ಚನ್ನಮ್ಮನ ಕಿತ್ತೂರು: ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಹಣ ನೀಡಿಲ್ಲ ಎಂದು ಆರೋಪಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡ ರವಿ ಪಾಟೀಲ ಮಾತನಾಡಿ, ಸುರಿದ ಭೀಕರ ಮಳೆಯಿಂದ ಖೋದಾನಪುರ, ಕಡತನಾಳ, ತುರಮರಿ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿರುವ ರೈತರ ಮನೆಗಳು ಹಾಳಾಗಿವೆ. ಆದರೆ ಇಲ್ಲಿನ ಫಲಾನುಭವಿಗಳಿಗೆ ಇನ್ನೂವರೆಗೂ ಪರಿಹಾರ ಹಣ ದೊರಕಿಲ್ಲ ಎಂದು ಆರೋಪಿಸಿದರು.
ಈಗಾಗಲೇ ಬಿದ್ದಿರುವ ಮನೆಗಳಲ್ಲಿ ಯಾರೊಬ್ಬರೂ ವಾಸಿಸುತ್ತಿಲ್ಲ ಎಂಬ ಸುಳ್ಳು ಮಾಹಿತಿ ಅ ಧಿಕಾರಿಗಳು ನೀಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಶೇ.50ರಷ್ಟು ನಷ್ಟದ ಪ್ರಮಾಣವನ್ನು ಅ ಧಿಕಾರಿಗಳು ನಮೂದಿಸಿದರೆ ಅಂತಹ ಫಲಾನುಭವಿಗಳಿಗೆಮಾತ್ರ ಸಹಾಯ ಧನ ದೊರೆಯುತ್ತದೆ. ಆದರೆ ಅಧಿಕಾರಿಗಳು ಕಾಟಾಚಾರಕ್ಕೆಂಬಂತೆ ಕೇವಲ ಶೇ. 15 ರಷ್ಟು ನಷ್ಟ ಮಾಹಿತಿ ನೀಡಿದ ಪರಿಣಾಮ ರೈತರಿಗೆ ಪರಿಹಾರ ಹಣ ಸಿಗದೇ ಪರಿತಪಿಸುವಂತಾಗಿದೆ ಎಂದು ಆರೋಪಿಸಿದರು.
ಬಿದ್ದಿರುವ ರೈತರ ಮನೆಗಳಿಗೆ ಪರಿಹಾರ ಹಣ ನೀಡುವಂತೆ ಸಂಭಂಧಪಟ್ಟ ಆಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಸಿದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ಭೀಕರ ಮಳೆಯಿಂದ ಜಮೀನಿನಲ್ಲಿ ಕೈಗೆ ಬಂದ ಬೆಳೆ ರೈತರ ಬಾಯಿಗೆ ಬರಂದಾತಾಗಿರೈತರು ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ. ಶೀಘ್ರವೆ ಅಧಿಕಾರಿಗಳು ಅರ್ಹ ಫಲಾನುಭವಿಗಳಿಗೆ ಪರಿಹಾರ ಹಣ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರವೀಣ ಜೈನ್ ರೈತರ ಮನವೊಲಿಕೆಗೆ ಯತ್ನಿಸಿ ನಂತರ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರ್ಗದ ಸಿಬ್ಬಂದಿ ಮಾಹಿತಿ ನೀಡಿದ ಆಧಾರದ ಮೇಲೆ ಕಚೇರಿಯಲ್ಲಿ ಡೇಟಾ ಎಂಟ್ರಿ ಮಾಡಲಾಗಿದ್ದು ಸಂಬಂದಪಟ್ಟ ಡೇಟಾ ಎಂಟ್ರಿ ಮಾಹಿತಿಯನ್ನು ರೈತರಿಗೆನೀಡಲಾಗುವುದು ಎಂದು ಹೇಳಿದ ನಂತರ ರೈತರು ಪ್ರತಿಭಟನೆ ಹಿಂಪಡೆದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಎಂ.ಎಸ್. ಹೆಗಡೆ, ಮಲ್ಲಸರ್ಜ ಹಿರೇಕುಂಬಿ, ಜಗದೀಶ ತಿಗಡಿ, ರವಿ ಕುರಬಗಟ್ಟಿ, ಶಿವಕ್ಕಾ ಮಿಣಕಿ, ಶಿದ್ದವ್ವಾ ಬೋಗುರ, ಪ್ರಶಾಂತ ಹರಗೋಲ, ರುದ್ರಪ್ಪ ಸೊಪ್ಪಿನ, ಸಂಗಪ್ಪ ತಿಗಡಿ, ಬಸಪ್ಪ ಪೂಜೇರ ಸೇರಿದಂತೆ ಇತರರು ಭಾಗವಹಿಸಿದ್ದರು.