ನವದೆಹಲಿ:ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಸುಧಾರಣೆ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಿಗಿಪಟ್ಟು ಹಿಡಿದು ರೈತರು ಕಳೆದ ಆರು ದಿನಗಳಿಂದ ದೆಹಲಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮತ್ತು ಎನ್ ಸಿಆರ್ ನಲ್ಲಿ ತರಕಾರಿ ಹಾಗೂ ಹಣ್ಣು, ಹಂಪಲಿನ ಬೆಲೆ ಹೆಚ್ಚಳವಾಗಲು ಕಾರಣವಾಗಿರುವುದಾಗಿ ವರದಿ ತಿಳಿಸಿದೆ.
ದೆಹಲಿ-ಹರ್ಯಾಣದ ವಿವಿಧ ಗಡಿಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ತರಕಾರು, ಹಣ್ಣು ಸರಬರಾಜು ಮಾಡುವ ಲಾರಿಗಳು ದೆಹಲಿಗೆ ಆಗಮಿಸಲು ಸಾಧ್ಯವಾಗದೆ ಮಧ್ಯೆ ದಾರಿಯಲ್ಲಿ ಸಿಲುಕಿಕೊಂಡಿರುವುದರಿಂದ ರಾಜಧಾನಿಯಲ್ಲಿ ಬೆಲೆ ಏರಿಕೆ ಬಿಸಿ ತಟ್ಟಿರುವುದಾಗಿ ವರದಿ ವಿವರಿಸಿದೆ.
ಅಷ್ಟೇ ಅಲ್ಲ ಸಿಂಘು ಮತ್ತು ಟಿಕ್ರಿ ಗಡಿ ಪ್ರದೇಶದಲ್ಲಿ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ನಿಟ್ಟಿನಲ್ಲಿ ದೆಹಲಿಯಿಂದ ಇತರ ರಾಜ್ಯಗಳಿಗೂ ಸರಬರಾಜಾಗುತ್ತಿದ್ದ ತರಕಾರಿ, ಹಣ್ಣುಗಳನ್ನು ಸಾಗಿಸುತ್ತಿದ್ದ ಲಾರಿಗಳಿಗೂ ಪ್ರತಿಭಟನೆಯ ಬಿಸಿ ಮುಟ್ಟಿರುವುದಾಗಿ ವರದಿ ಹೇಳಿದೆ.
ದೆಹಲಿಯ ಆಜಾದ್ ಪುರ್ ಮಂಡಿ ಅತೀ ದೊಡ್ಡ ಹೋಲ್ ಸೇಲ್ ಮಾರುಕಟ್ಟೆಯಾಗಿದೆ. ಆದರೆ ಪ್ರತಿಭಟನೆಯಿಂದ ಸರಬರಾಜಿನ ಮೇಲೆ ದೊಡ್ಡ ಹೊಡೆತ ಬಿದ್ದಿರುವುದಾಗಿ ಅಜಾದ್ ಪುರ್ ಮಂಡಿಯ ಸದಸ್ಯರೊಬ್ಬರು ದೂರಿದ್ದಾರೆ.
ಇದನ್ನೂ ಓಧಿ:ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ್ ಹಾಟ್ ಫೋಟೋ ಗ್ಯಾಲರಿ
ಪ್ರತಿಭಟನೆಯಿಂದಾಗಿ ತರಕಾರಿ, ಹಣ್ಣುಗಳ ರಖಂ ಮತ್ತು ಚಿಲ್ಲರೆ ಮಾರಾಟದ ಬೆಲೆಯಲ್ಲಿ ಹೆಚ್ಚಳವಾಗಿದೆ. ಕೆಲವು ಹಣ್ಣುಗಳ ಬೆಲೆ ಕೆಜಿಗೆ 100 ರೂಪಾಯಿ ಏರಿಕೆ ಕಂಡಿರುವುದಾಗಿ ವರದಿ ತಿಳಿಸಿದೆ.