Advertisement

ರೈತರು ಬೆಳೆದ ಉತ್ಪನ್ನಕ್ಕೆಉತ್ತಮ ಬೆಲೆ ನೀಡಬೇಕು  

03:49 PM Dec 24, 2022 | Team Udayavani |

ಚಾಮರಾಜನಗರ: ತಾನು ಬೆಳೆದ ಉತ್ಪನ್ನಗಳಿಂದ ಇಡೀ ದೇಶಕ್ಕೆ ಅನ್ನ ನೀಡುವ ಮೂಲಕ ರೈತರು ದೇಶದ ಬೆನ್ನೆಲುಬಾಗಿದ್ದಾರೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು ಹೇಳಿದರು.

Advertisement

ನಗರದ ವಾಲ್ಮೀಕಿ ಭವನದಲ್ಲಿ, ಶುಕ್ರವಾರ, ಜಿಪಂ, ಕೃಷಿ ಇಲಾಖೆ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿಕ ಸಮಾಜ ಇವರ ಸಹಯೋಗದಲ್ಲಿ ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸಿರಿಧಾನ್ಯ ಹಾಗೂ ನೈಸರ್ಗಿಕ ಕೃಷಿ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಕೃಷಿ ಪ್ರಧಾನ ದೇಶವಾಗಿದೆ. ದೇಶದಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರೂ, ಯಾವುದೇ ಉದ್ಯಮಗಳು ಸ್ಥಗಿತಗೊಂಡರೂ ರೈತರ ಕೃಷಿ ಚಟುವಟಿಕೆ ಮಾತ್ರ ನಿಲ್ಲುವುದಿಲ್ಲ. ರೈತರು ಯಾವುದೇ ಸಂಕಷ್ಟದಲ್ಲಿದ್ದರೂ ಕೃಷಿಯಲ್ಲಿ ತೊಡಗಿ ಸಮಾಜಕ್ಕೆ, ದೇಶಕ್ಕೆ ಆಹಾರ ನೀಡಿ ದೇಶಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ ಎಂದರೆ ತಪ್ಪಾಗಲಾರದು. ರೈತರಿಗೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಉತ್ತಮವಾಗಿ ಸ್ಪಂದಿಸಿ, ಅಗತ್ಯ ಸೌಲಭ್ಯಗಳನ್ನು ನೀಡಬೇಕು. ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ನೀಡಬೇಕು. ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕು ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರರಾಜು ಮಾತನಾಡಿ, ಸಿರಿಧಾನ್ಯಗಳು ಉತ್ತಮ ಉತ್ತಮ ಜೀವನಶೈಲಿಗೆ ಮನೆಮದ್ದಾಗಿರುವುದರಿಂದ ಜನರು ಹೆಚ್ಚಾಗಿ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. ರೈತರಿದ್ದರೇ ಮಾತ್ರ ದೇಶ. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗಬೇಕು. ರೈತರ ಬದುಕು ಹಸನಾಗಬೇಕು ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ರೈತರು ಇಂದಿನ ವೇಗಕ್ಕೆ ತಾಳ್ಮೆ ಕಳೆದು ಕೊಳ್ಳುತ್ತಿದ್ದಾರೆ. ಹೆಚ್ಚಿನ ರಸಗೊಬ್ಬರಗಳನ್ನು ಹಾಕುವುದ ರಿಂದ ಭೂಮಿ ವಿಷಮಯವಾಗುತ್ತಿದೆ. ಸಿರಿಧಾನ್ಯ ಗಳನ್ನು ಬೆಳೆಯುವುದರಿಂದ ನೀರಿನ ಉಳಿತಾಯ ಹಾಗೂ ಭೂಮಿಯ ಫ‌ಲವತ್ತತೆಯನ್ನು ಕಾಪಾಡಿಕೊಳ್ಳ ಬಹುದು. ರೈತರು ಸಾಮೂಹಿಕ ಬೇಸಾಯಕ್ಕೆ ಒತ್ತು ನೀಡಬೇಕು. ಉತ್ಪಾದಕರು, ಗ್ರಾಹಕರು ರೈತರೇ ಆಗಬೇಕು. ರೈತರ ಉತ್ಪನ್ನಗಳು ಗ್ರಾಹಕರಿಗೆ ತಲುಪಿ ಸುವ ವ್ಯವಸ್ಥೆಯಾಗಬೇಕು. ಹಾಗಾದಲ್ಲಿ ರೈತರು ಅರ್ಥಿಕವಾಗಿ ಸದೃಢರಾಗಲಿದ್ದಾರೆ ಎಂದರು.

Advertisement

ರೈತ ಮುಖಂಡಅಣಗಳ್ಳಿ ಬಸವರಾಜು ಮಾತ ನಾಡಿ, ನೈಸರ್ಗಿಕ ಕೃಷಿಯ ಮಹತ್ವವನ್ನು ಎಲ್ಲರೂ ಅರಿಯಬೇಕು. ರೈತರು ಕೃಷಿ ಜೊತೆಗೆ ಹೊಸ ಹೊಸ ಆಲೋಚನೆಗಳನ್ನು ಮಾಡಬೇಕಿದೆ ಎಂದರು. ಸಿರಿಧಾನ್ಯ ಹಾಗೂ ನೈಸರ್ಗಿಕ ಕೃಷಿ ಕುರಿತ ಕರ ಪತ್ರಗಳನ್ನು ಹಾಗೂ ರೈತ ಉತ್ಪಾದಕ ಸಂಸ್ಥೆಗಳು ತಯಾರಿಸಿದ ಉತ್ಪನ್ನಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

ಹೆಬ್ಬಸೂರು ಬಸವಣ್ಣ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಚಿಕ್ಕಸ್ವಾಮಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಧುಸೂಧನ್‌, ಉಪನಿರ್ದೇಶಕ ಡಾ.ಸೋಮಶೇಖರ್‌, ಕೃಷಿ ವಿಶ್ವವಿದ್ಯಾಲಯದ ಹರದನ ಹಳ್ಳಿ ಫಾರಂ ನ ವಿಶೇಷಾಧಿಕಾರಿ ಡಾ. ದೊರೆಸ್ವಾಮಿ, ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಯೋಗೇಶ್‌, ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ.ಪಿ. ಪ್ರಕಾಶ್‌, ಸುತ್ತೂರಿನ ಜೆ.ಎಸ್‌.ಎಸ್‌. ಕೃಷಿ ವಿಜ್ಞಾನ ಕೇಂದ್ರದ ನಿವೃತ್ತ ವಿಜ್ಞಾನಿ ಜಮುನಾ ಅರಸ್‌ ಇದ್ದರು.

ಸಿರಿ ಧಾನ್ಯ ಜಾಥಾ : ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಸಿರಿಧಾನ್ಯ ಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ಜಿಲ್ಲಾಡ ಳಿತ ಭವನದ ಮುಂಭಾಗದಿಂದ ಆಯೋಜಿಸ ಲಾಗಿದ್ದ ಸಿರಿಧಾನ್ಯ ಜಾಥಾಗೆ ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು, ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ಅವರು ಸೇರಿದಂತೆ ಇತರೆ ಗಣ್ಯರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next