Advertisement

ರೈತರ ಸತ್ಯಾಗ್ರಹ 5ನೇ ದಿನಕ್ಕೆ

01:42 PM Oct 02, 2019 | Team Udayavani |

ಆಳಂದ: ತಾಲೂಕಿನ ಭೂಸನೂರ ಹತ್ತಿರದ ಎನ್‌ಎಸ್‌ಎಲ್‌ ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದ ರೈತರು ಬಾಕಿ ಬಿಲ್‌ ಪಾವತಿಸಬೇಕು ಎಂದು ಆಗ್ರಹಿಸಿ ಕಾರ್ಖಾನೆ ಎದುರು ಆರಂಭಿಸಿದ ಧರಣಿ ಸತ್ಯಾಗ್ರಹ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

Advertisement

ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿಡ ಮಾಜಿ ಶಾಸಕ ಬಿ.ಆರ್‌. ಪಾಟೀಲ ಮಾತನಾಡಿ, ಕೂಡಲೇ ಕಬ್ಬು ಬೆಳೆಗಾರರ ಬಾಕಿ ವೇತನ, ಸರ್ಕಾರದ ಸಬ್ಸಿಡಿ ಪೂರೈಕೆ ಮಾಡಲು ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ, ರೈತರಿಗೆ ನ್ಯಾಯ ಒದಗಿಸಬೇಕು. ವಿನಾ ಕಾರಣ ಹೋರಾಟಕ್ಕೆ ದಾರಿಮಾಡಿಕೊಡದೇ ನೆರೆ ಕಾರ್ಖಾನೆಗಳ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಸತ್ಯಾಗ್ರಹದಲ್ಲಿ ಉಪವಾಸ ಕೈಗೊಂಡ ಅಸ್ವಸ್ಥರಾದ ರೈತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಾದವರನ್ನು ಬಿ.ಆರ್‌. ಪಾಟೀಲ ಬೆಂಬಲಿಗರೊಂದಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೋರಳ್ಳಿ, ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ, ರಾಜಶೇಖರ ಯಂಕಂಚಿ, ಬಸವಂತರಾವ್‌ ಪಾಟೀಲ, , ಶಾಂತಮಲ್ಲಪ್ಪ ನೆಲ್ಲೂರ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next