Advertisement

ಕೇಂದ್ರದ ವಿರುದ್ಧ ರೈಲ್ವೆ ನಿಲ್ದಾಣದ ಎದುರು ರೈತರ ಪ್ರತಿಭಟನೆ

08:06 PM Feb 19, 2021 | Team Udayavani |

ಮೈಸೂರು: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ರದ್ದತಿಗೆ ಆಗ್ರಹಿಸಿ ದೇಶಾದ್ಯಂತ ಕರೆ ನೀಡಿರುವ ರೈಲು ಸಂಚಾರ ತಡೆ ಚಳವಳಿ ಬೆಂಬಲಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ರೈತ-ದಲಿತ-ಕಾರ್ಮಿಕ ಐಕ್ಯ ಹೋರಾಟ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಬೆಳಗ್ಗೆ 11.30ರ ಸುಮಾರಿಗೆ ನಗರದ ರೈಲ್ವೆ ನಿಲ್ದಾಣದ ಮುಂಭಾಗ ಆಗಮಿಸಿದ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣದ ಬಳಿ ಭದ್ರತೆಗಾಗಿ ನೂರಾರು ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ರೈಲು ನಿಲ್ದಾಣ ಒಳ ಪ್ರವೇಶ ಮಾಡದಂತೆ ಪೊಲೀಸರು ಮುಂಜಾಗ್ರತೆ ವಹಿಸಿ ರೈಲು ನಿಲ್ದಾಣದಮುಂಭಾಗ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

ಇದರಿಂದ ರೊಚ್ಚಿಗೆದ್ದ ರೈತರು ರೈಲು ನಿಲ್ದಾಣ ಪ್ರವೇಶದ್ವಾರದ ಮುಂಭಾಗವೇ ಧರಣಿ ಕುಳಿತು ಧಿಕ್ಕಾರ ಕೂಗಿದರು. ಬಳಿಕ ರೈತರು ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸಲು ಯತ್ನಿಸುತ್ತಿದ್ದಂತೆ ಪೊಲೀಸರು ಬಂಧಿಸಿದರು. ಇದೇ ವೇಳೆ ರೈತನೊಬ್ಬ ಬಸ್ಸಿಗೆ ತನ್ನ ತಲೆಯನ್ನು ಚಚ್ಚಿಕೊಂಡರೆ, ಮತ್ತೂಬ್ಬ ರೈತ ಬಸ್‌ ಎದುರು ನಿಂತು ಕೊಂಡು ಅಡ್ಡ ಮಲಗಲು ಯತ್ನಿಸಿದರು. ಈ ನಡುವೆ ಬಸ್‌ಗೆ ಅಂಟಿಸಲಾಗಿದ್ದ ಸರ್ಕಾರಿ ಜಾಹೀರಾತಿನ ಪೋಸ್ಟರ್‌ನಲ್ಲಿದ್ದ ಪ್ರಧಾನಿ ಮೋದಿ, ಸಿಎಂ ಬಿಎಸ್‌ವೈಭಾವಚಿತ್ರಕ್ಕೆ ರೈತನೊಬ್ಬ ಶೂನಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

ಬಳಿಕ ಪೊಲೀಸರು ಮತ್ತು ಪ್ರತಿಭಟನಾಕಾರ ನಡುವೆ ವಾಗ್ವಾದ ನಡೆಯಿತು. ನಂತರ ಪೊಲೀಸರು ರೈತರನ್ನು ಬಂಧಿಸಿ ಬಸ್‌ಗಳಲ್ಲಿ ಕರೆದೊಯ್ದು ಡಿಆರ್‌ ಗ್ರೌಂಡ್‌ ಬಳಿ ಬಿಡುಗಡೆ ಮಾಡಿದರು. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಅತ್ತಹಳ್ಳಿ ದೇವರಾಜ್‌, ಹಳ್ಳಿಕೆರೆಹುಂಡಿ ಭಾಗ್ಯರಾಜ್‌, ಬನ್ನಹಳ್ಳಿ ಸೋಮಣ್ಣ, ಬರಡನಪುರ ನಾಗರಾಜ್‌, ಹಾಡ್ಯ ರವಿ, ಮಂಜುಳಾ, ರೇಖಾ, ಸೋಮಸುಂದರ್‌, ರಮೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next