Advertisement

2ನೇ ದಿನಕ್ಕೆ ಕಾಲಿಟ್ಟ ಧರಣಿ

05:40 PM Jun 24, 2022 | Team Udayavani |

ದೇವದುರ್ಗ: ವಿವಿಧ ಬೇಡಿಕೆ ಈಡೇರಿಕೆಗಾಗಿ ಪ್ರಾಂತ ರೈತ ಸಂಘ ಜಾಲಹಳ್ಳಿ ಗ್ರಾಪಂ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ.

Advertisement

ಕೆಲ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುವ ಮೂಲಕ ಬಗೆಹರಿಸಲಾಗಿದೆ. ಜ್ವಲಂತ ಸಮಸ್ಯೆ ಕುರಿತು ಇಲ್ಲಿವರೆಗೆ ಅಧಿಕಾರಿಗಳು ಸ್ಪಂದಿಸದೇ ಹಿಂದೇಟು ಹಾಕಿದ ಹೋರಾಟ ಅನಿವಾರ್ಯ ಎಂದು ಪ್ರತಿಭಟನಾಕರರು ದೂರಿದರು.

ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಹಲವು ಬೇಡಿಕೆಗಳು ಈಡೇರಿಸಲು ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆ ಉತ್ಪತ್ತಿ ಹೆಚ್ಚಿವೆ. ಫಾಗಿಂಗ್‌ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಹುಸಿ ಭರವಸೆ ನೀಡುತ್ತಿರುವ ಹಿನ್ನೆಲೆ ನಿವಾಸಿಗಳು ಸಾಂಕ್ರಮಿಕ ರೋಗದ ಭೀತಿ ಎದುರಿಸುತ್ತಿದ್ದಾರೆ.

ಜಾಲಹಳ್ಳಿ ಗ್ರಾಮದಲ್ಲಿರುವಂತಹ ಹಲವು ಸಮಸ್ಯೆಗಳಿಗೆ ಕೊಡಲೇ ಪರಿಹಾರ ನೀಡಬೇಕು. ಯಾವುದೇ ವಾರ್ಡ್‌ನಲ್ಲಿರುವ ಸಮಸ್ಯೆಗೆ ತಕ್ಷಣ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು. ಇನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಸಮಪರ್ಕ ಕೆಲಸ ನೀಡುತ್ತಿಲ್ಲ. ಸರಕಾರಿ ಶಾಲೆಗಳು ಅವ್ಯವಸ್ಥೆಯಲ್ಲಿವೆ.

ನರಸಣ್ಣ ನಾಯಕ, ಶಬ್ಬೀರ ಜಾಲಹಳ್ಳಿ, ದುರಗಪ್ಪ ಹೊರಟಿ, ಮೌನೇಶ ದಾಸರ, ಹನುಮಂತ ಮಡಿವಾಳ, ಭೀಮಣ್ಣ ಡೆಂಗಿ, ಸಂಗಮೇಶ, ಶಿವಮಾನ್ಯ ಪ್ಯಾಪ್ಲಿ, ದುರಗಪ್ಪ ಕುಳ್ಳಿ, ಬಸವರಾಜ, ರಂಗನಾಥ, ರಿಯಾಜ್‌, ಅರ್ತಿ, ಮೇಲಪ್ಪ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next