Advertisement

ಸಮರ್ಪಕ ವಿದ್ಯುತ್‌ಗೆ ರೈತರ ಧರಣಿ

02:50 PM Jul 21, 2019 | Suhan S |

ಶ್ರೀರಂಗಪಟ್ಟಣ: ತಾಲೂಕಿನ ವಿವಿಧ ಗ್ರಾಮಗಳಿಗೆ ಸಮರ್ಪಕ ವಿದ್ಯುತ್‌ಗೆ ಒತ್ತಾಯಿಸಿ ರೈತ ಸಂಘದ ಮುಖಂಡರು ಪಟ್ಟಣದ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ರೈತ ಸಂಘದ ಅಧ್ಯಕ್ಷ ಮರಳಗಾಲ ಕೃಷ್ಣೇಗೌಡ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ಸೆಸ್ಕ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿದಿನ ವಿದ್ಯುತ್‌ ಕಣ್ಣಾಮುಚ್ಚಾಲೆಯಾಡುತ್ತಿದ್ದು ತಾಲೂಕಿನ ವಿವಿಧ ವಿದ್ಯುತ್‌ ಘಟಕಗಳ ದುರಸ್ತಿ ಕಾರ್ಯ ಎಂದು ನೆಪ ಹೇಳಿ ವಿದ್ಯುತ್‌ ಕಡಿತ ಮಾಡುವುದು ಸಾಮಾನ್ಯವಾಗಿದೆ. ದುರಸ್ತಿ ಕಾರ್ಯ ಇಲ್ಲದಿದ್ದರೂ ಅರ್ಧ ಗಂಟೆಗೊಮ್ಮ ಪ್ರತಿದಿನ ವಿದ್ಯುತ್‌ ಕಡಿತ ಮಾಡುವುದರ ಕ್ರಮವೇನು ಎಂದು ಇಲಾಖೆಯ ಎಇಇ ನಂದೀಶ್‌ ಅವರಿಗೆ ತರಾಟೆ ತೆಗೆದುಕೊಂಡರು.

ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ನೀಡುತ್ತೇವೆ ಎಂದು ಹೇಳಿ ರಾತ್ರಿಯಲ್ಲಿ 3 ಗಂಟೆ ಹಾಗೂ ಹಗಲುನಲ್ಲಿ 4 ಗಂಟೆ ವಿದ್ಯುತ್‌ ಸರಬರಾಜು ಮಾಡಿ, ಅದರಲ್ಲಿಯೂ ಕಡಿತಗೊಳಿಸಲಾಗುತ್ತಿದೆ. ಟೀಸಿಗಳು ಆಕಸ್ಮಿಕವಾಗಿ ವಿದ್ಯುತ್‌ ಅವಗಡದಿಂದ ಸುಟ್ಟು ಹೋದರೂ ಆನ್‌ಲೈನ್‌ ಮೂಲಕ ಮಾಹಿತಿ ನೀಡಿದರೆ ಎರಡು ದಿನದಲ್ಲಿ ಮತ್ತೆ ಅಳವಡಿಸಲಾಗುತ್ತದೆ ಎಂದು ಹೇಳುವ ಸರ್ಕಾರ ತಿಂಗಳಾದರೂ ಟೀಸಿ ಕೆಟ್ಟಿದ್ದರೆ ಅದರ ದುರಸ್ತಿ ಮಾಡಿಲ್ಲ. ಕೂಡಲೇ ವಿದ್ಯುತ್‌ ಕಡಿತ ಮಾಡುವುದನ್ನು ಸ್ಥಗಿತಗೊಳಿಸಿ ಸಮರ್ಪಕ ವಿದ್ಯುತ್‌ ಸರಬರಾಜು ಮಾಡುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಕಾರ್ಯಾದ್ಯಕ್ಷ ಸ್ವಾಮೀಗೌಡ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ಬಾಲಕೃಷ್ಣ, ಬಿ.ಎಸ್‌.ರಮೇಶ್‌, ಕೃಷ್ಣಪ್ಪ, ದೊಡ್ಡಪಾಳ್ಯ ಜಯರಾಂ, ಚಂದ್ರು ಜವರೇಗೌಡ, ಕೆಂಪೇಗೌಡ, ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next