ಮಾಡುತ್ತಿರುವ ಹಂದಿಗಳ ಕಾಟಕ್ಕೆ ರೈತ ಸಮುದಾಯ ಕಕ್ಕಾಬಿಕ್ಕಿಯಾಗಿದ್ದು, ಬೆಳೆಗಳ ರಕ್ಷಣೆಗಾಗಿ ಹಗಲು-ರಾತ್ರಿ ಹಂದಿ ಕಾಯುವ ಪರಿಸ್ಥಿತಿ ಎದುರಾಗಿದೆ.
ಭೂಮಿಗೆ ಬೀಜ ಬಿತ್ತನೆ ಮಾಡಿದಾಗಿನಿಂದ ಮಳೆ ಕೊರತೆ-ಇಲ್ಲವೇ ಅತಿವೃಷ್ಟಿ, ಕೀಟಬಾಧೆ, ರೋಗಬಾಧೆ, ಇಳುವರಿ ಕುಂಠಿತ, ಬೆಲೆ ಕುಸಿತ ಹೀಗೆ ಸಾಲು ಸಾಲು ಸಮಸ್ಯೆಗಳ ನಡುವೆಬದುಕು ಸಾಗಿಸುತ್ತಿರುವ ರೈತ ಸಮುದಾಯಕ್ಕೆ ಕಾಡು ಪ್ರಾಣಿ, ಪಕ್ಷಿಗಳಿಂದಷ್ಟೇ ಅಲ್ಲದೇಹಂದಿ-ನಾಯಿಗಳ ಕಾಟದಿಂದಲೂ ಸಂಕಷ್ಟ ತಪ್ಪದಂತಹ ಪರಿಸ್ಥಿತಿಯಿದೆ. ಇದರಿಂದ ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ರೈತರದ್ದಾಗಿದೆ.
ಇದಕ್ಕೆ ಉದಾಹರಣೆಯಾಗಿ ಗೋವನಾಳ ಗ್ರಾಮದ ರೈತ ಚಂದ್ರಗೌಡ ಕರೆಗೌಡ್ರ ಅವರ ಜಮೀನಿನಲ್ಲಿ ಹುಲುಸಾಗಿ ಬೆಳೆದುಹಾಲುಗಾಳಿನಿಂದ ಕೂಡಿದ್ದ 2 ಎಕರೆಗೋವಿನಜೋಳದ ಬೆಳೆಯನ್ನು ಹಂದಿಗಳು ಸಂಪೂರ್ಣ ತಿಂದು ಹಾಳು ಮಾಡಿವೆ. ಕಳೆದ 3ತಿಂಗಳ ಹಿಂದೆ ಬೀಜ, ಗೊಬ್ಬರ, ಕ್ರಿಮಿನಾಶಕ,ನೀರುಣಿಸುವುದು ಸೇರಿ ಎಕರೆಗೆ ಹತ್ತಾರುಸಾವಿರ ರೂ. ಖರ್ಚು ಮಾಡಿ ಹಗಲು-ರಾತ್ರಿಕಟ್ಟಪಟ್ಟು ಬೆಳೆದ ಬೆಳೆ ಇನ್ನೇನು ಫಲ ಕೊಡುವಹಂತದಲ್ಲಿರುವಾಗ ಹಂದಿಗಳು ರಾತ್ರೋರಾತ್ರಿ ತಿಂದು ಹಾಳು ಮಾಡಿವೆ. ಅಳಿದುಳಿದ ಅತ್ಯಲ್ಪ ಬೆಳೆಯನ್ನು ರಕ್ಷಿಸಿಕೊಳ್ಳಲು ಮನೆ ಮಂದಿಯೆಲ್ಲಾ ಹಗಲು-ರಾತ್ರಿ ಹಂದಿ ಕಾಯುವ ಕೆಲಸ ಮಾಡುವಂತಾಗಿರುವುದು ರೈತರ ದುರ್ದೈವ.
ಇದು ಕೇವಲ ಒಬ್ಬ ರೈತನ ಕಥೆಯಾಗಿರದೇ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹಂದಿಗಳ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಬೆಳೆದ ತರಕಾರಿ, ಜೋಳ, ಗೋವಿನ ಜೋಳ ಇತರೇ ಬೆಳೆಗಳು ಹಂದಿಗಳ ಉಪಟಳಕ್ಕೆ ಬಲಿಯಾಗುತ್ತಿವೆ. ಈ ಬಗ್ಗೆ ಪೊಲೀಸ್, ಕಂದಾಯ, ಅರಣ್ಯ, ಕೃಷಿ, ತೋಟಗಾರಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಇದಕ್ಕೆ ತಮ್ಮಿಂದ ಯಾವುದೇ ಪರಿಹಾರ ಇಲ್ಲ ಎನ್ನುವ ಉತ್ತರ ನೀಡುತ್ತಿರುವುದರಿಂದ ರೈತರ ಸಂಕಷ್ಟದ ಕೂಗು ಅರಣ್ಯರೋದನವಾಗಿದೆ.
ಸಂಪೂರ್ಣ ತಿಂದು ಹಾಳು ಮಾಡಿವೆ. ಕಳೆದ 3 ತಿಂಗಳ ಹಿಂದೆ ಬೀಜ, ಗೊಬ್ಬರ, ಕ್ರಿಮಿನಾಶಕ, ನೀರುಣಿಸುವುದು ಸೇರಿ ಎಕರೆಗೆ ಹತ್ತಾರು ಸಾವಿರ ರೂ. ಖರ್ಚು ಮಾಡಿ ಹಗಲು-ರಾತ್ರಿಕಟ್ಟಪಟ್ಟು ಬೆಳೆದ ಬೆಳೆ ಇನ್ನೇನು ಫಲ ಕೊಡುವಹಂತದಲ್ಲಿರುವಾಗ ಹಂದಿಗಳು ರಾತ್ರೋರಾತ್ರಿ ತಿಂದು ಹಾಳು ಮಾಡಿವೆ. ಅಳಿದುಳಿದ ಅತ್ಯಲ್ಪಬೆಳೆಯನ್ನು ರಕ್ಷಿಸಿಕೊಳ್ಳಲು ಮನೆ ಮಂದಿಯೆಲ್ಲಾ ಹಗಲು-ರಾತ್ರಿ ಹಂದಿ ಕಾಯುವ ಕೆಲಸ ಮಾಡುವಂತಾಗಿರುವುದು ರೈತರ ದುರ್ದೈವ. ಇದು ಕೇವಲ ಒಬ್ಬ ರೈತನ ಕಥೆಯಾಗಿರದೇ ಪಟ್ಟಣದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಹಂದಿಗಳ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಬೆಳೆದ ತರಕಾರಿ, ಜೋಳ, ಗೋವಿನ ಜೋಳ ಇತರೇ ಬೆಳೆಗಳು ಹಂದಿಗಳ ಉಪಟಳಕ್ಕೆ ಬಲಿಯಾಗುತ್ತಿವೆ.
ಈ ಬಗ್ಗೆ ಪೊಲೀಸ್, ಕಂದಾಯ, ಅರಣ್ಯ, ಕೃಷಿ, ತೋಟಗಾರಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಇದಕ್ಕೆ ತಮ್ಮಿಂದ ಯಾವುದೇ ಪರಿಹಾರ ಇಲ್ಲ ಎನ್ನುವ ಉತ್ತರ ನೀಡುತ್ತಿರುವುದರಿಂದ ರೈತರ ಸಂಕಷ್ಟದ ಕೂಗು ಅರಣ್ಯರೋದನವಾಗಿದೆ.
ಹಂದಿಗಳ ಉಪಟಳದಿಂದ ಗ್ರಾಮಕ್ಕೆ ಹೊಂದಿಕೊಂಡಿರುವ ರೈತರ ಜಮೀನುಗಳಲ್ಲಿನ ಬೆಳೆಗಳು ಹಾಳಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಹಂದಿಗಳ ಮಾಲೀಕರನ್ನು ಸಂಪರ್ಕಿಸಿ ಹಂದಿಗಳ ಸ್ಥಳಾಂತರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. –
ಬಿ.ಟಿ.ಅಮ್ಮನವರ, ಪಿಡಿಒ, ಗೋವನಾಳ
ಮುಂಗಾರಿನಲ್ಲಿ 50 ಸಾವಿರ ರೂ. ಖರ್ಚು ಮಾಡಿ ಬೆಳೆದಿದ್ದ ಉಳ್ಳಾಗಡ್ಡಿ ಬೆಳೆ ಅತಿವೃಷ್ಟಿ ಮತ್ತು ಹಂದಿ ಕಾಟದಿಂದ ಸಂಪೂರ್ಣ ಹಾಳಾಯಿತು. ಈಗ ಮತ್ತೆ 3 ತಿಂಗಳ ಕಾಲ ಎಕರೆಗೆ 10 ಸಾವಿರ ರೂ. ಖರ್ಚು ಮಾಡಿ ಹಗಲು-ರಾತ್ರಿ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಂದಿಗಳು ತಿಂದು ಹಾಳು ಮಾಡಿವೆ. ಹಂದಿಗಳ ಕಾಟ ತಪ್ಪುತ್ತಿಲ್ಲ. ಬೆಳೆ ಹಾನಿಗೆ ಪರಿಹಾರದ ಅವಕಾಶವೂ ಇಲ್ಲ. ನನ್ನಂತಹ ಅನೇಕ ಬಡ ರೈತರು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ತಲೆದೋರಿಗೆ. ಈ ಬಗ್ಗೆ ಜಿಲ್ಲಾಧಿಕಾರಿಗಳೇ ಮುತುವರ್ಜಿ ವಹಿಸಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು. –
ಚಂದ್ರಗೌಡ ಕರೆಗೌಡ್ರ, ಮುತ್ತಪ್ಪ ವಾಲಿಕಾರ, ರೈತರು ಗೋವನಾಳ