Advertisement

Andhra Pradesh; ಸಿಎಂ ಜಗನ್‌ ಪಕ್ಷಕ್ಕೆ ರೈತರು,ಟೆೃಲರ್‌, ಗೃಹಿಣಿಯರೇ ಸ್ಟಾರ್‌ ಪ್ರಚಾರಕರು!

12:00 AM May 01, 2024 | Team Udayavani |

ವಿಶಾಖಪಟ್ಟಣ:  ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ 12 ಮಂದಿ ಸಾಮಾನ್ಯ ನಾಗರಿಕರನ್ನು ಪಕ್ಷದ ಸ್ಟಾರ್‌ ಪ್ರಚಾರಕರು ಎಂದು ಘೋಷಿಸಿದೆ. ಸಾಮಾನ್ಯವಾಗಿ ಖ್ಯಾತ ರಾಜಕೀಯ ನಾಯಕರು, ಸಿನೆಮಾ ನಟ, ನಟಿಯರು, ಸೆಲೆಬ್ರೆಟಿಗಳನ್ನು ಪಕ್ಷಗಳು ಸ್ಟಾರ್‌ ಪ್ರಚಾರಕರನ್ನಾಗಿ ಮಾಡುತ್ತವೆ. ಆದರೆ ಪಕ್ಷವೊಂದು ಸಾಮಾನ್ಯ ವರ್ಗದ ಜನರನ್ನು ಸ್ಟಾರ್‌ ಪ್ರಚಾರಕರಾಗಿ ಮಾಡಿರುವುದು ಇದೇ ಮೊದಲು.

Advertisement

ಅವನಿಗಡ್ಡ ಕ್ಷೇತ್ರದ ಪಂಡಲನೇನಿ ಶಿವಪ್ರಸಾದ್‌, ಅನಕಾಪಲ್ಲಿ ಕ್ಷೇತ್ರದ ಕಟಾರಿ ಜಗದೀಶ್‌, ರಾಜಮಂಡ್ರಿ ನಗರ ಕ್ಷೇತ್ರದ ಅನಂತ ಲಕ್ಷ್ಮೀ, ನೆಲ್ಲೂರು ಕ್ಷೇತ್ರದ ಸಯ್ಯದ್‌ ಅನ್ವರ್‌, ಮೈಲಾವರಂ ಕ್ಷೇತ್ರದ ಚಲ್ಲಾ ಈಶ್ವರಿ ಸೇರಿದಂತೆ 12 ಮಂದಿ ಸ್ಟಾರ್‌ ಪ್ರಚಾರಕರನ್ನು ವೈಎಸ್‌ಆರ್‌ಸಿಪಿ ಆಯ್ಕೆ ಮಾಡಿದೆ.

ಈ ಪೈಕಿ ನಾಲ್ವರು ಗೃಹಿಣಿಯರು, ಇಬ್ಬರು ರೈತರು, ಒಬ್ಬರು ಆಟೋ ಚಾಲಕ, ಒಬ್ಬರು ಟೈಲರ್‌ ಮತ್ತು ನಾಲ್ವರು ನಿವೃತ್ತ ಸರಕಾರಿ ಸೇವಕರಾಗಿದ್ದಾರೆ.  ಆಂಧ್ರ ಪ್ರದೇಶದ 175 ವಿಧಾನಸಭಾ ಕ್ಷೇತ್ರಗಳು ಹಾಗೂ 25 ಲೋಕಸಭಾ ಕ್ಷೇತ್ರಗಳಿಗೆ ಮೇ 13ರಂದು ಚುನಾವಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next