Advertisement

ವಿವಿಧ ಬೇಡಿಕೆ ಈಡೇರಿಕೆಗೆ ರೈತರ ಆಗ್ರಹ

02:08 PM Oct 25, 2019 | Suhan S |

ಬೈಲಹೊಂಗಲ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಭಾರತೀಯ ಕೃಷಿಕ ಸಮಾಜ ನವದೆಹಲಿಯ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗೆ ಮೂಲಕ ಗುರುವಾರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

Advertisement

ಈ ವೇಳೆ ಭಾರತೀಯ ಕೃಷಿಕ ಸಮಾಜ ನವದೆಹಲಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಕಮತ ಮಾತನಾಡಿ, ಭಾರತ ಸರ್ಕಾರ ಜಾರಿಗೆ ತರಲು ಹೊರಟಿರುವ ಆರ್‌ಸಿಇಪಿ ಮುಕ್ತ ವ್ಯಾಪಾರ ಯೋಜನೆಯಲ್ಲಿ ಕೃಷಿ ಉತ್ಪನ್ನಗಳನ್ನು ಈ ಯೋಜನೆಯಿಂದ ಹೊರಗಿಡಲು ನಿರ್ದೇಶನ ನೀಡಬೇಕು. ಈ ಯೋಜನೆಯಿಂದ ಭಾರತದ ಕೃಷಿ ಚಟುವಟಿಕೆಯಲ್ಲಿ ನಿರತರಾಗಿರುವ ಸಣ್ಣ ಮತ್ತು ಮಧ್ಯಮ ರೈತರು ಜಮೀನು ಕಳೆದುಕೊಳ್ಳುವದರೊಂದಿಗೆ ಹೈನುಗಾರಿಕೆಯ ಉದ್ಯೋಗದಿಂದ ವಂಚಿತರಾಗಲಿದ್ದಾರೆ ಎಂದರು.

ಎಪಿಎಂಸಿ ಸದಸ್ಯ ಎಫ್‌.ಎಸ್‌.ಸಿದ್ದನಗೌಡರ ಮಾತನಾಡಿ, ಕರ್ನಾಟಕ ರಾಜ್ಯದ ಉತ್ತರ ಭಾಗದ ಜಿಲ್ಲೆಗಳಲ್ಲಿ ಹಿಂದೆ ಎಂದು ಖಂಡರಿಯದ ಮಳೆ ಮತ್ತು ಪ್ರವಾಹ ಉಂಟಾಗಿ ರೈತರ ಜೀವನ ದುಸ್ಥರವಾಗಿದೆ ಆದ್ದರಿಂದ ಈ ಭಾಗದ ರೈತರ ಸಂಪೂರ್ಣ ಸಾಲ ಮನ್ನಾ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗಳು: ಭಾರತ ಸರ್ಕಾರ ಆರ್‌ಸಿಇಪಿ ಮುಕ್ತ ವ್ಯಾಪಾರ ಯೋಜನೆಯಿಂದ ಕೃಷಿ ಉತ್ಪನ್ನಗಳನ್ನು ಕೈ ಬಿಡಬೇಕು. ರಾಜ್ಯದ ಪ್ರವಾಹ ಪೀಡಿತ ರೈತರ ಸಂಪೂರ್ಣ ಸಾಲ ಮನ್ನಾ, ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದಲ್ಲಿ ಮಲಪ್ರಭಾ ನದಿಯ ಸುಮಾರು 2 ಟಿಎಮ್‌ಸಿ ನೀರು ಬಳಸಿಕೊಂಡು ವಿದ್ಯುತ್‌ ತಯಾರಿಸುವ ಗ್ರೀನ್‌ ಕೋ ಕಂಪನಿ ಕಾರ್ಯವನ್ನು ಸ್ಥಗಿತಗೊಳಿಸಬೇಕು. ಬಾಗೇವಾಡಿ-ಸವದತ್ತಿಯ ರಾಜ್ಯ ಹೆದ್ದಾರಿ ಯೋಜನೆಗೆ ಟೋಲ್‌ ಅಳವಡಿಸುವ ಯೋಜನೆ ಕೈಬಿಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಈ ವೇಳೆ ಜಿಲ್ಲಾ ಕಾರ್ಯಾಧ್ಯಕ್ಷ ಈರಣ್ಣ ಹುಬ್ಬಳ್ಳಿ, ಮಹಾದೇವ ಕಲಭಾಂವಿ, ಸುರೇಶ ಹೋಳಿ, ಶ್ರೀಪತಿ ಪಠಾಣಿ, ಮಲ್ಲಿಕಾರ್ಜುನ ದೇಸಾಯಿ, ಮಡಿವಾಳಪ್ಪ ಬುಳ್ಳಿ, ಸೋಮಲಿಂಗಪ್ಪ ಯಡ್ರಾವಿ, ಮನೋಜ ವಣ್ಣುರ, ಮೋಹನ ವಕ್ಕುಂದ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next