Advertisement

ಅನ್ನದಾತರ ಸಾಲ ಮನ್ನಾಕ್ಕೆ ಆಗ್ರಹ

11:05 AM Feb 10, 2020 | Suhan S |

ಹುಬ್ಬಳ್ಳಿ: ಉತ್ತರ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅತಿವೃಷ್ಟಿ, ಅನಾವೃಷ್ಟಿಯಿಂದ ಸಾಕಷ್ಟು ಹಾನಿಯಾಗಿದ್ದು, ಮನೆ ಕಳೆದುಕೊಂಡವರಿಗೆ ಸರಕಾರ ಕೂಡಲೇ ಸಮರ್ಪಕ ಪರಿಹಾರ ಧನ ನೀಡಬೇಕು. ಅತಿವೃಷ್ಟಿಗೊಳಗಾದ ರೈತರ ಸಾಲಮನ್ನಾ ಮಾಡಬೇಕೆಂದು ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿಯವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಆಗ್ರಹಿಸಿದರು.

Advertisement

ರವಿವಾರ ವಿಮಾನ ನಿಲ್ದಾಣದಲ್ಲಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಮಿತಿ ಮುಖಂಡರು, ಮನೆ ಕಳೆದುಕೊಂಡವರು ಪರಿಹಾರ ಧನಕ್ಕಾಗಿ ತಹಶೀಲ್ದಾರರಿಗೆ ಕೇಳಿದರೆ ಜಿಲ್ಲಾಧಿಕಾರಿಯವರ ಹೆಸರು ಹೇಳುತ್ತಾರೆ. ಅವರು ಸರಕಾರದತ್ತ ಬೊಟ್ಟು ಮಾಡುತ್ತಿದ್ದಾರೆ. ಕೂಡಲೇ ಅವರಿಗೆ ಸಮಸ್ಯೆ ಬಗೆಹರಿಸಲು ಸೂಚಿಸಬೇಕು. ನರಗುಂದ, ನವಲಗುಂದ, ಗದಗ ಸೇರಿದಂತೆ ಇತರೆ ತಾಲೂಕು, ಜಿಲ್ಲೆಗಳಲ್ಲಿನ ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು. ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿ ವಿಚಾರವಾಗಿ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು. ಆದಷ್ಟು ಬೇಗ ಮಹದಾಯಿ ಸಮಸ್ಯೆ ಇತ್ಯರ್ಥ ಪಡಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಸಿದ್ದು ತೇಜಿ, ಬಾಬಾಜಾನ ಮುಧೋಳ, ಬಿ.ಎ. ಮುಧೋಳ, ಎನ್‌.ಎ. ಖಾಜಿ, ರಮೇಶ ಬೋಸ್ಲೆ, ಶಿವು ಪಡೇಸೂರ, ಆಂಜನೇಯ ಪೂಜಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next