Advertisement

ಬ್ಯಾಂಕ್‌ ನೋಟಿಸ್‌ಗೆ ಹೆದರಿ ರೈತ ಆತ್ಮಹತ್ಯೆ

06:20 AM Dec 02, 2018 | Team Udayavani |

ಚನ್ನಗಿರಿ(ದಾವಣಗೆರೆ): ಬ್ಯಾಂಕ್‌ ಸಾಲ ಮರುಪಾವತಿ ನೋಟಿಸ್‌ಗೆ ಭಯಗೊಂಡು ರೈತನೋರ್ವ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಯಲೋದಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. 

Advertisement

ಟಿ. ಶಾಂತಪ್ಪ (68) ಆತ್ಮಹತ್ಯೆ ಮಾಡಿಕೊಂಡ ರೈತ. ಅವರು ಶುಕ್ರವಾರ ರಾತ್ರಿ ತಮ್ಮ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರು ಎಕರೆ ಜಮೀನು ಹೊಂದಿದ್ದ ಶಾಂತಪ್ಪ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಹೊನ್ನಾಳಿ ಶಾಖೆಯಲ್ಲಿ 6 ಲಕ್ಷ ರೂ.ಸಾಲ ಪಡೆದಿದ್ದರು. 

ಕೃಷಿ ಪತ್ತಿನ ಸಹಕಾರಿ ಬ್ಯಾಂಕ್‌ ಹಾಗೂ ವಿವಿಧೆಡೆ ಸಾಲ ಸೇರಿ ಸುಮಾರು 9 ಲಕ್ಷ ರೂ.ಸಾಲವಿತ್ತು. ಸಾಲ ಮರುಪಾವತಿಸಲಾಗದೆ, ಇತ್ತ ತೋಟ ಉಳಿಸಿಕೊಳ್ಳಲಾಗದೆ ಜಿಗುಪ್ಸೆಗೊಂಡಿದ್ದರು. ಈ ಮಧ್ಯೆ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಹೊನ್ನಾಳಿ ಶಾಖೆಯಿಂದ ಸಾಲ ಮರುಪಾವತಿಗಾಗಿ ಮನೆ ಆಸ್ತಿ ಮುಟ್ಟುಗೋಲು ನೋಟಿಸ್‌ ಎರಡು ದಿನಗಳ ಹಿಂದೆ ತಲುಪಿತ್ತು. ನೋಟಿಸ್‌ ನೋಡಿದ ಶಾಂತಪ್ಪ ಭಯಭೀತರಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಸವಾಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next