ಹುಬ್ಬಳ್ಳಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಲಿಸಿ, ತಾಲೂಕಿನ ಶಿರಗುಪ್ಪಿಯಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಸೋಮವಾರ ಶಿರಗುಪ್ಪಿಯಲ್ಲಿ ರೈತರು, ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸುವ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರಲ್ಲದೆ, ಕೃಷಿಗೆ ಮಾರಕ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಮಾತ್ರವಲ್ಲದೆ ರೈತ ವಿರೋಧಿ ಸಂಬಂಧಿತ ಕಾನೂನುಗಳನ್ನು ಕೈಬಿಡಲು ಹಾಗೂ ರೈತರ ಬೇಡಿಕೆಗಳನ್ನು ಮೋದಿ ಸರಕಾರ ಕೂಡಲೇ ಈಡೇರಿಸಲು ಈ ವೇಳೆ ಮನವಿ ಮಾಡಿದರು.
ಶಿವಣ್ಣ ಹುಬ್ಬಳ್ಳಿ, ಅಮೃತ ಇಜಾರಿ, ಮಹೇಶ ಪತ್ತಾರ, ಗುರಣ್ಣ ದೇಸಾಯಿ, ಗುರನಗೌಡ ಬೆಳವಟಗಿ, ಶೇಖಣ್ಣ ನಾಯ್ಕರ, ಶಿದ್ದಪ್ಪ ಹಳ್ಳೂರು ಬಸವರಾಜ ಭಗವತೆ ಕುಮಾರ ಈರಡ್ಡಿ ಬಾಷಾಸಾಬ ಹುಬ್ಬಳ್ಳಿ ಗುರುನಗೌಡ ಕಾಶಪ್ಪನವರ ಮತ್ತು ಶಿರಗುಪ್ಪಿ ರೈತರು ಭಾಗವಹಿಸಿದ್ದರು.
ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಬಸ್ ಸಂಚಾರ ಆರಂಭ – ಪ್ರಯಾಣಿಕರ ಸಂತಸ