Advertisement

ಸಾಲಮನ್ನಾ ವೇಳೆಯಲ್ಲೇ ಸಿಎಂ ತವರಲ್ಲಿ ಸಾಲಭಾದೆಗೆ ರೈತ ಆತ್ಮಹತ್ಯೆ!

04:20 PM Jun 21, 2017 | |

ಕೆ.ಆರ್‌.ನಗರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ರೈತರು ಸಹಕಾರಿ ಬ್ಯಾಂಕ್‌ಗಳಲ್ಲಿ ತೆಗೆದ 50 ಸಾವಿರ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಘೋಷಣೆ ಮಾಡಿದ್ದಾರೆ. ದುರಂತವೆಂದರೆ ಇದೇ ವೇಳೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ ರೈತನೊಬ್ಬ ಸಾಲಭಾದೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಬಗ್ಗೆ ವರದಿಯಾಗಿದೆ. 

Advertisement

ಕೆ.ಆರ್‌.ನಗರ ದ ಹರಂಬಳ್ಳಿಯಲ್ಲಿ 46 ವರ್ಷ ಪ್ರಾಯದ ರೈತ ಚಂದ್ರೇಗೌಡ ಎನ್ನುವವರು ಕ್ರಿಮಿ ನಾಷಕ ಸೇವಿಸಿ ಸಾವಿಗೆ ಶರಣಾಗಿದ್ದಾರೆ. 

ಸಹಕಾರಿ ಸಂಘದಲ್ಲಿ 97 ಸಾವಿರ ಸಾಲ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಕಬ್ಬು ಬೆಳೆಗಾರರಾಗಿದ್ದ ಚಂದ್ರೇಗೌಡ ಅವರು ಸಾಲ ತೀರಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.

ಸಾಲಿಗ್ರಾಮ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next