ಕುಷ್ಟಗಿ: ಪಟ್ಟಣದ ಹೊರವಲಯದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಗೆ ಹೊಂದಿಕೊಂಡಿರುವ ಸ.ನಂ.2/1ರ 10 ಎಕರೆ 7 ಗುಂಟೆ ವಿಸ್ತೀರ್ಣ ಜಮೀನು ಭೂ ಸ್ವಾಧೀನದಲ್ಲಿರುವ ಜಮೀನಿನ ಸರಹದ್ದು ಗುರುತಿಸುವಿಕೆ ಸಂದರ್ಭದಲ್ಲಿ ರೈತರ ವಿರೋಧ ವ್ಯಕ್ತವಾಯಿತು.
ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ, ಜಿಲ್ಲಾ ಭೂ ಮಾಪನ ಇಲಾಖ ಅಧಿಕಾರಿ ಭಾವನ ಸಮ್ಮುಖದಲ್ಲಿ ಖುದ್ದು ಆಗಮಿಸಿ, ದಾಖಲೆಗಳನ್ನು ಪರಿಶೀಲಿಸಿ, ಭೂ ಮಾಪನಾ ಇಲಾಖೆಯವರು, ಸದರಿ ಜಮೀನಿನ ವ್ಯಾಪ್ತಿ ಅಳತೆಗೆ ಮುಂದಾದರು. ಈ ಸಂದರ್ಭದಲ್ಲಿ ಸಾಗುವಳಿ ಆಗಿರುವ ಜಮೀನಿನಲ್ಲಿ ಸರಹದ್ದು ಗುರುತಿಸುವಿಕೆಗೆ ಜೆಸಿಬಿಯಿಂದ ಕಲ್ಲು ನೆಡಲು ಅಗಿಯಲು ಮುಂದಾದಾಗ, ಜೆಸಿಬಿ ಓಡಾಟದಿಂದ ಬೆಳೆದು ನಿಂತ ಬೆಳೆ ಹಾಳಾಗುತ್ತಿದೆ. ಹಾಳಾಗದಂತಿರಲು ಕಾರ್ಮಿಕರ ಕಡೆಯಿಂದ ಕಲ್ಲು ಹಾಕಿಸುವಂತೆ ಜಮೀನಿಗೆ ಸಂಬಂಧಿಸಿದವರು ಒತ್ತಾಯಿಸಿದರು.
ರೈತರ ಒತ್ತಾಯಕ್ಕೆ ಸ್ಪಂದಿಸಿದ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಅವರು, ಸದ್ಯ ಭೂ ಸ್ವಾ ಧೀನಗೊಂಡ ಜಮೀನು ಮಾತ್ರ ಅಳತೆ ಮಾಡಲಿದ್ದು, ತಕಾರಾರು ಏನೇ ಇದ್ದರೂ ಸೋಮವಾರ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯಾರ್ಥಕ್ಕೆ ಅವಕಾಶ ಕಲ್ಪಿಸುತ್ತೇವೆ. ಬೆಳೆ ಇದ್ದ ಪ್ರದೇಶದಲ್ಲಿ ಸರಹದ್ದಿನ ಜೆಸಿಬಿ ಓಡಾಡದಂತೆ ಸೂಚಿಸಿದರು. ಜಮೀನು ಅಳತೆ ಮಾಡಲು ಬಂದಿಲ್ಲ: ಭೂ ಮಾಪನಾ ಇಲಾಖ ಜಿಲ್ಲಾ ಅಧಿಕಾರಿ ಭಾವನ, “ರೈತರ ಜಮೀನು ಅಳತೆ ಮಾಡಲು ಇಲ್ಲಿಗೆ ಬಂದಿಲ್ಲ. ಸರ್ಕಾರದ (ಕೆಎಸ್‌ಎಸ್ ಡಿಐಡಿಸಿ) ಜಮೀನು ಅಳತೆ ಮಾಡಲು ಮಾಡು ಬಂದಿದ್ದೇವೆ.
ರೈತರು ಅರ್ಜಿ ಕೊಟ್ಟರೆ ಜಮೀನು ಅಳತೆ ಮಾಡುತ್ತೇವೆ’ ಎಂದಾಗ, ಅಲ್ಲಿದ್ದ ರೈತರು “ಹಲವು ವರ್ಷಗಳಿಂದ ಅಳತೆಗಾಗಿ ಅರ್ಜಿ ಸಲ್ಲಿಸಿದ್ದೇವೆ. ಯಾರೂ ಈ ಜಮೀನತ್ತ ಸುಳಿದಿಲ್ಲ. ಈ ಭೂ ಸ್ವಾಧೀನದಲ್ಲಿ ರೈತರಿಗೆ ಅನ್ಯಾಯವಾಗಿದೆ. ರೈತರಿಗೊಂದು ನ್ಯಾಯ? ಸರ್ಕಾರಕ್ಕೆ ಒಂದು ನ್ಯಾಯ? ರೈತರಿಗೆ ಬೆಲೆ ಇಲ್ಲವೇ? ಎಂದು ಪ್ರಶ್ನಿಸಿದರು.
ಹೆದ್ದಾರಿ ಹೊಂದಿಕೊಂಡಿರುವ ವಿರುಪಾಕ್ಷಪ್ಪ ಬಂಡಿ ಜಮೀನಿನ ಬದುವಿಗೆ ಹಳದಿ ಬಣ್ಣದಿಂದ ಮಾರ್ಕ್ ಮಾಡುವಾಗಲೂ ಅಲ್ಲಿದ್ದ ರೈತರು “ನಮ್ಮ ಜಮೀನು ಭೂ ಸ್ವಾ ಧೀನವಾಗಿಲ್ಲ. ಜಮೀನಿಗೆ ಏಕೆ ಮಾರ್ಕ್ ಮಾಡುತ್ತೀರಿ’ ಎಂದು ಕೆಎಸ್ ಎಸ್ ಐಡಿಎಸ್ ಎಇಇ ಮುರಳೀಧರ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ಹಾಕಿದ ಮಾರ್ಕ್ ಅಳುಕಿಸಿ ಆಕ್ರೋಶ ಹೊರ ಹಾಕಿದರು.