Advertisement

ಡಿಎಪಿ ಗೊಬ್ಬರ ಖರೀದಿಗೆ ಮುಗಿಬಿದ್ದ ಅನ್ನದಾತರು

02:46 PM May 22, 2022 | Team Udayavani |

ಕುಷ್ಟಗಿ: ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಗೊಬ್ಬರದ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ಡಿಎಪಿ ಗೊಬ್ಬರದ ಜೊತೆಗೆ ಸೆಟ್‌ ರೈಟ್‌ (ಜಿಂಕ್‌, ಕ್ಯಾಲ್ಸಿಯಂ, ಸಲ್ಪì) ಲಘು ಪೋಷಕಾಂಶ ಕಡ್ಡಾಯ ಖರೀದಿ ರೈತರಿಗೆ ಹೊರೆಯಾಗಿದೆ.

Advertisement

ತಾಲೂಕಿನಾದ್ಯಂತ ಉತ್ತಮ ಮಳೆಯಾದ ಬೆನ್ನಲ್ಲೇ ರೈತರು, ಬಿತ್ತನೆ ಬೀಜದೊಂದಿಗೆ ಡಿಎಪಿ ರಸ ಗೊಬ್ಬರ ಖರೀದಿಗೆ ಅಂಗಡಿಗೆಯತ್ತ ಮುಖ ಮಾಡಿದ್ದಾರೆ. ರಸಗೊಬ್ಬರ ಖರೀದಿ ಜೋರಾಗುತ್ತಿದ್ದಂತೆ ರೈತರು ಸರದಿಯಲ್ಲಿ ನಿಂತು ಖರೀದಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೀಜ, ಗೊಬ್ಬರದ ಅಂಗಡಿಗಳ ಮುಂದೆ ರೈತರು ಮುಗಿಬಿದ್ದು ಖರೀದಿಸುವ ದೃಶ್ಯ ಕಂಡು ಬಂತು.

ಡಿಎಪಿ ರಾಸಾಯನಿಕ ಗೊಬ್ಬರ ಪ್ರತಿ 50 ಕೆ.ಜಿ. ಚೀಲಕ್ಕೆ 1350 ರೂ. ಎಂಆರ್‌ಪಿ ಇದ್ದು, ಅಂಗಡಿಕಾರರು 1450 ರೂ. ಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಡಿಎಪಿ ಖರೀದಿ ಜೊತೆಗೆ ಸೆಟ್‌ ರೈಟ್‌ ಖರೀದಿಸಬೇಕಿದೆ. ಇದರ ಬೆಲೆ 650 ರೂ. ಇದ್ದು, ಡಿಎಪಿ ಮತ್ತು ಸೆಟ್‌ ರೈಟ್‌ ಸೇರಿದರೆ ಹೆಚ್ಚು ಕಡಿಮೆ 2 ಸಾವಿರ ರೂ ಆಗುತ್ತಿದೆ. ಈ ಮೊತ್ತ ರೈತರಿಗೆ ಹೆಚ್ಚುವರಿ ಆಗಿದೆ. ಬಿತ್ತನೆ ಬೀಜದ ಬೆಲೆ ಹೆಚ್ಚಿದ್ದು, ರಸ ಗೊಬ್ಬರವನ್ನು ಪ್ರತಿ ಚೀಲಕ್ಕೆ 100 ರೂ. ಹೆಚ್ಚುವರಿ ಆಗಿದೆ. ಇದರ ಜೊತೆಗೆ ಸೆಟ್‌ ರೈಟ್‌ ಕಡ್ಡಾಯ ತೆಗೆದುಕೊಳ್ಳಲೇಬೇಕಿದೆ.

ಕೆಲವು ರೈತರು ಅನಿವಾರ್ಯವಾಗಿ ಖರೀದಿಸಿದರೆ ಕೆಲವು ರೈತರು ಗೊಬ್ಬರದ ಅಂಗಡಿಕಾರರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಸೆಟ್‌ ರೈಟ್‌ ಪೋಷಕಾಂಶ ಬಿತ್ತನೆ ಬೀಜದೊಂದಿಗೆ ಬಿತ್ತನೆ ವೇಳೆ ಕೂರಿಗೆಯಲ್ಲಿ ಇಳಿಯುವುದಿಲ್ಲ ಎನ್ನಲಾಗುತ್ತಿದೆ. ಡಿಎಪಿ ಗೊಬ್ಬರದೊಂದಿಗೆ ಸೆಟ್‌ ರೈಟ್‌ ಲಿಂಕ್‌ ಮಾಡಿದ್ದು, ಸೆಟ್‌ ರೈಟ್‌ ಈ ಪೋಷಕಾಂಶವನ್ನು ರೈತರು ಯಾರೂ ಕೇಳುವುದಿಲ್ಲ. ಆದರೆ ಡಿಎಪಿ ಗೊಬ್ಬರದೊಂದಿಗೆ ತೆಗೆದುಕೊಳ್ಳಬೇಕು ಎನ್ನುವುದು ರೈತರ ವಿರೋಧಕ್ಕೆ ಕಾರಣವಾಗಿದೆ.

ರೈತರಿಗೆ ಸ್ಪಿಕ್‌, ಮಂಗಳ ರಸ ಗೊಬ್ಬರದ ಬೇಡಿಕೆ ಇದೆ. ಆದರೆ ಮಾರುಕಟ್ಟೆಯಲ್ಲಿ ಐಪಿಎಲ್‌, ಇಪ್ಕೋ ಮಾತ್ರ ಲಭ್ಯ ಇದೆ. ಮಂಗಳ, ಸ್ಪಿಕ್‌ ಗೊಬ್ಬರ ನೋಡೇ ಇಲ್ಲ. ಈ ಕಂಪನಿ ತರಿಸುವಂತೆ ಬೇಡಿಕೆ ಇದ್ದರೂ ಗೊಬ್ಬರದ ಅಂಗಡಿಯವರು ತರಿಸುತ್ತಿಲ್ಲ. ರೈತರಿಗೆ ಡಿಎಪಿ ಕರಿ ಕಾಳು ಆಗಿರಬೇಕು ಇದೀಗ ಬರುತ್ತಿರುವ ಗೊಬ್ಬರ ಬಿಳಿ ಕಾಳು ಇದೆ ಎನ್ನುತ್ತಾರೆ ರೈತ ಸುರೇಶ ಮಂಗಳೂರು.

Advertisement

ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಈ ಬಾರಿ ರೈತರು ಹತ್ತಿ, ಸರ್ಯಕಾಂತಿ ಬೆಳೆಯಲು ಆಸಕ್ತಿ ಹೊಂದಿ ದ್ದಾರೆ. ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ ಎಂಆರ್‌ಪಿ ಹೊರತಾಗಿ 100 ರೂ. ಸಾಗಣೆ ವೆಚ್ಚ ಎಂದು ತೆಗೆದುಕೊಳ್ಳುತ್ತಿರುವ ಬಗ್ಗೆ ರೈತರಿಂದ ದೂರು ಬಂದಿದ್ದು ಪರಿಶೀಲಿಸಲಾಗುವುದು. -ರಾಘವೇಂದ್ರ ಕೊಂಡಗುರಿ, ಕೃಷಿ ಅಧಿಕಾರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next