Advertisement

ತಮ್ಮ ಜಮೀನಿನಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ: ವಿಷದ ಬಾಟಲಿ ಪ್ರದರ್ಶಿಸಿದ ರೈತ ಮಹಿಳೆಯರು

10:11 AM Feb 23, 2020 | keerthan |

ವಿಜಯಪುರ: ತಮ್ಮ ಜಮೀನಿನಲ್ಲಿ ಸರ್ಕಾರ ವಿದ್ಯುತ್ ಸ್ಥಾವರ ನಿರ್ಮಾಣ ಮಾಡುತ್ತಿರುವುದನ್ನು ವಿರೋಧಿಸಿ ನಾಲವಾಡ ಬಳಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ರೈತ ಮಹಿಳೆಯರು, ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿ ವಿಷದ ಬಾಟಲಿ ಪ್ರದರ್ಶಿಸಿದ ಘಟನೆ ಜರುಗಿದೆ.

Advertisement

ಜಿಲ್ಲೆಯ ಮುದ್ದೇಬಿಹಾಳ ತಾಲೂಕ ಪೀರಾಪುರ-ಬೂದಿಹಾಳ ಏತ ನೀರಾವರಿ ಯೋಜನೆಗಾಗಿ ಸರ್ಕಾರ ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಮುಂದಾಗಿರುವ ಜಮೀನು ತಮಗೆ ಸೇರಿದ್ದು. ಆದರೆ‌ ಸರ್ಕಾರ ಅಕ್ರಮವಾಗಿ ತಮ್ಮ ಜಮೀನಿನಲ್ಲಿ ಸ್ಥಾವರ ನಿರ್ಮಿಸುತ್ತಿದೆ ಎಂದು ರೈತರು ಪ್ರತಿಭಟನೆ ಮುಂದಾಗಿದ್ದರು.

ಸರ್ಕಾರ ತಕ್ಷಣ ಸ್ಥಾವರ ನಿರ್ಮಾಣ ಸ್ಥಗಿತಗೊಳಿಸದಿದ್ದಲ್ಲಿ ಆತ್ಮಹತ್ಯೆ‌ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದರು.

ಸರ್ಕಾರ ಸ್ಪಂದಿಸದ ಕಾರಣ ಶನಿವಾರ ರೈತರು ವಿಷದ ಬಾಟಲಿ ಸಮೇತ ನಾಲತವಾಡ ಬಳಿಯ ಧರಣಿ ಸ್ಥಳಕ್ಕೆ ಬಂದಿದ್ದರು. ಇದರಲ್ಲಿ ಓರ್ವ ರೈತ ಮಹಿಳೆ ವಿಷ ಸೇವನೆಗೆ ಯತ್ನಿಸುತ್ತಲೇ ಸ್ಥಳದಲ್ಲಿದ್ದ ಪೊಲೀಸರು ವಿಷದ ಬಾಟಲಿ ಕಸಿದು, ರೈತರನ್ನು ಧರಣಿ ಸ್ಥಳದಿಂದ ಹೊರ ಹಾಕಿದರು.

ಈ ಹಂತದಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದವಿಜಯಪುರ ಉಪ ವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಕೆಬಿಜೆಎನ್ಎಲ್ ಅಧಿಕಾರಿಗಳ ಸಮ್ಮುಖದಲ್ಲಿ ರೈತರೊಂದಿಗೆ ಚರ್ಚೆ ನಡೆಸಿದರು.

Advertisement

ಅಂತಿಮವಾಗಿ ರೈತರು ತಮ್ಮ ಜಮೀನು ಎನ್ನುವ ಕುರಿತು 15 ದಿನಗಳಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ಅಥವಾ ಆದೇಶ ತರಬೇಕು. 15 ದಿನಗಳಲ್ಲಿ ನ್ಯಾಯಾಲಯದ ಆದೇಶ ತರದಿದ್ದಲ್ಲಿ ಕಾಮಗಾರಿ ಮುಂದುವರೆಸುವುದಾಗಿ ಅಧಿಕಾರಿಗಳು ರೈತರಿಗೆ ಗಡುವು ನೀಡಿದರು. ಇದಕ್ಕೆ ಒಪ್ಪಿದ ರೈತರು ಧರಣಿ ಕೈಬಿಟ್ಟು, ಸ್ಥಳದಿಂದ ನಡೆದರು.

Advertisement

Udayavani is now on Telegram. Click here to join our channel and stay updated with the latest news.

Next