Advertisement
ಬಳಿಕ ಘೋಷಣೆಗಳೊಂದಿಗೆ ಹಸಿರು ಶಾಲು ಹಾರಿಸುತ್ತ ಸಂಸದರ ನಿವಾಸದವರೆಗೆ ಪಾದಯಾತ್ರೆ ನಡೆಸಿದರು. ಜಿಟಿ ಜಿಟಿ ಮಳೆಯಲ್ಲೇ ಎರಡೂಮೂರು ಗಂಟೆ ಕಾಲ ಧರಣಿ ನಡೆಸಿದರು. ಈ ವೇಳೆ ಸಂಸದ ಖೂಬಾ ಅನುಪಸ್ಥಿತಿ ಇತ್ತು. ಸಂಸದರಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರರು ಸ್ವೀಕರಿಸಲು ಮುಂದಾದಾಗ ಜಿಲ್ಲಾ ಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ರೈತರು ಪಟ್ಟು ಹಿಡಿದರು. ಕೊನೆಗೆ ಜಿಲ್ಲಾಧಿಕಾರಿ ಡಾ| ಮಹಾದೇವ ಆಗಮಿಸಿ ಮನವಿ ಸ್ವೀಕರಿಸಿದರು.ರಾಷ್ಟ್ರೀಯ ಬ್ಯಾಂಕ್‌ಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರ ರೈತರ ವಿಮೆ ಹಾಗೂ ಬರ ಪರಿಹಾರದ ನೀತಿಗಳನ್ನು ಹೊಸದಾಗಿ ಮಾಡಿದೆ. ಅದು ರೈತರ ವಿರೋಧ ನೀತಿಯಾಗಿದ್ದು, ಅದನ್ನು ಕೂಡಲೇ ಕೈ ಬಿಟ್ಟು ಕಳೆದ ಸಾಲಿನಲ್ಲಿ ಇರುವ ಮಾನದಂಡಗಳನ್ನೇ ಮುಂದುವರಿಸಬೇಕು. ಉದ್ದು, ಹೆಸರು, ಸೋಯಾ, ತೊಗರಿ ಬೆಲೆಗಳ ದರ ಮುಕ್ತ
ಮಾರುಕಟ್ಟೆಯಲ್ಲಿ ಕಡಿಮೆ ಆಗಿದೆ. ಆದ್ದರಿಂದ ಸರ್ಕಾರವೇ ಸಹಕಾರಿ ಪತ್ತಿನ ಸಂಘಗಳ ಮೂಲಕ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ಕೂಡಲೇ ತೆರೆಯಬೇಕು ಎಂದು ಒತ್ತಾಯಿಸಲಾಗಿದೆ.
ಸಿದ್ರಾಮಪ್ಪ ಆಣದೂರೆ, ಖಾಸೀಮ್ ಅಲಿ, ವಿಠಲರೆಡ್ಡಿ ಆಣದೂರ, ಚಂದ್ರಶೇಖರ ಜಮಖಂಡಿಸಿ, ಸತೀಶ ನನ್ನೂರೆ, ಶ್ರೀಕಾಂತ ಬಿರಾದಾರ, ಶಂಕ್ರೆಪ್ಪಾ ಪಾರಾ, ಬಾಬುರಾವ್ ಜೋಳದಾಬಕೆ, ಶಾಮಣ್ಣ ಬಾವಗೆ, ಶಶಿರಾವ್ ಕಣಜಿ ಮತ್ತು ವೀರಪಣ್ಣಾ ದುಬಲಗುಂಡಿ ಪಾಲ್ಗೊಂಡಿದ್ದರು.